• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಎಫೆಕ್ಟ್‌: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನ 9,000 ಟ್ರೈನಿಗಳು ಮನೆಗಳಿಗೆ ಸ್ಥಳಾಂತರ

|
Google Oneindia Kannada News

ಮೈಸೂರು, ಜೂನ್ 29: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಐಟಿ ಕಂಪನಿಗಳು ವರ್ಕ್ ಫ್ರಮ್‌ ಹೋಮ್ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದೇ ಸಾಲಿಗೆ ಇನ್ಫೋಸಿಸ್ ಮೈಸೂರು ವಸತಿ ಆವರಣದಲ್ಲಿನ ಸುಮಾರು 9,000 ಟ್ರೈನಿಗಳು ಮತ್ತು ಇಂಟರ್ನಿಗಳು ತಮ್ಮ ತಮ್ಮ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ.

   SSLC ಪರೀಕ್ಷೆ ನಡೆಸಿದ್ದು ಏಕೆ ಎಂದು ಹೇಳಿದ ರೇಣುಕಾಚಾರ್ಯ | Renukacharya | Oneindia Kannada

   ಈ ಕುರಿತು ಮಾತನಾಡಿರುವ ಅಧ್ಯಕ್ಷ ನಂದನ್ ನಿಲೇಕಣಿ ಕಂಪನಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

   ಸೆಲೊನಿಸ್ ಜೊತೆ ಕೈ ಜೋಡಿಸಿದ ಇನ್ಫೋಸಿಸ್ಸೆಲೊನಿಸ್ ಜೊತೆ ಕೈ ಜೋಡಿಸಿದ ಇನ್ಫೋಸಿಸ್

   ಡಿಜಿಟಲ್ ತಂತ್ರಜ್ಞಾನದ ಮೂಲಕ ಟ್ರೈನಿಂಗ್

   ಡಿಜಿಟಲ್ ತಂತ್ರಜ್ಞಾನದ ಮೂಲಕ ಟ್ರೈನಿಂಗ್

   ಇನ್ಫೋಸಿಸ್ ಪ್ರತಿ ವರ್ಷವು ಸಾವಿರಾರು ಸಂಖ್ಯೆಯಲ್ಲಿ ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುತ್ತದೆ. ಹೀಗೆ ನೇಮಕ ಮಾಡಿಕೊಂಡ ಉದ್ಯೋಗಿಗಳನ್ನು ಕರ್ನಾಟಕದ ಮೈಸೂರಿನಲ್ಲಿರುವ ಇನ್ಪೋಸಿಸ್ ಕ್ಯಾಂಪಸ್‌ನಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ಕ್ಯಾಂಪಸ್‌ನಲ್ಲಿ ವಸತಿ ಸೇರಿದಂತೆ ಎಲ್ಲಾ ಸೌಲಭ್ಯವಿದ್ದು, ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.

   ಆದರೆ ಸದ್ಯ ಎಲ್ಲೆಡೆ ಕೊರೊನಾವೈರಸ್ ಭಯವಿರುವುದರಿಂದ ಈ ಉದ್ಯೋಗಿಗಳನ್ನು ಅವರವರ ಊರುಗಳಿಗೆ ಸ್ಥಳಾಂತರ ಮಾಡಲಾಗಿದೆ.

   "ಮೈಸೂರಿನಲ್ಲಿ, ನಮ್ಮ ವಸತಿ ಜಾಗತಿಕ ತರಬೇತಿ ಕೇಂದ್ರದಿಂದ 9,000 ಕ್ಕೂ ಹೆಚ್ಚು ಟ್ರೈನಿಗಳು ಮತ್ತು ಇಂಟರ್ನಿಗಳು ತಮ್ಮ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ಫೋಸಿಸ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ತರಬೇತಿಯನ್ನು ಮುಂದುವರಿಸಲು ಅವರಿಗೆ ಅನುವು ಮಾಡಿಕೊಡುತ್ತದೆ" ಎಂದು ನಿಲೇಕಣಿ ಹೇಳಿದರು.

   ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿದ್ದ ಈ ಟ್ರೈನಿಗಳು ಮತ್ತು ಇಂಟರ್ನಿಗಳು ಇದೀಗ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ.

   ಭಾರತದಾದ್ಯಂತ ಕ್ಯಾಂಪಸ್‌ಗಳಿಂದ 19,000 ಕಾಲೇಜು ಪದವೀಧರರ ಆಯ್ಕೆ

   ಭಾರತದಾದ್ಯಂತ ಕ್ಯಾಂಪಸ್‌ಗಳಿಂದ 19,000 ಕಾಲೇಜು ಪದವೀಧರರ ಆಯ್ಕೆ

   ಈ ಮೊದಲೇ ತಿಳಿಸಿದಂತೆ ಇನ್ಫೋಸಿಸ್ ಪ್ರತಿ ವರ್ಷ ದೇಶಾದ್ಯಂತ ವಿವಿಧ ಕ್ಯಾಂಪಸ್‌ಗಳಿಂದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಳ್ಳುತ್ತದೆ. ಹಾಗೆಯೇ ಈ ಬಾರಿ

   ಭಾರತದಾದ್ಯಂತ ಕ್ಯಾಂಪಸ್‌ಗಳಿಂದ 19,000 ಕಾಲೇಜು ಪದವೀಧರರನ್ನು ನೇಮಿಸಿಕೊಂಡಿದೆ.

   ಕೊವಿಡ್ 19 ನಡುವೆ ಕ್ಯಾಂಪಸ್ ಸಂದರ್ಶನ, ಇನ್ಫಿಯಿಂದ ಆಫರ್ಕೊವಿಡ್ 19 ನಡುವೆ ಕ್ಯಾಂಪಸ್ ಸಂದರ್ಶನ, ಇನ್ಫಿಯಿಂದ ಆಫರ್

   ಹೂಡಿಕೆಯ ವೇಗ ಹೆಚ್ಚಿಸಿರುವ ಇನ್ಫೋಸಿಸ್

   ಹೂಡಿಕೆಯ ವೇಗ ಹೆಚ್ಚಿಸಿರುವ ಇನ್ಫೋಸಿಸ್

   ದೇಶದ ಎರಡನೇ ಬಹುದೊಡ್ಡ ಐಟಿ ಉದ್ಯಮ ಸಂಸ್ಥೆಯಾದ ಇನ್ಫೋಸಿಸ್, ತನ್ನ ಹೂಡಿಕೆಯನ್ನು ವಿಸ್ತರಿಸಿದ್ದು, ಸೇವೆಯನ್ನು ಕೂಡ ಹೆಚ್ಚಿಸುತ್ತಾ ಬಂದಿದೆ. ಕೊರೊನಾವೈರಸ್ ಬಿಕ್ಕಟ್ಟಿನ ಸಮಯದಲ್ಲೂ ಬೇಡಿಕೆ ಇರುವುದರಿಂದ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುವುದನ್ನು ನಿಲ್ಲಿಸಿಲ್ಲ.

   ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, "ಕಳೆದ ಕೆಲವು ವರ್ಷಗಳಿಂದ, ನಾವು ಮಾಡುವ ಎಲ್ಲದರಲ್ಲೂ ಚುರುಕುತನ ಮತ್ತು ವೇಗವನ್ನು ತರುವಾಗ, ಇನ್ಫೋಸಿಸ್ ಅನ್ನು ಬಲವಾದ ಮತ್ತು ಹೆಚ್ಚು ಚೇತರಿಸಿಕೊಳ್ಳುವಲ್ಲಿ ನಾವು ದೊಡ್ಡ ಹೂಡಿಕೆಗಳನ್ನು ಮಾಡಿದ್ದೇವೆ" ಎಂದು ಹೇಳಿದರು. "ಹೂಡಿಕೆಗಳು ನಮ್ಮನ್ನು ಉತ್ತಮವಾಗಿ ಇರಿಸಿಕೊಂಡಿವೆ ಮತ್ತು ನಾವು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸುತ್ತಿರುವ ರೀತಿಯಲ್ಲಿ ಇದನ್ನು ತೋರಿಸಲಾಗಿದೆ" ಎಂದು ಅವರು ಹೇಳಿದರು.

   ಕಂಪನಿಯ ದೃಢವಾದ ವ್ಯವಸ್ಥೆಯು ಬಿಕ್ಕಟ್ಟನ್ನು ಎದುರಿಸಲಿದೆ.

   ಕಂಪನಿಯ ದೃಢವಾದ ವ್ಯವಸ್ಥೆಯು ಬಿಕ್ಕಟ್ಟನ್ನು ಎದುರಿಸಲಿದೆ.

   ಅಸಾಧಾರಣ ಮತ್ತು ಅಭೂತಪೂರ್ವ ಸಾಂಕ್ರಾಮಿಕವು ದೇಶದ ಎಲ್ಲಾ ವ್ಯವಹಾರ ಮತ್ತು ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ ಎಂದು ಗಮನಿಸಿದ ಅವರು, ಒಂದು ದೊಡ್ಡ ಕಂಪನಿಯ ಪ್ರಮಾಣ, ಬ್ರ್ಯಾಂಡ್ ಮತ್ತು ಸಂಬಂಧಗಳನ್ನು ಪ್ರಾರಂಭಿಸುವ ಮೂಲಕ ತ್ವರಿತ ಸ್ಪಂದಿಸುವಿಕೆ ಮತ್ತು ಚುರುಕುತನದೊಂದಿಗೆ ಕಂಪನಿಯು ಜಾಗತಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

   "ನಮ್ಮ ದೃಢ ವಾದ ಬ್ಯಾಲೆನ್ಸ್ ಶೀಟ್, ಸ್ಥಿರ ಬೆಳವಣಿಗೆಯ ವೇಗ, ನಮ್ಮ ಜನರಿಗೆ ಡಿಜಿಟಲ್ ವ್ಯವಸ್ಥೆಗಳು, ಮತ್ತು ನಮ್ಮ ಕಾರ್ಯಕಾರಿ ತಂಡವು ಕಾರ್ಯತಂತ್ರ ಕಾರ್ಯಗತಗೊಳಿಸುವಿಕೆಯತ್ತ ಗಮನ ಹರಿಸುವುದರಿಂದ ನಮಗೆ ಸ್ಪಷ್ಟವಾಗಿ ಕೆಲಸ ಮಾಡುವ ಅನುಕೂಲಗಳು ಸಾಧ್ಯ'' ಎಂದು ಅವರು ಹೇಳಿದರು.

   2020ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 9.5 ರು. ಲಾಭಾಂಶ

   2020ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 9.5 ರು. ಲಾಭಾಂಶ

   2020 ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 9.5 ರುಪಾಯಿ ಅಂತಿಮ ಲಾಭಾಂಶವನ್ನು(ಡಿವಿಂಡೆಂಟ್) ನೀಡಲು ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ ಮತ್ತು ಒಟ್ಟಾರೆ ಆದಾಯವು ನಿರಂತರ ಕರೆನ್ಸಿ ಪರಿಭಾಷೆಯಲ್ಲಿ 9.8% ರಷ್ಟು ಹೆಚ್ಚಾಗಿದೆ. 2019 ರ ಒಟ್ಟು ಲಾಭಾಂಶ ಪಾವತಿಯು, 8,120 ಕೋಟಿ ಆಗಿದ್ದರೆ, ಪ್ರತಿ ಷೇರಿನ ಕಂಪನಿಯ ಗಳಿಕೆ 2019 ರಲ್ಲಿ ಯುಎಸ್ ಡಾಲರ್ ಪರಿಭಾಷೆಯಲ್ಲಿ 8.3% ರಷ್ಟು ಹೆಚ್ಚಾಗಿದೆ.


   2020 ರ ಆರ್ಥಿಕ ಅವಧಿಯಲ್ಲಿ, ಒಟ್ಟಾರೆ ಆದಾಯವು 12.8 ಬಿಲಿಯನ್ ಸ್ಥಿರ ಕರೆನ್ಸಿಯಲ್ಲಿ 9.8% ನಷ್ಟು ಹೆಚ್ಚಾಗಿದೆ.

   English summary
   Due to the coronavirus pandemic about 9,000 trainees and interns at Infosys' Mysuru residential campus have relocated to their homes, chairman Nandan Nilekani said on Saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X