• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!

|

ವಿಶ್ವಸಂಸ್ಥೆ, ಏಪ್ರಿಲ್ 9: ಕೊರೊನಾವೈರಸ್ ಹೊಡೆತಕ್ಕೆ ಸಿಲುಕಿ ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರಲ್ಲೂ ಅಸಂಘಟಿತ ವಲಯದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಿದೆ. ಈ ವಲಯದ 40ಕೋಟಿ ಕಾರ್ಮಿಕರು ಮತ್ತಷ್ಟು ಬಡತನಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆಯ ಕಾರ್ಮಿಕ ಸಂಘಟನೆ ಎಚ್ಚರಿಕೆ ಗಂಟೆ ಬಾರಿಸಿದೆ.

ಕೊರೊನಾ ವೈರಸ್ ಕುರಿತ ಎರಡನೇ ವರದಿ ಪ್ರಕಟಿಸಿರುವ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಒ.), ಎರಡನೇ ಮಹಾಯುದ್ಧದ ನಂತರ ಅತಿ ದೊಡ್ಡ ಜಾಗತಿಕ ಬಿಕ್ಕಟ್ಟು ಈಗ ಕೊರೊನಾವೈರಸ್ ನಿಂದ ಉಂಟಾಗಿದೆ ಎಂದು ಹೇಳಿದೆ.

ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

ಕಾರ್ಮಿಕರು ಹಾಗೂ ಉದ್ಯಮಿಗಳು ಅನಾಹುತವನ್ನು ಎದುರಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ದೇಶಗಳೆರಡರಲ್ಲೂ ಸಮಸ್ಯೆ ಉಂಟಾಗಿದೆ. ನಾವೀಗ ವೇಗವಾಗಿ, ನಿರ್ಣಾಯಕವಾಗಿ ಹಾಗೂ ಸಂಘಟಿತವಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ತುರ್ತು ಕ್ರಮಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಪತನ ತಪ್ಪಿಸುವಲ್ಲಿ ಮಹತ್ವದ್ದಾಗಿದೆ ಎಂದು ಐ.ಎಲ್.ಒ. ಪ್ರಧಾನ ನಿರ್ದೇಶಕಗೇ ರೈಡರ್ ಹೇಳಿದ್ದಾರೆ.

ನೂರಾರು ಕೋಟಿ ಅಸಂಘಟಿತ ವಲಯದ ಕಾರ್ಮಿಕರು

ನೂರಾರು ಕೋಟಿ ಅಸಂಘಟಿತ ವಲಯದ ಕಾರ್ಮಿಕರು

ವಿಶ್ವದಾದ್ಯಂತ ನೂರಾರು ಕೋಟಿ ಜನರು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿದ್ದು, ಅವರಿಗೆ ಅಪಾಯ ಹೆಚ್ಚಾಗಿದೆ. ಕೊರೊನಾ ಈಗಾಗಲೇ ಕೋಟಿಗಟ್ಟಲೆ ಅನೌಪಚಾರಿಕ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ರೈಡರ್ ತಿಳಿಸಿದರು.

ಭಾರತ ಹಾಗೂ ಬ್ರೆಜಿಲ್ ಕಾರ್ಮಿಕರಿಗೆ ಕಷ್ಟ

ಭಾರತ ಹಾಗೂ ಬ್ರೆಜಿಲ್ ಕಾರ್ಮಿಕರಿಗೆ ಕಷ್ಟ

ಭಾರತ, ನೈಜೀರಿಯಾ ಹಾಗೂ ಬ್ರೆಜಿಲ್ ಗಳಲ್ಲಿರುವ ಸಾಕಷ್ಟು ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಲಾಕ್ಡೌನ್ ಹಾಗೂ ಇತರೆ ಕ್ರಮಗಳು ಪರಿಣಾಮ ಬೀರಿವೆ. ಭಾರತದಲ್ಲಿ ಶೇ.90ರಷ್ಟು ಕಾರ್ಮಿಕರು ಅನೌಪಚಾರಿಕ ಲಯದಲ್ಲಿದ್ದಾರೆ. ಈ ವಲಯದ 40 ಕೋಟಿ ಜನರು ಮತ್ತಷ್ಟು ಬಡತನಕ್ಕೆ ಕುಸಿಯುವ ಅಪಾಯದಲ್ಲಿದ್ದಾರೆ ಎಂದು ಐ.ಎಲ್.ಒ. ವರದಿಯಲ್ಲಿ ಹೇಳಲಾಗಿದೆ.

"ಊರಿಗೆ ಹೋದ್ರೆ ಕೊರೊನಾ ಕೊಲ್ಲಬಹುದು, ಇಲ್ಲೇ ಇದ್ರೆ ಹಸಿವಿನಿಂದ ಸಾಯ್ತೀವಿ"

195 ದಶಲಕ್ಷ ಉದ್ಯೋಗ ಕಡಿತ

195 ದಶಲಕ್ಷ ಉದ್ಯೋಗ ಕಡಿತ

ಕೊರೊನಾ ವೈರಸ್ ಕಾರಣದಿಂದಾಗಿ ಈ ವರ್ಷದ 2 ತ್ರೈಮಾಸಿಕ ಅವಧಿಯಲ್ಲಿ ವಿಶ್ವದಾದ್ಯಂತ ಶೇ.6.7ರಷ್ಟು ಮಾನವದಿನಗಳು(working hours) ನಾಶವಾಗಲಿವೆ. ಇದರಿಂದ ವಿಶ್ವದಾದ್ಯಂತ 195 ದಶಲಕ್ಷ ಉದ್ಯೋಗಗಳ ಮೇಲೆ ಪರಿಣಾಮವಾಗಲಿದೆ, ಈ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಅಂತಾರಾಷ್ಟ್ರೀಯ ಸಹಕಾರಕ್ಕೆ ಅತಿ ದೊಡ್ಡ ಪರೀಕ್ಷೆ

ಅಂತಾರಾಷ್ಟ್ರೀಯ ಸಹಕಾರಕ್ಕೆ ಅತಿ ದೊಡ್ಡ ಪರೀಕ್ಷೆ

ಇದು ಅಂತಾರಾಷ್ಟ್ರೀಯ ಸಹಕಾರಕ್ಕೆ ಅತಿ ದೊಡ್ಡ ಪರೀಕ್ಷೆಯಾಗಿದೆ. ದೇಶವೊಂದು ವಿಫಲವಾದರೆ, ನಾವೆಲ್ಲರೂ ವಿಫಲವಾದಂತೆ. ಜಗತ್ತಿನ ಎಲ್ಲ ಸಮಾಜಗಳ ನೆರವಿಗಾಗಿ ನಾವು ಕ್ರಮ ತೆಗೆದುಕೊಳ್ಳಬೇಕಿದೆ. ವಿಶೇಷವಾಗಿ ದುರ್ಬಲವಾಗಿರುವ ಹಾಗೂ ಅಸಹಾಯಕರಾಗಿರುವವರಿಗೆ ನೆರವು ಕಲ್ಪಿಸಬೇಕಿದೆ ಎಂದವರು ಸಂಘಟನೆ ಹೇಳಿದೆ.

ಯಾವ ಯಾವ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ

ಯಾವ ಯಾವ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ

ಅರಬ್ ವಲಯದಲ್ಲಿ ಶೇ.8.1, ಯುರೋಪ್ ವಲಯದಲ್ಲಿ ಶೇ.7.8 ಹಾಗೂ ಏಷಿಯಾದಲ್ಲಿ ಶೇ.7.2ರಷ್ಟು ಪೂರ್ಣ ಕಾಲಿಕ ಹುದ್ದೆಗಳು ಕಡಿತವಾಗಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ವಸತಿ, ಆಹಾರ ಸೇವೆ, ಉತ್ಪಾದನಾ ವಲಯ, ಚಿಲ್ಲರೆ, ಔದ್ಯಮಿಕ ಹಾಗೂ ಆಡಳಿ ತಾತ್ಮಕ ಸೇವೆಗಳಿಂದ ಹೆಚ್ಚಿನ ಪರಿಣಾಮವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

English summary
About 400 million people working in the informal economy in India are at risk of falling deeper into poverty due to the coronavirus crisis which is having 'catastrophic consequences'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X