ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಂತರ ಅಕಾಲಿಕ ಮಳೆ: ದಕ್ಷಿಣ ಭಾರತದಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ಕಳೆದ ತಿಂಗಳಿನಿಂದ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಟೊಮೆಟೊ ಬೆಲೆ ಗಗನಕ್ಕೇರಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಟೊಮೆಟೊ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 140 ರೂ. ಏರಿಕೆಯಾಗಿದೆ. ಭಾರತದಲ್ಲಿನ ಮಾರುಕಟ್ಟೆಯಾದ್ಯಂತ ಸೆಪ್ಟೆಂಬರ್ ಅಂತ್ಯದಿಂದ ಟೊಮೆಟೊ ಬೆಲೆಗಳು ಗಗನಮುಖಿಯಾಗಿವೆ. ನವೆಂಬರ್‌ನಲ್ಲಿ ನಿರಂತರ ಮಳೆಯಿಂದಾಗಿ ಕೆಲವು ದಕ್ಷಿಣ ಪ್ರದೇಶಗಳಲ್ಲಿ ಬೆಲೆಗಳ ಏರಿಕೆಯಾಗಿದೆ.

ದೇಶದ ಇತರೆಡೆಗಳಲ್ಲಿ ಸರಕುಗಳ ಬೆಲೆ ಉತ್ತರದ ರಾಜ್ಯಗಳಲ್ಲಿ 30 ರೂಪಾಯಿಯಿಂದ 85 ರೂಪಾಯಿ ನಡುವೆ ಇದೆ. ಪಶ್ಚಿಮ ಪ್ರದೇಶಗಳಲ್ಲಿ 30 ರೂ.ಯಿಂದ 85 ರೂ. ಮತ್ತು ಪೂರ್ವದಲ್ಲಿ 39 ರೂ.ಯಿಂದ 80 ರೂಪಾಯಿಯ ನಡುವೆ ಇದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತೋರಿಸುತ್ತವೆ. ಕಳೆದ ಎರಡು ವಾರಗಳಿಂದ ಟೊಮೆಟೊದ ಅಖಿಲ-ಭಾರತದ ಸರಾಸರಿ ಮಾದರಿ ಬೆಲೆಯು 60ರೂ.ಗೆ ಕೆಜಿಗಳ ಹೆಚ್ಚಿನ ಮಾರ್ಕ್‌ನಲ್ಲಿ ಮುಂದುವರಿದಿದೆ.

ಸೋಮವಾರ ಟೊಮೆಟೊ ಬೆಲೆಗಳು ಮಾಯಾಬಂದರ್‌ನಲ್ಲಿ ಕೆಜಿಗೆ 140 ರೂ. ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿ ಕೆಜಿಗೆ 127 ರೂ. ಕೇರಳದಲ್ಲಿ ಸೋಮವಾರ ಟೊಮೇಟೊ ಕೆಜಿಗೆ 125 ರೂ., ಪಾಲಕ್ಕಾಡ್ ಮತ್ತು ವಯನಾಡಿನಲ್ಲಿ ಕೆಜಿಗೆ 105 ರೂ., ತ್ರಿಶೂರ್‌ನಲ್ಲಿ ಕೆಜಿಗೆ 94 ರೂ., ಕೋಝಿಕ್ಕೋಡ್‌ನಲ್ಲಿ ಕೆಜಿಗೆ 91 ರೂ. ಮತ್ತು ಕೊಟ್ಟಾಯಂನಲ್ಲಿ 83 ರೂ. ಇದೆ.

Continuous Rain: Tomato prices skyrocketing in the south

ಕರ್ನಾಟಕದಲ್ಲಿ ಪ್ರಮುಖ ಅಡುಗೆ ತರಕಾರಿ ಟೊಮೊಟೊ ಬೆಲೆ ಮಂಗಳೂರು ಮತ್ತು ತುಮಕೂರಿನಲ್ಲಿ ಕೆಜಿಗೆ 100 ರೂ., ಧಾರವಾಡದಲ್ಲಿ ಕೆಜಿಗೆ 75 ರೂ., ಮೈಸೂರಿನಲ್ಲಿ ಕೆಜಿಗೆ 74 ರೂ., ಶಿವಮೊಗ್ಗದಲ್ಲಿ ಕೆಜಿಗೆ 67 ರೂ., ದಾವಣಗೆರೆಯಲ್ಲಿ ಕೆಜಿಗೆ 64 ರೂ. ಮತ್ತು ಬೆಂಗಳೂರಿನಲ್ಲಿ ಕೆಜಿಗೆ 57 ರೂ. ಇದೆ.

ತಮಿಳುನಾಡಿನಲ್ಲೂ ಸೋಮವಾರ ರಾಮನಾಥಪುರದಲ್ಲಿ ಟೊಮೆಟೊ ಕೆಜಿಗೆ 102 ರೂ., ತಿರುನಲ್ವೇಲಿಯಲ್ಲಿ 92 ರೂ., ಕಡಲೂರಿನಲ್ಲಿ ಕೆಜಿಗೆ 87 ರೂ., ಚೆನ್ನೈನಲ್ಲಿ 83 ರೂ. ಮತ್ತು ಧರ್ಮಪುರಿಯಲ್ಲಿ ಕೆಜಿಗೆ 75 ರೂ., ಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣಂನಲ್ಲಿ ಟೊಮೇಟೊ ಬೆಲೆ ಕೆಜಿಗೆ 77 ರೂ., ತಿರುಪತಿಯಲ್ಲಿ 72 ರೂ.ಗೆ ಮಾರಾಟವಾಗಿದ್ದರೆ, ತೆಲಂಗಾಣದಲ್ಲಿ ವಾರಂಗಲ್‌ನಲ್ಲಿ ಟೊಮ್ಯಾಟೊ ಕೆಜಿಗೆ 85 ರೂ. ಪುದುಚೇರಿಯಲ್ಲಿ ಕೆಜಿಗೆ 85 ರೂ. ಆಗಿದೆ.

ಇನ್ನೂ ಮೆಟ್ರೋ ನಗರಗಳಲ್ಲಿ ಸೋಮವಾರ ಟೊಮೆಟೋ ಬೆಲೆ ಹೀಗಿತ್ತು. ಮುಂಬೈನಲ್ಲಿ ಟೊಮೇಟೊ ಕೆಜಿಗೆ 55 ರೂ., ದೆಹಲಿಯಲ್ಲಿ 56 ರೂ., ಕೋಲ್ಕತ್ತಾದಲ್ಲಿ ಕೆಜಿಗೆ 78 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 83 ರೂ. ಇದೆ.

ನವೆಂಬರ್ 26 ರಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ಉತ್ತರ ರಾಜ್ಯಗಳಿಂದ ತಾಜಾ ಬೆಳೆಗಳ ಆಗಮನದೊಂದಿಗೆ ಡಿಸೆಂಬರ್‌ನಿಂದ ಟೊಮೆಟೊ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಮತ್ತು ರಾಜ್ಯಗಳಿಂದ ಆಗಮನ ವಿಳಂಬವಾಗಿ ಸೆಪ್ಟೆಂಬರ್ ಅಂತ್ಯದಿಂದ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಮತ್ತು ಬೆಳೆ ಹಾನಿಯಾಗಿದೆ. ಪೂರೈಕೆ ಸರಪಳಿಯಲ್ಲಿ ಯಾವುದೇ ಸ್ವಲ್ಪ ಅಡಚಣೆ ಅಥವಾ ಅಧಿಕ ಮಳೆಯಾಗಿ ಬೆಳೆ ಹಾನಿಯಾದರೆ ಟೊಮೆಟೊ ಬೆಲೆಯಲ್ಲಿ ಏರಿಕೆಗೆ ಕಾರಣವಾಗುತ್ತದೆ. ಕೃಷಿ ಸಚಿವಾಲಯದ ಪ್ರಕಾರ, ಪ್ರಸಕ್ತ ವರ್ಷ ಖಾರಿಫ್ (ಬೇಸಿಗೆ) ಟೊಮೆಟೊ ಉತ್ಪಾದನೆಯು ಕಳೆದ ವರ್ಷ 70.12 ಲಕ್ಷ ಟನ್‌ಗೆ ಹೋಲಿಸಿದರೆ 69.52 ಲಕ್ಷ ಟನ್ ಆಗಿದೆ.

Recommended Video

ಮೈದಾನದಲ್ಲಿ ಅಂಪೈರ್ ಗೆ ಗೇಲಿ ಮಾಡಿದ ವಿರಾಟ್ | Oneindia Kannada

English summary
Heavy rains lashing across southern states in the bygone month have resulted in skyrocketing prices of tomatoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X