ಅಪಮೌಲ್ಯೀಕರಣ: ಅಸಂಘಟಿತ ವ್ಯಾಪಾರಿಗಳಿಗೆ ಪೆಟ್ಟು

Posted By:
Subscribe to Oneindia Kannada

ನವದೆಹಲಿ, ಜನವರಿ 11: ಕೇಂದ್ರ ಸರ್ಕಾರ ಕೈಗೊಂಡ ಅಪನಗದೀಕರಣ ನಿರ್ಧಾರದಿಂದ ಜನಸಾಮಾನ್ಯರ ಜತೆಗೆ ಕಟ್ಟಡ ನಿರ್ಮಾಣ ರಂಗ ಹಾಗೂ ಅಸಂಘಟಿತ ವ್ಯಾಪಾರಿಗಳಿಗೂ ಬಿಸಿ ತಟ್ಟಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ (ಎಸ್ ಬಿಐ) ಆರ್ಥಿಕ ಸಂಶೋಧನಾ ವಿಭಾಗ ಕೈಗೊಂಡಿದ್ದ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಕಳೆದ ತಿಂಗಳ 30ರಿಂದ ಜನವರಿ 3ರವರೆಗೆ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಶೇ. 63ರಷ್ಟು ವ್ಯಾಪಾರಿಗಳು ಕೇಂದ್ರ ಸರ್ಕಾರದ ಆದೇಶವನ್ನು ಸ್ವಾಗತಿಸಿದ್ದಾರೆ. ವ್ಯಾಪಾರಿ ವಲಯದಿಂದ ಈ ರೀತಿಯ ಬೆಂಬಲ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರದ ನಿರ್ಧಾರವು ಕೆಲ ಸಣ್ಣ, ಮಧ್ಯಮ ಪ್ರಮಾಣದ ವ್ಯಾಪಾರಿಗಳ ನಿದ್ದೆಗೆಡಿಸಿದ್ದಂತೂ ಸತ್ಯವೆಂದು ಸಮೀಕ್ಷಾ ವರದಿ ಹೇಳಿದೆ.[ಅಪನಗದೀಕರಣ ಪೂರ್ವ ಬ್ಯಾಂಕ್ ವ್ಯವಹಾರಗಳ ಮೇಲೆ ತೆರಿಗೆ ಇಲಾಖೆ ಕಣ್ಣು]

Construction sector, road-side vendors worst hit by demonetisation, claims SBI survey.

ಈ ರೀತಿ ತೊಂದರೆಗೊಳಗಾದ ಪ್ರಮುಖವಾದ ಕ್ಷೇತ್ರಗಳೆಂದರೆ, ಕಟ್ಟಡ ನಿರ್ಮಾಣ ರಂಗ ಹಾಗೂ ಬೀದಿಬದಿಯ ವ್ಯಾಪಾರಿಗಳುಳ್ಳ ಅಸಂಘಟಿತ ವಹಿವಾಟು ರಂಗ.

ಇನ್ನುಳಿದಂತೆ, ಜವಳಿ ವ್ಯಾಪಾರಗಳು, ಸಗಟು ಮಾರಾಟಗಾರರು, ಆಟೋಮೊಬೈಲ್ ಉದ್ದಿಮೆ ಹೊಂದಿರುವವರು, ಮೆಡಿಕಲ್ ಶಾಪ್ ಮಾಲೀಕರು ಸಹ ತೊಂದರೆಗೊಳಗಾಗಿದ್ದರೆಂದು ವರದಿಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A survey conducted by SBI reveals that construction sector and the unorganized sector has suffered a lot because of demonetisation.
Please Wait while comments are loading...