ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ದಾಳಿ ನಂತರ ಭಾರಿ ಕುಸಿತ ಕಂಡ ಕಾಫಿ ಡೇ ಷೇರು

By Mahesh
|
Google Oneindia Kannada News

ಬೆಂಗಳೂರು, ಸೆ. 21: ವಿ.ಜಿ ಸಿದ್ದಾರ್ಥ ಅವರ ಒಡೆತನದ ಎಬಿಸಿಎಲ್ ಒಡೆತನದ ಕೆಫೆ ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರದಂದು ದಾಳಿ ನಡೆಸಿ, ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಕಾಫಿಡೇ ಷೇರುಗಳು ಭಾರಿ ಕುಸಿತ ಕಂಡಿವೆ.

ಡಿಕೆಶಿ ಆಪ್ತನ ಮೇಲಿನ ಐಟಿ ರೈಡ್ ಗೆ ಇಂದಿನ ಕಾಫಿ ಡೇ ರೇಡ್ ಲಿಂಕ್ ಡಿಕೆಶಿ ಆಪ್ತನ ಮೇಲಿನ ಐಟಿ ರೈಡ್ ಗೆ ಇಂದಿನ ಕಾಫಿ ಡೇ ರೇಡ್ ಲಿಂಕ್

ಬೆಂಗಳೂರು ಮತ್ತು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು, ಮೂಡಿಗೆರೆ, ಚೆನ್ನೈ, ಮುಂಬೈ ಸೇರಿದಂತೆ 24 ಕಡೆಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಜಾರಿಯಲ್ಲಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ ವಿ.ಜಿ ಸಿದ್ದಾರ್ಥ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಮಾಲ್ಗಮೇಟೆಡ್ ಬಿನ್ ಕಾಫಿ ಲಿಮಿಟೆಡ್ ಸಂಸ್ಥೆಯ ಕೆಫೆ ಕಾಫಿ ಡೇ ಮಳಿಗೆ, ಮುಖ್ಯ ಕಚೇರಿ, ಸೆರಾಯ್ ರೆಸಾರ್ಟ್, ಸಿದ್ದಾರ್ಥ ಅವರ ತಂದೆ ಗಂಗ್ಗಯ್ಯ ಹೆಗ್ಗಡೆ ಹಾಗೂ ತಾಯಿ ವಾಸಂತಿ ವಾಸವಿರುವ ಚೇತನಹಳ್ಳಿ ಎಸ್ಟೇಟ್ ಸೇರಿದಂತೆ ಅನೇಕ ಕಡೆ ದಾಖಲೆ ಪರಿಶೀಲನೆ ನಡೆದಿದೆ. ಷೇರುಪೇಟೆಯಲ್ಲಿ ಕುಸಿತ ಇನ್ನಷ್ಟು ವಿವರ ಮುಂದಿದೆ...

ಕಾಫಿ ಡೇ ಷೇರುಗಳು ಇಂಟ್ರಾ ಡೇ

ಕಾಫಿ ಡೇ ಷೇರುಗಳು ಇಂಟ್ರಾ ಡೇ

ಐಟಿ ದಾಳಿ ನಂತರ ಕೆಫೆ ಕಾಫಿ ಡೇ ಷೇರುಗಳು ಇಂಟ್ರಾ ಡೇ ಹೊತ್ತಿಗೆ ಶೇ 7.5ರಷ್ಟು ಕುಸಿತ ಕಂಡಿವೆ. ಬೆಳಗ್ಗೆ 9.36ರ ವೇಳೆಗೆ 232 ರು ಮುಖಬೆಲೆಯಂತೆ ವಹಿವಾಟು ಆರಂಭಿಸಿದ ಷೇರುಗಳು 9.90 ರು ಕಳೆದುಕೊಂಡಿವೆ. ಮಧ್ಯಾಹ್ನ 12.25ರ ವೇಳೆಗೆ 232.50 ರು ಗೆ ಕುಸಿದಿದೆ. ಬಿಎಸ್ಇ ಹಾಗೂ ಎನ್ ಎಸ್ ಇನಲ್ಲಿ ಬಹುತೇಕ ಒಂದೇ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

ಮೈಂಡ್ ಟ್ರೀನಲ್ಲೂ ಹೂಡಿಕೆ

ಮೈಂಡ್ ಟ್ರೀನಲ್ಲೂ ಹೂಡಿಕೆ

ಬೆಂಗಳೂರು ಮೂಲದ ಸಾಫ್ಟ್ ವೇರ್ ಸಂಸ್ಥೆ ಮೈಂಡ್ ಟ್ರೀಯಲ್ಲೂ ವಿ.ಜಿ ಸಿದ್ದಾರ್ಥ ಅವರು ತಮ್ಮ ಪಾಲು ಹೊಂದಿದ್ದಾರೆ. ಮೈಂಡ್ ಟ್ರೀ ಷೇರುಗಳು ಶೇ2ರಷ್ಟು ಕುಸಿತ ಕಂಡಿವೆ. ಇತ್ತೀಚೆಗೆ ತಮ್ಮ ಪಾಲನ್ನು ಕಡಿಮೆಗೊಳಿಸಿ ಶೇ 3.25ಕ್ಕೆ ಇಳಿಸಿಕೊಂಡಿದ್ದರು. ಉಳಿದಂತೆ ಷೇರುಪೇಟೆಯಲ್ಲಿ ಕಾಫಿ ಡೇ ಭಾರಿ ವ್ಯವಹಾರ ನಡೆಸಿದ್ದು ತೀರಾ ಅಪರೂಪ, ಶೇ 60ಕ್ಕೂ ಅಧಿಕ ಮಂದಿ ತಮ್ಮ ಬಳಿಯ ಷೇರುಗಳನ್ನು ಮಾರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಷೇರು ಪೇಟೆ ತಜ್ಞರು ಹೇಳಿದ್ದಾರೆ.

ಷೇರು ಮಾರಾಟ

ಷೇರು ಮಾರಾಟ

10 ರೂ. ಮುಖ ಬೆಲೆಯ ಐಪಿಒ ಷೇರುಗಳು 2015ರ ಅಕ್ಟೋಬರ್ ನಿಂದ ಸಾರ್ವಜನಿಕರಿಗೆ ಲಭ್ಯವಾಗತೊಡಗಿತು. 10 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 316ರಿಂದ 328 ರೂ. ದರ ನಿಗದಿ ಪಡಿಸಲಾಗಿದೆ. ಹೂಡಿಕೆದಾರರು ಕನಿಷ್ಠ 45 ಈಕ್ವಿಟಿ ಷೇರು ಖರೀದಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಷೇರು ಮಾರಾಟ ಮೂಲಕ 1150 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕಾಫಿ ಡೇ ಹೊಂದಿತ್ತು.

ಷೇರುಗಳ ವಿವರ

ಷೇರುಗಳ ವಿವರ

ಕೆಫೆ ಕಾಫಿ ಡೇ ಕಂಪೆನಿಯ ಮುಖ್ಯ ಪ್ರವರ್ತಕ ವಿ.ಜಿ. ಸಿದ್ದಾರ್ಥ ಶೇ 54.78, ಕೆಕೆಆರ್‌ ಶೇ 3.43 ಮತ್ತು ನಂದನ್‌ ನಿಲೇಕಣಿ ಶೇ 1.77 ಷೇರು ಹೊಂದಿದ್ದಾರೆ. ಕೆಫೆ ಕಾಫಿ ಡೇ ತನ್ನ ಸಿಬ್ಬಂದಿಗಾಗಿ 15 ಕೋಟಿ ರು. ಮೌಲ್ಯದ ಷೇರುಗಳನ್ನು ಕಾಯ್ದಿರಿಸಿದೆ.1996 ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಕಂಪನಿ ಸದ್ಯ ದೇಶಾದ್ಯಂತ 2000 ಕ್ಕೂ ಅಧಿಕ ಶಾಖೆ ಹೊಂದಿದೆ.

English summary
Coffee Day Enterprises share price fell as much as 7.5 percent in morning on Thursday after a raid by Income Tax Department at Cafe Coffee Day's locations and its Chairman's residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X