ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆಗೆ ದಾಪುಗಾಲಿಟ್ಟ ಕೆಫೆ ಕಾಫಿ ಡೇ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 13: ಷೇರು ಮಾರುಕಟ್ಟೆಗೆ ಕೆಫೆ ಕಾಫಿ ಡೇ ದಾಪುಗಾಲಿಟ್ಟಿದೆ. ಅಕ್ಟೋಬರ್ 14ರಿಂದ ಕಾಫಿ ಡೇ ಷೇರು ಖರೀದಿಗೆ ಅವಕಾಶವಿದೆ. 10 ರೂ. ಮುಖ ಬೆಲೆಯ ಐಪಿಒ ಷೇರು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ವಿ.ಜಿ.ಸಿದ್ದಾರ್ಥ, 10 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 316ರಿಂದ 328 ರೂ. ದರ ನಿಗದಿ ಪಡಿಸಲಾಗಿದೆ. ಹೂಡಿಕೆದಾರರು ಕನಿಷ್ಠ 45 ಈಕ್ವಿಟಿ ಷೇರು ಖರೀದಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಷೇರು ಮಾರಾಟ ಮೂಲಕ 1150 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕಾಫಿ ಡೇ ಹೊಂದಿದೆ ಎಂದು ಹೇಳಿದರು.[ಕೆಫೆ ಕಾಫಿ ಡೇ vs ಟಾಟಾ ಸ್ಟಾರ್ ಬಕ್ಸ್ ಸಮರ]

Coffee Day Enterprises Fixes Rs 316-328 Price Band For IPO

ಮುಂದಿನ 5 ವರ್ಷದಲ್ಲಿ ಹೊಸದಾಗಿ 1000 ಕಾಫಿ ಡೇ ಸೆಂಟರ್, ಪ್ರಮುಖ ಹೆದ್ದಾರಿಗಳಲ್ಲಿ ಕೆಫೆ ಕಾಫಿ ಡೇ ಸೆಂಟರ್ ತೆರೆಯಲಾಗುವುದು. ದೇಶದ ಪ್ರಮುಖ 30 ನಗರಗಳಲ್ಲಿ 4ಜಿ ಸೇವೆಯ ಅತ್ಯಾಧುನಿಕ ಕಾಫಿ ಡೇ ಸೆಂಟರ್ ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು.['ಕೆಫೆ ಕಾಫಿ ಡೇ' ಎಂಬ ಅಪ್ಪಟ ಕನ್ನಡ ಬ್ರ್ಯಾಂಡ್]

ಕೆಫೆ ಕಾಫಿ ಡೇ ಕಂಪೆನಿಯ ಮುಖ್ಯ ಪ್ರವರ್ತಕ ವಿ.ಜಿ. ಸಿದ್ದಾರ್ಥ ಶೇ 54.78, ಕೆಕೆಆರ್‌ ಶೇ 3.43 ಮತ್ತು ನಂದನ್‌ ನಿಲೇಕಣಿ ಶೇ 1.77 ಷೇರು ಹೊಂದಿದ್ದಾರೆ. ಕೆಫೆ ಕಾಫಿ ಡೇ ತನ್ನ ಸಿಬ್ಬಂದಿಗಾಗಿ 15 ಕೋಟಿ ರು. ಮೌಲ್ಯದ ಷೇರುಗಳನ್ನು ಕಾಯ್ದಿರಿಸಿದೆ.1996 ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಕಂಪನಿ ಸದ್ಯ ದೇಶಾದ್ಯಂತ 1500 ಕ್ಕೂ ಅಧಿಕ ಶಾಖೆ ಹೊಂದಿದೆ.

English summary
Coffee shop chain operator Cafe Coffee Day Enterprises is believed to have fixed the price band at Rs 316-328 for its initial share sale. The operator of Cafe Coffee Day shops has filed papers with Sebi for an IPO to raise an estimated Rs 1,150 crore which would be the largest share sale this year so far. Sources said the price band for the IPO has been fixed at Rs 316-328 and the issue is expected to open on October 14. This would also be the largest initial share sale by any company so far this year, they added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X