ಬಾಹುಬಲಿ ದಾಖಲೆ ಮುರಿದ ಖೈದಿ ನಂ. 150

Posted By:
Subscribe to Oneindia Kannada

ಹೈದರಾಬಾದ್, ಜನವರಿ 12: ಬುಧವಾರವಷ್ಟೇ ಬಿಡುಗಡೆಯಾಗಿರುವ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಚಿತ್ರದ ಮೊದಲ ದಿನವೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ಚಿತ್ರ ಮೊದಲ ದಿನವೇ 24 ಕೋಟಿ ರು. ಬಾಚಿದೆ.

ಇದು, ಮೊದಲ ದಿನದಲ್ಲೇ ಅತ್ಯಧಿಕ ಮೊತ್ತ ಕಲೆಹಾಕುವ ಮೂಲಕ ತೆಲುಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ 'ಬಾಹುಬಲಿ' ಚಿತ್ರದ ಸಾಧನೆಯನ್ನು ಹಿಂದಿಕ್ಕಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬಾಹುಬಲಿ ಚಿತ್ರ ಮೊದಲ ದಿನ 22.4 ಕೋಟಿ ಕಲೆಕ್ಷನ್ ಮಾಡಿತ್ತು.

chiranjeevi-s-khaidi-no-1-breaks-the-record-bahubali-regarding-first-day-collection

ಇದಲ್ಲದೆ, ತೆಲುಗು ಚಿತ್ರರಂಗದಲ್ಲಿ ಈವರೆಗೆ ಭರ್ಜರಿ ಓಪನಿಂಗ್ ಕಂಡಿದ್ದ ಟಾಪ್ 6 ಸಿನಿಮಾಗಳನ್ನು ಖೈದಿ ನಂಬರ್ 1 ಚಿತ್ರ ಹಿಂದಿಕ್ಕಿದೆ. ಬಾಹುಬಲಿ (22.4 ಕೋಟಿ ರು.), ಸರ್ದಾರ್ ಗಬ್ಬರ್ ಸಿಂಗ್ (20.92 ಕೋಟಿ ರು.), ಜನತಾ ಗ್ಯಾರೇಜ್ (20.49 ಕೋಟಿ ರು.), ಶ್ರೀಮಂತುಡು (14.72 ಕೋಟಿ ರು.), ಸರೈನೋಡು (10.96 ಕೋಟಿ ರು.) ಚಿತ್ರಗಳನ್ನು ಖೈದಿ ನಂಬರ್ ಒನ್ ಚಿತ್ರ ಹಿಂದಿಕ್ಕಿದೆ.

ಹೀಗಾಗಿ, ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್, ಆಡಿಯೋ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಇತರ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ 103 ಕೋಟಿ ರು. ಗಳಿಸಿರುವ ಈ ಚಿತ್ರ, ಭರ್ಜರಿ ಕಲೆಕ್ಷನ್ ನತ್ತ ಹೆಜ್ಜೆ ಹಾಕುತ್ತಿರುವುದು ಸ್ಪಷ್ಟವಾಗಿದೆ.

ಇದಷ್ಟೇ ಅಲ್ಲದೆ, ಮೊದಲ ವಾರದ ಕಲೆಕ್ಷನ್ ಗಳನ್ನು ಈಗಲೇ ಚಿತ್ರೋದ್ಯಮದ ಪಂಡಿತರು ಲೆಕ್ಕಾ ಹಾಕುತ್ತಿದ್ದಾರೆ. ಮೊದಲ ವಾರಾಂತ್ಯಕ್ಕೆ ಈ ಚಿತ್ರವೇನಾದರೂ 73 ಕೋಟಿ ದಾಟಿದರೆ, ಅದೂ ಸಹ ಬಾಹುಬಲಿ ಚಿತ್ರದ ಮೊದಲ ವಾರದ ಕಲೆಕ್ಷನ್ ದಾಖಲೆ ಮೀರಲಿದೆ. ಬಾಹುಬಲಿ ಚಿತ್ರ ತನ್ನ ಮೊದಲ ವಾರದಲ್ಲಿ ಒಟ್ಟಾರೆಯಾಗಿ 73 ಕೋಟಿ ರು. ಗಳಿಸಿತ್ತು.

ಇನ್ನು, ಅಮೆರಿಕದಲ್ಲಿ ಮಂಗಳವಾರ ಈ ಚಿತ್ರದ ಪ್ರೀಮಿಯರ್ ಶೋ ನಡೆಸಲಾಗಿದ್ದು ಅದರಲ್ಲಿ ಈ ಚಿತ್ರ 8.56 ಕೋಟಿ ರು. ಬಾಚಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telugu super star Chiranjeevi's 150th movie Khaidi No. 1 has grabbed Rs. 24 cross across Andrapradesh and Telangana to break the record of Bahubali which had collected Rs. 22.4 crore.
Please Wait while comments are loading...