ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ನಾಪತ್ತೆ?

|
Google Oneindia Kannada News

ಬೀಜಿಂಗ್, ಜನವರಿ 04: ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಕಳೆದ ಎರಡು ತಿಂಗಳುಗಳಿಂದ ಸಾರ್ವಜನಿಕವಾಗಿ ಜಾಕ್ ಮಾ ಕಾಣಿಸಿಕೊಂಡಿಲ್ಲ.

ಆಫ್ರಿಕಾದ ಬಿಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುತ್ತಿದ್ದ ಜಾಕ್ ಅವರು ಈ ಬಾರಿ ಗೈರಾಗಿದ್ದಾರೆ. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸಿ 1.5 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡುವ ಶೋ ಇದಾಗಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಜಾಕ್ ಬದಲಿಗೆ ಬೇರೊಬ್ಬ ಅಧಿಕಾರಿಯನ್ನು ಆಲಿಬಾಬಾ ಸಂಸ್ಥೆ ಕಳಿಸಿತ್ತು ಎಂದು ಯುಕೆಯ ಟೆಲಿಗ್ರಾಫ್ ವರದಿ ಮಾಡಿದೆ.

ಅಕ್ಟೋಬರ್ 24ರಂದು ಚೀನಾ ಸರ್ಕಾರದ ನೀತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಕ್ ಅವರಿಗೆ ಕಿರುಕುಳ ಹೆಚ್ಚಾಗಿತ್ತು. ಅವರ Ant ಸಂಸ್ಥೆ ಐಪಿಒ(ಸುಮರು 37ಬಿಲಿಯನ್ ಡಾಲರ್ ಮೌಲ್ಯ) ಅಮಾನತು ಮಾಡಿ ಶಾಂಘೈ ಷೇರು ವಿನಿಮಯ ಕೇಂದ್ರ ಹೊಡೆತ ನೀಡಿತ್ತು.

Chinese billionaire Jack Ma suspected missing

ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿರುವ ಜಾಕ್ ಅವರು ಕೊಡುಗೈ ದಾನಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕೊವಿಡ್ 19 ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮಾಸ್ಕ್ ವಿತರಣೆಗಾಗಿ ಯುರೋಪ್, ಯುಎಸ್ ಗಳಲ್ಲಿ ನೆರವು ನೀಡಿದ್ದರು. ಜಾಕ್ ಮಾ ಸಂಸ್ಥೆ ಮೂಲಕ ಶಿಕ್ಷಣ, ಉದ್ಯಮ, ಮಹಿಳಾ ನಾಯಕತ್ವ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಅಪಾರ ಪ್ರಮಾಣದ ದೇಣಿಗೆ ಮೂಲಕ ನೆರವು ನೀಡಲಾಗುತ್ತಿದೆ.

English summary
Speculation has swirled around Chinese billionaire Jack Ma’s whereabouts after reports surfaced that the high-profile businessman has not made a public appearance in more than two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X