ಫೆಬ್ರವರಿ ಕೊನೆಗೆ ಕೈ ತುಂಬ ಹೊಸ ನೋಟು!

Posted By:
Subscribe to Oneindia Kannada

ಮುಂಬೈ, ಜನವರಿ 6: ನೋಟು ನಿಷೇಧದ ನಿರ್ಧಾರದ ನಂತರ ಅಂದರೆ ನವೆಂಬರ್ 8ರಿಂದ ಡಿಸೆಂಬರ್ 30ರವರೆಗೆ ಶೇ 44ರಷ್ಟು ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಲಾವಣೆಗೆ ಬಿಟ್ಟಿದೆ. ಅದರರ್ಥ, ನೋಟು ನಿಷೇಧದ ಕಾರಣಕ್ಕೆ ಹಿಂಪಡೆಯಲಾದ 500, 1000 ರುಪಾಯಿ ನೋಟುಗಳಿಗೆ ಬದಲಿಯಾಗಿ, ಮುದ್ರಣವಾಗಿ ಬಿಡುಗಡೆಯಾಗಿರುವ ಹೊಸ ನೋಟುಗಳ ಪ್ರಮಾಣ ಶೇ 44 ಮಾತ್ರ.

ಈ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇಡೀ ದೇಶದಲ್ಲಿ ನೋಟು ಸರಬರಾಜಿನ ವ್ಯವಸ್ಥೆ ಫೆಬ್ರವರಿ ಕೊನೆ ವೇಳೆಗೆ ಸಹಜ ಸ್ಥಿತಿಗೆ ತಲುಪಬಹುದು. ಒಂದು ವೇಳೆ ಹಾಗಾದಲ್ಲಿ ನೋಟು ನಿಷೇಧದ ಕಾರಣಕ್ಕೆ ಹೊಡೆತ ಬಿದ್ದಿದ್ದ ಅಭಿವೃದ್ಧಿ ದರ ನಿರೀಕ್ಷೆಗಿಂತ ಬೇಗ ಚಿಗಿತುಕೊಳ್ಳಬಹುದು ಎಂಬುದು ತಜ್ಞರ ಅಭಿಮತ.[ಶೇ 97ರಷ್ಟು ಹಳೇ ನೋಟು ವಾಪಸ್, ನಂಗೊತ್ತಿಲ್ಲ ಅಂದರು ವಿತ್ತಸಚಿವ ಜೇಟ್ಲಿ]

Cash crunch may ease by Feb-end, says SBI report

ಹಳೆ ನೋಟುಗಳನ್ನು ಸಾರ್ವಜನಿಕರು ಬ್ಯಾಂಕ್ ಗಳಿಗೆ ಜಮೆ ಮಾಡುವುದಕ್ಕೆ ಡಿಸೆಂಬರ್ 30 ಕೊನೆ ದಿನವಾಗಿತ್ತು. ಆದರೆ ಜನರಿಗೆ ಬದಲಿಯಾಗಿ ಹಣ ಸಿಗುವುದು ಸ್ವಲ್ಪ ಸಮಸ್ಯೆಯಾಗಿತ್ತು. ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೊದಲಿಗೆ ಎರಡು ಸಾವಿರ ರುಪಾಯಿಯ ನೋಟುಗಳನ್ನು ತಂದಿತು. ಈಗ ಕಡಿಮೆ ಮುಖಬೆಲೆಯ ನೋಟುಗಳ ಬಗ್ಗೆ ಗಮನಹರಿಸುತ್ತಿದೆ ಎಂದು ಎಸ್ ಬಿಐನ ಮುಖ್ಯ ಆರ್ಥಿಕ ತಜ್ಞೆ ಸೌಮ್ಯ ಕಂಠಿ ಘೋಷ್ ಅಭಿಪ್ರಾಯಪಟ್ಟಿದ್ದಾರೆ.[ಕೇಂದ್ರ ಸರಕಾರಕ್ಕೆ 2017 ಅಳಿವು-ಉಳಿವಿನ ವರ್ಷ, ಏಕೆ ಗೊತ್ತಾ?]

ಎಸ್ ಬಿಐನ ವರದಿಯ ಪ್ರಕಾರ ಹೇಳುವುದಾದರೆ. ಜನವರಿ ಕೊನೆ ವೇಳೆಗೆ ನಿಷೇಧಿತ ನೋಟುಗಳಿಗೆ ಬದಲಿಯಾಗಿ ಶೇ 67ರಷ್ಟು ಹೊಸ ನೋಟುಗಳು ಚಲಾವಣೆಗೆ ಬರುತ್ತವೆ. ಆದರೆ ಈಗಿನ ವೇಗದಲ್ಲೇ ಮುದ್ರಣ ನಡೆಯಬೇಕಷ್ಟೇ. ಹಾಗಾದಲ್ಲಿ ಫೆಬ್ರವರಿ ತಿಂಗಳ ಕೊನೆ ಹೊತ್ತಿಗೆ ಶೇ 80-89ರಷ್ಟು ಹೊಸ ನೋಟುಗಳು ಚಲಾವಣೆಗೆ ಬರುತ್ತವೆ. ಆಗ ನೋಟಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's currency supply is likely to return to near normal by February end and growth, which has been hit by the withdrawal of Rs 500 and Rs 1,000 notes, is likely to bounce back faster than earlier expected, said the analysis by India's largest commercial bank SBI.
Please Wait while comments are loading...