ಪೆಟ್ರೋಲ್ ಪಂಪ್ ಗಳಲ್ಲಿ ಜ. 13ರವರೆಗೆ ಕಾರ್ಡ್ ಬಳಕೆ

Posted By: Chethan
Subscribe to Oneindia Kannada

ನವದೆಹಲಿ, ಜ. 9: ಪೆಟ್ರೋಲ್ ಪಂಪ್ ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳ ಬಳಕೆಯನ್ನು ಜ. 13ರವರಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಜ. 13ರಂದು ನಡೆಯಲಿರುವ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘವು ತಿಳಿಸಿದೆ.

ಕಾರ್ಡ್ ಬಳಕೆ ಮೇಲೆ ಶೇ. 1ರಷ್ಟು ಶುಲ್ಕ ವಿಧಿಸುವ ಬ್ಯಾಂಕ್ ಗಳ ನಿಯಮವನ್ನು ವಿರೋಧಿಸಿ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಕಾರ್ಡ್ ಬಳಕೆ ನಿಷೇಧದ ನಿರ್ಧಾರವನ್ನು ಭಾನುವಾರ ಘೋಷಿಸಿದ್ದವು.

Card transaction in petrol bunks will continue till Jan. 13

ಅದರಂತೆ, ಭಾನುವಾರ ಮಧ್ಯರಾತ್ರಿಯಿಂದಲೇ ಬಂಕ್ ಗಳಲ್ಲಿ ಕಾರ್ಡ್ ಗಳ ಬಳಕೆ ಸ್ಧಗಿತಗೊಳ್ಳಬೇಕಿತ್ತು. ಆದರೆ, ತಮ್ಮ ಪಟ್ಟನ್ನು ಕೊಂಚ ಸಡಿಲಿಸಿರುವ ಬಂಕ್ ಮಾಲೀಕರ ಸಂಘ, ಜ. 13ರ ಮಧ್ಯರಾತ್ರಿಯವರೆಗೆ ಕಾರ್ಡುಗಳ ಬಳಕೆ ಮುಂದುವರಿಸಲು ನಿರ್ಧರಿಸಿದೆ.

ಬ್ಯಾಂಕ್ ಗಳ ನಕಾರ: ಏತನ್ಮಧ್ಯೆ, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಬೇಡಿಕೆಯಂತೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳ ಬಳಕೆ ಮೇಲೆ ವಿಧಿಸಲಾಗುತ್ತಿರುವ ಶೇ. 1ರಷ್ಟು ಶುಲ್ಕವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬ್ಯಾಂಕ್ ಗಳು ಸ್ಪಷ್ಟಪಡಿಸಿವೆ.

ಗ್ರಾಹಕರಿಗೆ ಸಂಕಷ್ಟ?: ಆದರೆ ಇನ್ನು ಮುಂದೆ ಪೆಟ್ರೋಲ್ ಬಂಕ್ ಗಳ ಮಾಲೀಕರಂತೆ ಇತರ ಅಗತ್ಯ ವಸ್ತು ಮಾರಾಟಗಾರರೂ ಇದೇ ಹಠ ಹಿಡಿದರೆ ಗ್ರಾಹಕರಿಗೆ ಮತ್ತೊಂದು ಸಂಕಷ್ಟ ಒದಗಲಿದೆ.

ಇದೀಗ, ಬ್ಯಾಂಕುಗಳಲ್ಲಿ, ಎಟಿಎಂಗಳಲ್ಲಿ ತಮಗೆ ಅವಶ್ಯಕತೆಯಿರುವಷ್ಟು ಹಣ ಸಿಗುತ್ತಿಲ್ಲವಾದರೂ, ಕಾರ್ಡು ಬಳಕೆಯಿರುವುದರಿಂದ ಜನರು ಕೊಂಚ ನೆಮ್ಮದಿಯಿಂದ ಇದ್ದಾರೆ. ಇದೀಗ ಕಾರ್ಡು ಬಳಕೆ ಸಾಧ್ಯವಿಲ್ಲಎಂದಾದರೆ, ಗ್ರಾಹಕರು ಸಂಕಷ್ಟ ಎದುರಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Petrol pump owners allowed the card transaction in petrol bunks till Jan. 13. On Sunday petrol bunk owenrs association came out with the decision to ban card transactions in petrol bunks from midnight of Sunday. On that day, in their association meeting they decide their next move. Meanwhile, banks defer to change the 1% fee on every card transaction.
Please Wait while comments are loading...