ಚೀನಾ ವಸ್ತುಗಳಿಗೆ ಗುಡ್‌ಬೈ ಹೇಳಲು ಸಜ್ಜಾಗಿದೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ

ವಿಶ್ವಕ್ಕೆ ಕೊರೊನಾವೈರಸ್ ಸೋಂಕು ಹರಡಿಸಿ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ, ಸುಖಾಸುಮ್ಮನೆ ಭಾರತದ ಗಡಿ ತಂಟೆಗೆ ಬರುತ್ತಿದೆ. ಹೀಗಾಗಿ ಭಾರತದ ವ್ಯಾಪಾರಿ ಸಂಘಟನೆಯು ಚೀನಾಕ್ಕೆ ಬುದ್ದಿ ಕಲಿಸಲು ಯೋಜನೆ ರೂಪಿಸಿದೆ.

ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT) ನಿರ್ಧರಿಸಿದ್ದು, ಸುಮಾರು 3,000 ಚೀನಿ ವಸ್ತುಗಳನ್ನು ಪಟ್ಟಿ ಮಾಡಿದೆ.

ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

CAIT Launches Campaign To Boycott Chinese Goods

ಚೀನಾದ ವಸ್ತುಗಳಿಲ್ಲದೇ ಭಾರತೀಯರು ಬದುಕಲು ಸಾಧ್ಯವೇ ಇಲ್ಲ ಎಂದು ಇತ್ತೀಚಿಗೆ ಚೀನಾದ ಪತ್ರಿಕೆಯೊಂದು ವರದಿ ಮಾಡಿತ್ತು. ಭಾರತದ ಸ್ವಾಭಿಮಾನವನ್ನು ಕೆಣಕುವ ಈ ದುಸ್ಸಾಹಸಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಿಎಐಟಿ ಹೇಳಿದೆ.

ಸದ್ಯ ದೇಶದಲ್ಲೇ ಸುಲಭವಾಗಿ ಉತ್ಪಾದಿಸಲು ಸಾಧ್ಯವಿದ್ದರೂ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಸುಮಾರು 3 ಸಾವಿರ ವಸ್ತುಗಳನ್ನು ಪಟ್ಟಿ ಮಾಡಿರುವ ಸಿಎಐಟಿ, ಇವುಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+