ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸದಿಂದ ತೆಗೆಯುವುದಿಲ್ಲವೆಂದು ಭರವಸೆ ನೀಡಿದ ನಂತರವೂ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಶೈಕ್ಷಣಿಕ ಆಪ್ ಬೈಜುಸ್ ಸುಮಾರು 1,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಮುಖ್ಯವಾಗಿ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳ ವಜಾಗೊಳಿಸಲಾಗಿದೆ. ಅಕ್ಟೋಬರ್‌ನಲ್ಲಿ, ಬೈಜೂಸ್ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ವೆಚ್ಚ ಕಡಿತ ಮತ್ತು ಕಾರ್ಯಾಚರಣೆಗಳ ಹೊರಗುತ್ತಿಗೆಯನ್ನು ಉಲ್ಲೇಖಿಸಿ ಬೈಜುಸ್ ಸುಮಾರು 1,500 ಉದ್ಯೋಗಿಗಳನ್ನು ವಜಾ ಮಾಡಿದೆ. ಈ ವಿಷಯದ ಬಗ್ಗೆ ಮಾಹಿತಿ ಇರುವ ನಾಲ್ವರು ನೌಕರರು 'ಮಿಂಟ್‌'ಗೆ ತಿಳಿಸಿದ್ದಾರೆ.

ಬೈಜುಸ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ ಅಕ್ಟೋಬರ್‌ನಲ್ಲಿ ಉದ್ಯೋಗಿಗಳಿಗೆ 2,500 ಸಿಬ್ಬಂದಿಯನ್ನು ಮೀರಿ ವಜಾಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್ 2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್

ಕಂಪನಿಯು ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್, ಕಸ್ಟಮರ್ ಕೇರ್, ಎಂಜಿನಿಯರಿಂಗ್, ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ ಮತ್ತು ಇತರ ವಿಭಾಗಗಳ ಕೆಲವು ಕಾರ್ಯಗಳನ್ನು ಹೊರಗುತ್ತಿಗೆ ನೀಡಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Byjus layoff: Union edtech firm sacks about 1,500 employees; Know reasons

'ಪ್ರಸ್ತುತ ಉದ್ಯೋಗಿಗಳನ್ನು ವಜಾಗೊಳಿಸುವ ಮೊದಲು ಹೊಸ ಪಾಲುದಾರರ ಜೊತೆ ಕೈಜೋಡಿಸಲು ಆಡಳಿತವು ಬಯಸಿದ್ದರಿಂದ ವಜಾಗೊಳಿಸುವಿಕೆಗಳು ಈಗ ನಡೆದಿವೆ' ಎಂದು ತಿಳಿದುಬಂದಿದೆ.

ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ಇಮೇಲ್ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ಯಾವುದೇ ಆಂತರಿಕ ಸಂವಹನವಿಲ್ಲ. ನೌಕರರನ್ನು ಕಚೇರಿಗೆ ಕರೆಸಲಾಯಿತು ಮತ್ತು ನೇರವಾಗಿ ಪಿಂಕ್ ಸ್ಲಿಪ್‌ಗಳನ್ನು ನೀಡಲಾಯಿತು ಎಂದು ವಜಾಗೊಂಡ ನೌಕರರೊಬ್ಬರು ಮಾಹಿತಿ ನೀಡಿದ್ದಾರೆ.

'ಇದೀಗ, ಕಂಪನಿಯು ಹೆಚ್ಚಾಗಿ ವಾಟ್ಸಾಪ್ ಮೂಲಕ ಉದ್ಯೋಗಿಗಳೊಂದಿಗೆ ಸಂವಹನ ನಡೆಸುತ್ತಿದೆ. ಏಕೆಂದರೆ ಅವರು ಇಮೇಲ್‌ಗಳು ಸೋರಿಕೆಯಾಗುತ್ತವೆ ಎಂದು ಕಂಪನಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ನೋಟಿಸ್ ಅವಧಿ ಮುಗಿದ ನಂತರ ಕಂಪನಿಯು ನಮಗೆ ಪ್ಯಾಕೇಜ್‌ನ ಭರವಸೆ ನೀಡಿದೆ' ಎಂದು ವಜಾಗೊಂಡ ಉದ್ಯೋಗಿ ಹೇಳಿದ್ದಾರೆ.

Byjus layoff: Union edtech firm sacks about 1,500 employees; Know reasons

ಬೈಜೂಸ್, ಭಾರತೀಯ ಬಹುರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಭಾರತದಲ್ಲಿನ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದನ್ನು 2011 ರಲ್ಲಿ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್ ಸ್ಥಾಪಿಸಿದರು. ಮಾರ್ಚ್ 2022 ರ ಹೊತ್ತಿಗೆ, ಬೈಜುಸ್ US$22 ಶತಕೋಟಿ ಮೌಲ್ಯವನ್ನು ಹೊಂದಿದೆ. ಕಂಪನಿಯು 115 ಮಿಲಿಯನ್ ನೋಂದಾಯಿತ ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.

ಶ್ರೀಮಂತರು ಮಾತ್ರ ಭರಿಸಬಹುದಾದ ಶುಲ್ಕವನ್ನು ವಿಧಿಸುವುದಕ್ಕಾಗಿ ಬೈಜುಸ್ ಟೀಕೆಗೆ ಗುರಿಯಾಗಿದೆ. ಕಂಪನಿಯು ತನ್ನ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದ ಪೋಷಕರ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಆರೋಪಗಳನ್ನು ಮಾಡಿದ್ದ ಪ್ರದೀಪ್ ಪೂನಿಯಾ ವಿರುದ್ಧ ಬೈಜುಸ್ ₹ 20 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ. ನಂತರ ಅವರು ಮೊಕದ್ದಮೆಯನ್ನು ಹಿಂಪಡೆದ್ದಾರೆ.

English summary
Education app Byjus has laid off around 1,500 employees, according to media reports. The layoffs were mainly in the design, engineering and manufacturing departments
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X