ಇಂದಿನಿಂದ ಬರ್ಗರ್‌ ಕಿಂಗ್ ಐಪಿಒ ಶುರು: ಬಿಡ್‌ಗೆ ಅವಕಾಶ

ನವದೆಹಲಿ, ಡಿಸೆಂಬರ್ 2: ಬಹುನಿರೀಕ್ಷಿತ ಬರ್ಗರ್‌ ಕಿಂಗ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಂದಿನಿಂದ ಬಿಡ್‌ಗೆ ತೆರೆದಿದೆ. ಕಳೆದ ಶುಕ್ರವಾರ ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್‌ನ ಘೋಷಣೆಯಂತೆ ಪ್ರತಿ ಷೇರಿಗೆ 59 ರಿಂದ 60 ರೂಪಾಯಿಗೆ ನಿಗದಿಯಾಗಿದೆ.

ಇಂದಿನಿಂದ (ಡಿ.2) ಪ್ರಾರಂಭಗೊಳ್ಳಲಿರುವ ಬರ್ಗರ್‌ ಕಿಂಗ್ ಐಪಿಒ ಡಿಸೆಂಬರ್ 4ಕ್ಕೆ ಮುಕ್ತಾಯಗೊಳ್ಳಲಿದ್ದು, ಐಪಿಒಗೆ ಬಿಡ್‌ ಸಲ್ಲಿಸುವವರು ಕನಿಷ್ಠ 250 ಷೇರುಗಳಿಗೆ ಅರ್ಜಿ ಸಲ್ಲಿಸಬೇಕು. ಗರಿಷ್ಠ 3,250 ಷೇರುಗಳನ್ನು ಖರೀದಿ ಮಾಡಲು ಅವಕಾಶವಿದೆ.

ಅಮೆರಿಕಾ ಮೂಲದ ಭಾರತೀಯ ಅಂಗಸಂಸ್ಥೆಯಾದ ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್ ಒಟ್ಟು 810 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಪ್ರವರ್ತಕರಿಗೆ ಪ್ರತಿ ಷೇರಿಗೆ 44 ರುಪಾಯಿಯಂತೆ 58.08 ಕೋಟಿ ರುಪಾಯಿ ಹಾಗೂ 58.50 ರುಪಾಯಿ ಪ್ರತಿ ಷೇರಿಗೆ ಎಂಬಂತೆ 92 ಕೋಟಿ ರೂ. ಪೂರ್ವ ಐಪಿಒ ಹಣವನ್ನು ಸಂಗ್ರಹಿಸಿದೆ. ಹೀಗಾಗಿ ಷೇರುಗಳ ಹೊಸ ವಿತರಣೆಯು 600 ಕೋಟಿಯಿಂದ 450 ಕೋಟಿ ರೂಪಾಯಿಗೆ ತಲುಪಿದೆ.

Burger King IPO Opens Today: Know More

ಇದರಲ್ಲಿ ಹೊಸ ಷೇರುಗಳ ವಿತರಣೆ 450 ಕೋಟಿ ರೂಪಾಯಿ ಮತ್ತು ಪ್ರವರ್ತಕರಾದ ಕ್ಯೂಎಸ್ಆರ್ ಏಷ್ಯಾ ಪ್ರೈವೇಟ್ ಲಿಮಿಟೆಡ್ 60 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುತ್ತದೆ. ಹೀಗಾಗಿ ಷೇರುಗಳ ಬಿಡ್‌ಗೆ ಮತ್ತಷ್ಟು ಸ್ಪರ್ಧೆ ಹೆಚ್ಚಿದ್ದು, ಆಸಕ್ತ ಹೂಡಿಕೆದಾರರಿಗೆ ಬಿಡ್ ಮಾಡಲು ಅವಕಾಶವಿದೆ.

ನವೆಂಬರ್ 2014 ರಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಅನ್ನು ತೆರೆದ ನಂತರ, ಕಂಪನಿಯು ತನ್ನ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೆಸರುವಾಸಿಯಾಗಿದೆ. 30 ಜೂನ್ 2019 ರ ಹೊತ್ತಿಗೆ, ಇದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಭಾರತದಾದ್ಯಂತ 47 ನಗರಗಳಲ್ಲಿ ಏಳು ಉಪ ಫ್ರ್ಯಾಂಚೈಸ್ಡ್‌ ಬರ್ಗರ್ ಕಿಂಗ್ ರೆಸ್ಟೋರೆಂಟ್‌ಗಳನ್ನು ಒಳಗೊಂಡಂತೆ 202 ರೆಸ್ಟೋರೆಂಟ್‌ಗಳನ್ನು ಹೊಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+