ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2021: ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಡಿಸೆಂಬರ್ 14: 2021-22ರ ಬಜೆಟ್ ಕುರಿತು ಬಜೆಟ್ ಪೂರ್ವ ಸಮಾಲೋಚನೆಯ ಭಾಗವಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ (ಡಿಸೆಂಬರ್ 14) ಹಲವಾರು ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಭಾರೀ ನಷ್ಟವಾಗಿದೆ. ಹಾನಿಗೊಳಗಾದ ಆರ್ಥಿಕತೆಯ ಪುನರುಜ್ಜೀವನಕ್ಕೆ ಪ್ರಮುಖ ಸುಧಾರಣೆಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರ ಸಲಹೆಯ ಅಗತ್ಯವಿದೆ. ಸರ್ಕಾರ ಮತ್ತು ಕೈಗಾರಿಕೆಗಳು ಒಗ್ಗೂಡಿ ಪ್ರಸ್ತುತ ಸಂಕಟದಿಂದ ಹೊರಬರಬೇಕು. ಹೀಗಾಗಿ ಈ ಪರಿಸ್ಥಿತಿಗಳನ್ನು ಎದುರಿಸಲು ಮತ್ತು ಮುಂದಿನ ಬಜೆಟ್‌ಗೆ ಸಿದ್ಧತೆ ನಡೆಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದ್ಯತೆ ನೀಡಿದ್ದಾರೆ.

Unforgettable 2020: 20 ಲಕ್ಷ ಕೋಟಿ ರೂ. ಬೃಹತ್ ಆರ್ಥಿಕ ಪ್ಯಾಕೇಜ್Unforgettable 2020: 20 ಲಕ್ಷ ಕೋಟಿ ರೂ. ಬೃಹತ್ ಆರ್ಥಿಕ ಪ್ಯಾಕೇಜ್

ಬಜೆಟ್ ಸಿದ್ಧಪಡಿಸುವ ಮೊದಲು ಸರ್ಕಾರ, ಹಣಕಾಸು ಸಚಿವರು ಮತ್ತು ಅಧಿಕಾರಿಗಳು ವಿವಿಧ ಪಕ್ಷಗಳನ್ನು ಭೇಟಿ ಮಾಡಿ ಸಲಹೆಗಳನ್ನು ತೆಗೆದುಕೊಳ್ಳುತ್ತದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೊಟಕ್ ಮತ್ತು ಬಯೋಕಾನ್ ನ ಕಿರಣ್ ಮಜುಂದಾರ್ ಷಾ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಣಕಾಸು ಸಚಿವರು ಮತ್ತು ಹಣಕಾಸು ಕಾರ್ಯದರ್ಶಿ ಎಬಿ ಪಾಂಡೆ, ಕಾರ್ಯದರ್ಶಿ, ಡಿಇಎ ತರುಣ್ ಬಜಾಜ್, ಮುಖ್ಯ ಅರ್ಥಶಾಸ್ತ್ರಜ್ಞ ಸಲಹೆಗಾರ ಕೆ. ಸುಬ್ರಮಣಿಯನ್ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.

Budget 2021: FM Nirmala Sitharaman Meets Industrialists On Monday

ಇದೇ ವೇಳೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಕೇಂದ್ರ ಬಜೆಟ್‌ಗಾಗಿ ಮೂರು ತಂತ್ರಗಳನ್ನು ಮುಂದಿಟ್ಟಿದೆ. ಕೊರೊನಾ ಸಾಂಕ್ರಾಮಿಕದ ಪರಿಣಾಮವನ್ನು ನಿವಾರಿಸುವ ಉದ್ದೇಶದಿಂದ ಬೆಳವಣಿಗೆ, ಆರ್ಥಿಕ ಏಕೀಕರಣ ಮತ್ತು ಹಣಕಾಸು ಕ್ಷೇತ್ರವನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ. ಬಜೆಟ್ ಪ್ರಸ್ತಾಪಗಳು ಮುಖ್ಯವಾಗಿ ಬೆಳವಣಿಗೆ ಮತ್ತು ಹಣಕಾಸು ನಿರ್ವಹಣೆಯನ್ನು ಗುರಿಯಾಗಿರಿಸಿಕೊಳ್ಳಬೇಕು ಎಂದು ಸಿಐಐ ಸೂಚಿಸಿತು. ಇದು ಮೂರು ವರ್ಷಗಳ ಗುರಿಯಾಗಿದೆ ಎಂದು ಹೇಳಿದರು.

ಕೈಗಾರಿಕಾ ಸಂಸ್ಥೆಯ ಪ್ರಕಾರ, ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ತೆರಿಗೆ ಆದಾಯವು ತೀವ್ರವಾಗಿ ಕುಸಿದಿರುವ ಈ ಪರಿಸ್ಥಿತಿಗಳಲ್ಲಿ ಆದಾಯವನ್ನು ಗಳಿಸಬಹುದು. ಇದರ ಜೊತೆಗೆ ಸಿಐಐ ಸಹ ಇಂದು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.

ಇದ ಜೊತೆಗೆ ಮೂಲಸೌಕರ್ಯ, ಆರೋಗ್ಯ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಸರ್ಕಾರದ ಖರ್ಚಿಗೆ ಆದ್ಯತೆ ನೀಡಬೇಕು ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೊಟಕ್ ಹೇಳಿದರು.

English summary
Budget 2021-22: As a common pre-budget exercise for the Finance Minister every year, Nirmala Sitharaman will begin e-meeting various stakeholders ahead of the General Budget FY22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X