ಹೊಸ ವರ್ಷಕ್ಕೆ ಬಿಎಸ್ಸೆನ್ನೆಲ್ ನಿಂದ ಹೊಸ ಕೊಡುಗೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ ಘೋಷಿಸಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿಡಿ ಕರೆ ಮಾಡುವ ಅವಕಾಶ ನೀಡಲಾಗಿದ್ದು, ಯಾವುದೇ ನೆಟ್ವರ್ಕ್ ಗೆ ಬೇಕಾದರೂ ಕರೆ ಮಾಡಬಹುದಾಗಿದೆ.

144 ರೂಪಾಯಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆಗಳ ಕೊಡುಗೆಯಲ್ಲಿ ಮೊಬೈಲ್ ಬಳಕೆದಾರರು ಯಾವುದೇ ನೆಟ್ ವರ್ಕ್ ಗೆ 1 ತಿಂಗಳ ಅವಧಿಯಲ್ಲಿ ಕರೆ ಮಾಡಬಹುದಾಗಿದೆ. ಜತೆಗೆ 6 ತಿಂಗಳವರೆಗೆ ಲಭ್ಯವಿರುವ ಈ ಕೊಡುಗೆಯಲ್ಲಿ 300 ಎಂ.ಬಿ. ಡಾಟಾ ನೀಡಲಾಗುವುದು, ಇದು ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಅನ್ವಯವಾಗಲಿದೆ ಎಂದು ಬಿ.ಎಸ್.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.[ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್]

BSNL launches unlimited local and STD calls at Rs 144

ದೇಶಾದ್ಯಂತ ಬಿ.ಎಸ್.ಎನ್.ಎಲ್. 4400 ವೈಫೈ ಹಾಟ್ ಸ್ಪಾಟ್ ಸಂಪರ್ಕ ಕಲ್ಪಿಸಿದ್ದು, 40,000 ವೈಫೈ ಹಾಟ್ ಸ್ಪಾಟ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

4ಜಿಗೆ ಹೊಂದಿಕೊಳ್ಳುವ LTE (Long Term Evolution) ಸ್ಪೆಕ್ರಮ್ ತನ್ನದಾಗಿಸಿಕೊಂಡಿರುವ ಬಿಎಸ್ ಎನ್ ಎಲ್ ಹಂತ ಹಂತವಾಗಿ ಗ್ರಾಮೀಣ ಭಾಗದಲ್ಲಿ ತನ್ನ ಜಾಲ ವಿಸ್ತರಣೆ ಮಾಡಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಹೇಳಿದರು.

ಬಿಎಸ್ ಎನ್ ಎಲ್ ನ ಈ ಹೊಸ ಆಫರ್ ನಿಂದಾಗಿ ಏರ್ ಟೆಲ್,ವೋಡಾ ಫೋನ್ ಹಾಗೂ ಐಡಿಯಾ ಕೂಡಾ ದರ ಕಡಿತಕ್ಕೆ ಮುಂದಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cashing in on the rollout by several telecom operators offering unlimited free call facility, Government run Bharat Sanchar Nigam Ltd today joined the bandwagon with launch of a new Rs 144 plan for its customers offering similar features.
Please Wait while comments are loading...