ಬಿಎಸ್‌ಎನ್‌ಎಲ್ ಮೊಬೈಲ್ ಗ್ರಾಹಕರಿಗೂ ಪುಕ್ಕಟೆ ಕರೆ ಖುಷಿ
ನವದೆಹಲಿ ಅಕ್ಟೋಬರ್. 19: ಇನ್ನು ಮುಂದೆ ಬಿಎಸ್ಎನ್ ಎಲ್ ಮೊಬೈಲ್ ಗ್ರಾಹಕರು ಸಹ ಉಚಿತ ಕರೆ ಖುಷಿಯನ್ನು ಅನುಭವಿಸಬಹುದು. ರಾತ್ರಿ 9 ರಿಂದ ಬೆಳಗ್ಗೆ 7 ಗಂಟೆವರೆಗೆ ಮನಸೋ ಇಚ್ಛೆ ಮಾತನಾಡಬಹುದು.
ಸ್ಥಿರ ದೂರವಾಣಿಗೆ ನೀಡಿರುವ ಉಚಿತ ಕರೆ ಸೌಲಭ್ಯವನ್ನು ಗ್ರಾಹಕರು ತಮ್ಮ ಮೊಬೈಲ್‌ನಲ್ಲೂ ಪಡೆಯುವ ಅವಕಾಶವನ್ನು ಬಿಎಸ್ ಎನ್‌ಎಲ್ ಕಲ್ಪಿಸಲಿದೆ. ಚಂದಾದಾರರ ಸ್ಥಿರ ಮತ್ತು ಮೊಬೈಲ್ ಖಾತೆಗಳನ್ನು ಸಂಯೋಜಿಸಿ ಆ ಮೂಲಕ ಉಚಿತ ಕರೆ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲು ಬಿಎಸ್ ಎನ್‌ಎಲ್ ಮುಂದಾಗಿದೆ. ಇದರಿಂದ ಗ್ರಾಹಕರು ಸ್ಥಿರ ದೂರವಾಣಿಗೆ ಬರುವ ಕರೆಗಳನ್ನು ಮೊಬೈಲ್‌ನಲ್ಲಿಯೂ ಸ್ವೀಕರಿಸಲು ಸಾಧ್ಯವಾಗಲಿದೆ.[ವರ್ಷದಲ್ಲಿ ಬಿಎಸ್ ಎನ್ ಎಲ್ ತೊರೆದವರು 2 ಕೋಟಿ !]

ಸ್ಥಿರ ದೂರವಾಣಿ ಹೊಂದಿರುವವರು, ಅದರಲ್ಲಿ ತಾವು ಹೊಂದಿರುವ ಉಚಿತ ಕರೆಯನ್ನು ಮೊಬೈಲ್ ಮೂಲಕವೂ ಮಾಡಬಹುದು. ಜತೆಗೆ ಒಳಬರುವ ಕರೆಯನ್ನು ಮೊಬೈಲ್ ಮೂಲಕವೂ ಸ್ವೀಕರಿಸಲು ಸಾಧ್ಯವಿದೆ.
ಸ್ಥಿರ ದೂರವಾಣಿ ಹಾಗೂ ಮೊಬೈಲ್ ಫೋನ್ ಸಂಪರ್ಕವನ್ನು ಒಗ್ಗೂಡಿಸುವ ಸೇವೆಯನ್ನು ದೀಪಾವಳಿ ಹೊತ್ತಿಗೆ ಆರಂಭಿಸಲಾಗುವುದು. ಲ್ಯಾಂಡ್‌ಲೈನ್‌ಗಳಿಗೆ ದೊರಕುತ್ತಿರುವ ಉಚಿತ ಕರೆ ಸೌಲಭ್ಯವನ್ನು ಮೊಬೈಲ್ ಫೋನ್ ಗ್ರಾಹಕರೂ ಬಳಸಿಕೊಳ್ಳಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.[ಬಿಎಸ್ಎನ್ಎಲ್ ಇಂಟರ್ನೆಟ್ ಗ್ರಾಹಕರಿಗೆ ಶುಭ ಸುದ್ದಿ]
ಬದಲಾವಣೆ ಏನು?
ನಿಮ್ಮ ಬಿಎಸ್ ಎನ್ ಎಲ್ ಸ್ಥಿರ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಯೋಜನೆ ಮಾಡಿಕೊಳ್ಳಬೇಕಾತ್ತದೆ. ಕಂಪನಿ ಇದಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡಲಿದ್ದು ಎರಡು ಖಾತೆಗಳನ್ನು ಒಗ್ಗೂಡಿಸಿಕೊಂಡಾಗ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications