• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಮಾರುಕಟ್ಟೆಗೆ ಬ್ಲ್ಯಾಕ್ ಪೆಲಿಕನ್

By Rajendra
|

ಬೆಂಗಳೂರು, ನ.13: ಜಾನ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (ಜೆಡಿಪಿಎಲ್) ಸಮೂಹದ ಬ್ಲ್ಯಾಕ್ ಪೆಲಿಕಾನ್, ಕರ್ನಾಟಕ ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಪ್ಯಾಕೇಜ್ಡ್ ಕುಡಿಯುವ ನೀರು ಪರಿಚಯಿಸಲು ಲಕ್ಷ್ಮಿ ಮಿನರಲ್ಸ್ ಜತೆ ಕೈಜೋಡಿಸಿದೆ. ತನ್ನ ಬ್ರಾಂಡ್ ಅನ್ನು ಪ್ರಚುರಪಡಿಸುವ ಸಲುವಾಗಿ ಇದು ಕಂಪನಿಯ ಮೊದಲ ಸಹಭಾಗಿತ್ವವಾಗಿದೆ. ಜೆಡಿಪಿಎಲ್ ನ ಗುಣಮಟ್ಟದ ಖಾತ್ರಿಯೊಂದಿಗೆ ಬ್ಲ್ಯಾಕ್ ಪೆಲಿಕಾನ್ ಪ್ಯಾಕೇಜ್ಡ್ ಕುಡಿಯುವ ನೀರು ಬರುತ್ತಿದೆ.

ಈ ನೀರಿನ ಬಾಟಲಿಗಳು ಬ್ಲ್ಯಾಕ್ ಪೆಲಿಕಾನ್‍ನ ಚಿಹ್ನೆಯೊಂದಿಗೆ ಬ್ರಾಂಡ್ ಆಗಲಿದೆ ಮತ್ತು ರಾಜ್ಯದಾದ್ಯಂತ ಎಲ್ಲಾ ಜನಪ್ರಿಯ ರಿಟೇಲ್ ಹಾಗೂ ಮದ್ಯದ ಮಳಿಗೆಗಳಲ್ಲಿ ಲಭ್ಯ ಇರಲಿದೆ. 500 ಮಿ.ಲೀ., 1 ಲೀಟರ್, ಹಾಗೂ 2 ಲೀಟರ್ ಪ್ಯಾಕೇಜ್ ಗಳ ಬಾಟಲಿಗಳನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆ ಸ್ಪರ್ಧಾತ್ಮಕವಾಗಿದ್ದರೂ ಕೂಡ, ಬ್ಲ್ಯಾಕ್ ಪೆಲಿಕಾನ್ ತನ್ನ ಉತ್ಪನ್ನಗಳು ಗುಣಮಟ್ಟದ ಖಾತ್ರಿಯೊಂದಿಗೆ ಮಾರುಕಟ್ಟೆಯಲ್ಲಿ ಉಳಿಯಲಿವೆ ಎಂಬ ನಂಬಿಕೆ ಇಟ್ಟುಕೊಂಡಿದೆ. ಬ್ಲ್ಯಾಕ್ ಪೆಲಿಕಾನ್ ನೀರಿನ ಬಾಟಲಿಗಳು ಬಳಸಿ- ವಿಲೇವಾರಿ ಮಾಡುವ ಮಾದರಿಯವುಗಳಾಗಿವೆ. ಈ ಉತ್ಪನ್ನವು ಬಿಐಎಸ್ ಹಾಗೂ ಐಎಸ್‍ಐ ಪ್ರಮಾಣೀಕರಣವನ್ನು ಹೊಂದಿದ್ದು, ಶುದ್ಧ ನೀರು ಹಾಗೂ ಗುಣಮಟ್ಟದ ಪ್ಯಾಕೇಜಿಂಗ್ ಅನ್ನು ಖಾತ್ರಿಗೊಳಿಸುತ್ತದೆ.

ಈ ಉತ್ಪನ್ನಗಳ ಬಿಡುಗಡೆ ವೇಳೆ ಮಾತನಾಡಿದ ಜಾನ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಪೌಲ್ ಜಾನ್ ಮಾತನಾಡಿ, "ನೀರು ಪ್ರತಿಯೊಂದು ಸಂದರ್ಭದಲ್ಲೂ ಅತ್ಯಗತ್ಯ, ಅದು ಸಾಮಾಜಿಕವೇ ಇರಬಹುದು, ಅಥವಾ ಸಾಂಪ್ರದಾಯಿಕ ಕಾರ್ಯಕ್ರಮೇ ಇರಬಹುದು. ಗುಣಮಟ್ಟದ ಪೇಯವನ್ನು ಒದಗಿಸುವುದು ಯಾವತ್ತೂ ಜಾನ್ ಡಿಸ್ಟಿಲರೀಸ್ ನ ಗುರಿಯಾಗಿದೆ ಮತ್ತು ಈ ಉತ್ಪನ್ನವು ಕಠಿಣ ಗುಣಮಟ್ಟ ಪರೀಕ್ಷೆಯ ಬಳಿಕವೇ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ನೀರಿನ ಶುದ್ಧತೆಯಿಂದ ಆಕರ್ಷಕ ವಿನ್ಯಾಸ ಹಾಗೂ ಬ್ರಾಂಡಿಂಗ್ ನೊಂದಿಗೆ ಇದು ನಮ್ಮ ಫೋರ್ಟ್ ಫೋಲಿಯೋಕ್ಕೆ ಒಂದು ಅದ್ಭುತ ಮೌಲ್ಯವರ್ಧಿತ ಉತ್ಪನ್ನದ ಸೇರ್ಪಡೆಯಾಗಿದೆ'' ಎಂದು ಹೇಳಿದರು. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Black Pelican from the house of John Distilleries (JDPL) has now joined hands with Sri Lakshmi Minerals to introduce a branded packaged drinking water into the Karnataka market. This is the company’s first tie-up for promotion of its brand. Black Pelican packaged drinking water comes with an assurance of quality from JDPL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more