• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್ ಕಾಯಿನ್ ದಾಖಲೆ ಪ್ರಮಾಣದಲ್ಲಿ ಕುಸಿಯುತ್ತಿದೆ ಏಕೆ?

|

ಬೆಂಗಳೂರು, ಮಾರ್ಚ್ 1: ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಕೆಲ ದಿನಗಳ ಕಾಲ ಕುಸಿತದ ಹಾದಿ ಹಿಡಿದಿದೆ. ಕಳೆದ ಕೆಲ ದಿನಗಳಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ್ದು ಬಿಟ್ಟರೆ ಮತ್ತೆ ಸ್ಥಿರತೆ ಕಂಡುಕೊಂಡಿಲ್ಲ.

ಟೆಸ್ಲಾ, ಮಾಸ್ಟರ್ ಕಾರ್ಡ್, ಪೇಪಾಲ್, ಬ್ಲಾಕ್ ರಾಕ್ ಗಮನ ಸೆಳೆದಿತ್ತು.ಏಷ್ಯಾದ ಮಾರುಕಟ್ಟೆಯಲ್ಲಿ ಬುಧವಾರ(ಫೆ.24)ದಂದು ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ಮೌಲ್ಯ ಶೇ 5.4ರಷ್ಟು ಏರಿಕೆ ಕಂಡು 50,557ಕ್ಕೇರಿಕೆಯಾಗಿತ್ತು. ಇದಕ್ಕೂ ಮುನ್ನ ಫೆ. 21ರಂದು 58, 354 ಡಾಲರ್ ಮೌಲ್ಯಕ್ಕೇರಿ ಅಚ್ಚರಿ ಮೂಡಿಸಿತ್ತು.

ಬಿಟ್ ಕಾಯಿನ್ ವಿಶ್ವಕ್ಕೆ ಭವಿಷ್ಯದ ಸೂಪರ್ ಕರೆನ್ಸಿ !ಬಿಟ್ ಕಾಯಿನ್ ವಿಶ್ವಕ್ಕೆ ಭವಿಷ್ಯದ ಸೂಪರ್ ಕರೆನ್ಸಿ !

ಫೆ.28ರಂದು ಶೇ 5.84ರಷ್ಟು ಕುಸಿತ ಕಂಡು 2,691.96 ಡಾಲರ್ ಮೌಲ್ಯ ಕಳೆದುಕೊಂಡು 43,418.02 ಯುಎಸ್ ಡಾಲರ್ ಮೌಲ್ಯಕ್ಕೆ ಇಳಿದಿದೆ. ಫೆ.21ರಿಂದ ಇಲ್ಲಿ ತನಕ ಶೇ 25.6ರಷ್ಟು ಕುಸಿತ ಕಂಡಿದ್ದು,

ಸುಮಾರು 47, 400 ಯುಎಸ್ ಡಾಲರ್ ನಷ್ಟು ಮೌಲ್ಯವನ್ನು ಕಳೆದುಕೊಂಡ ಬಿಟ್ ಕಾಯಿನ್ ಒಂದು ಹಂತದಲ್ಲಿ ಶೇ 17ರಷ್ಟು ಕುಸಿತ ಕಂಡಿದೆ. ಸುಮಾರು 160 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ.

ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ !ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ !

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

ಒಂದು ಬಿಟ್ ಕಾಯಿನ್ ಬೆಲೆ =3,368,011.86 ರು

English summary
Bitcoin, the world's biggest cryptocurrency has fallen 25.6% from the year's high of $58,354.14 on February 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X