ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭೇಟಿ ಮಾಡಿದ ಬಿಲ್ ಗೇಟ್ಸ್

ಬಿಲ್‌ ಗೇಟ್ಸ್‌ ಅವರು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್‌ ಅವರೊಂದಿಗೆ ಹಣಕಾಸು, ಪಾವತಿ ವ್ಯವಸ್ಥೆಗಳು, ಕಿರುಬಂಡವಾಳ ಮತ್ತು ಡಿಜಿಟಲ್ ಸಾಲ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಮುಂಬೈ, ಫೆಬ್ರವರಿ 28: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಭೇಟಿ ಮಾಡಿದ್ದಾರೆ.

ಬಿಲ್‌ ಗೇಟ್ಸ್‌ ಅವರು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್‌ ಅವರೊಂದಿಗೆ ಹಣಕಾಸು, ಪಾವತಿ ವ್ಯವಸ್ಥೆಗಳು, ಕಿರುಬಂಡವಾಳ ಮತ್ತು ಡಿಜಿಟಲ್ ಸಾಲ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಬಿಲ್‌ಗೇಟ್ಸ್ ಇಂದು ಆರ್‌ಬಿಐ ಮುಂಬೈಗೆ ಭೇಟಿ ನೀಡಿದರು ಮತ್ತು ಗವರ್ನರ್ ಶಕ್ತಿಕಾಂತ್‌ ದಾಸ್ ಅವರೊಂದಿಗೆ ವ್ಯಾಪಕ ಚರ್ಚೆ ನಡೆಸಿದರು ಎಂದು ಆರ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

Bill Gates met RBI Governor Shaktikanta Das

ಬಿಲ್‌ ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಹಣಕಾಸು, ಆರೋಗ್ಯ ಕ್ಷೇತ್ರ ಮತ್ತು ಹವಾಮಾನ ಬದಲಾವಣೆಯ ಸೇರಿದಂತೆ ಸಾಕಷ್ಟು ಚಟುವಟಿಕೆಗಳಲ್ಲಿ ತನ್ನ ಕಾರ್ಯಚಟುವಟಿಕೆ ಹೊಂದಿದೆ. ಬಿಲಿಯನೇರ್ ಉದ್ಯಮಿ ಗೇಟ್ಸ್ ಕೂಡ ದೊಡ್ಡ ಪ್ರಮಾಣದ ಲೋಕೋಪಕಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. "ಹಣಕಾಸು ಸೇರ್ಪಡೆ, ಪಾವತಿ ವ್ಯವಸ್ಥೆಗಳು, ಕಿರುಬಂಡವಾಳ ಮತ್ತು ಡಿಜಿಟಲ್ ಸಾಲ ನೀಡುವಿಕೆ ಇತ್ಯಾದಿಗಳ ಕುರಿತು ಬಿಲ್‌ಗೇಟ್ಸ್‌ ಅವರೊಂದಿಗೆ ಅತ್ಯುತ್ತಮವಾದ ಸಭೆಯನ್ನು ನಡೆಸಿದ್ದೇವೆ ಎಂದು ದಾಸ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಲೇಖನವೊಂದರಲ್ಲಿ ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರೋಗ್ಯವು ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ ಎಂದು ಗೇಟ್ಸ್ ಹೇಳಿದ್ದಾರೆ. ಬಿಸಿಯಾದ ತಾಪಮಾನವು ಆಹಾರದ ಅಭದ್ರತೆ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಹೆಚ್ಚಿಸುವ ಮೂಲಕ ಬಡತನವನ್ನು ಹೆಚ್ಚಾಗಿಸುತ್ತದೆ ಮತ್ತು ಸಂಪನ್ಮೂಲಗಳನ್ನು ಹೆಚ್ಚು ಅಲಭ್ಯ ಮಾಡುತ್ತದೆ. ಇದು ಕೆಟ್ಟ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಸಮುದಾಯವು ಬಡವಾಗಿದ್ದು, ಅದು ಹವಾಮಾನ ಬದಲಾವಣೆಗೆ ಹೆಚ್ಚು ದುರ್ಬಲವಾಗಿರುತ್ತದೆ. ಕೆಟ್ಟ ಹವಾಮಾನ ಘಟನೆಗಳಿಂದ ಸಮುದಾಯವು ಹೆಚ್ಚು ಪ್ರಭಾವಿತವಾಗಿರುತ್ತದೆ. ಅದೇ ಸಮಯದಲ್ಲಿ ಈ ಚಕ್ರವನ್ನು ತಡೆಯಲು ನಾವು ಎರಡೂ ಸಮಸ್ಯೆಗಳ ಮೇಲೆ ಪ್ರಗತಿ ಸಾಧಿಸಬೇಕಾಗಿದೆ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+