ಐಡಿಯಾ, ವೊಡಾಫೋನ್ ಒಂದಾಗುವುದರಿಂದ 25 ಸಾವಿರ ಮಂದಿಗೆ ಕೊಕ್?

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 15: ಭಾರತದ ಪ್ರಮುಖ ಸೆಲ್ಯೂಲಾರ್ ಸೇವಾ ಸಂಸ್ಥೆಗಳಾದ ಐಡಿಯಾ ಹಾಗೂ ವೊಡಾಫೋನ್ ಸಮ್ಮಿಳಿತಗೊಂಡು ಒಂದೇ ಬೃಹತ್ ಸಂಸ್ಥೆಯಾಗಿ ಹೊರಹೊಮ್ಮುವುದಾಗಿ ಘೋಷಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡರೆ ಇದು ಇಂಥ ಹಲವಾರು ವಿಲೀನ ಪ್ರಕ್ರಿಯೆಗಳಿಗೆ ನಾಂದಿ ಹಾಡಿ ಭಾರತೀಯ ಟೆಲಿಕಾಂ ರಂಗದ ಸುಮಾರು 10ರಿಂದ 25 ಸಾವಿರದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಂಭವ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

ಐಡಿಯಾ, ವೋಡಾಫೋನ್ ವಿಲೀನಕ್ಕೂ ಮುನ್ನವೇ ಏರ್ ಸೆಲ್, ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆಯೊಂದಿಗೆ ವಿಲೀನವಾಗುವುದಾಗಿ ಕಳೆದ ವರ್ಷ ಸೆಪ್ಟಂಬರ್ ನಲ್ಲೇ ಘೋಷಿಸಿದೆ.[ಬಿಗ್ ಡೀಲ್ : ವೋಡಾಫೋನ್ ಜತೆಗೆ ಐಡಿಯಾ ಸೆಲ್ಯುಲಾರ್ ವಿಲೀನ]

ಜಿಯೋ ಕಂಪನಿಯ ದೊಡ್ಡ ದರ ಸಮರವನ್ನು ಎದುರಿಸಲು ಈ ಎರಡೂ ದೈತ್ಯ ಕಂಪನಿಗಳು ಒಗ್ಗೂಡುತ್ತಿವೆ. ಆದರೆ, ಇದರಿಂದ ಟೆಲಿಕಾಂ ರಂಗದಲ್ಲಿ ದೊಡ್ಡ ಸಂಚಲವೇ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದ್ದು, ಈ ಎರಡೂ ಕಂಪನಿಗಳು ಪರಸ್ಪರ ಸಮ್ಮಿಳಿತಗೊಂಡ ನಂತರ, ಎಲ್ಲಾ ಟೆಲಿಕಾಂ ಕಂಪನಿಗಳ ಆದಾಯ ಹಾಗೂ ಖರ್ಚು ನಡುವಿನ ಅಂತರವನ್ನು ಹಿರಿದಾಗಿಸಿ ಹೆಚ್ಚಿನ ಲಾಭ ಮಾಡುವ ಲೆಕ್ಕಾಚಾರದಲ್ಲಿ ತೊಡಗಲಿವೆ.

ಹೀಗಾಗಿ, ದಿನದಿಂದ ದಿನಕ್ಕೆ ಟೆಲಿಕಾಂ ರಂಗದಲ್ಲಿ ಏರುತ್ತಿರುವ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದರೆ ಟೆಲಿಕಾಂ ಕ್ಷೇತ್ರದ ಎಲ್ಲಾ ಕಂಪನಿಗಳು ಇಂಥದ್ದೊಂದು ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲೇಬೇಕಿದೆ.[ವೊಡಾಫೋನ್ ಇಂಟರ್ ನೆಟ್: 1 ಜಿಬಿ ರೀಚಾರ್ಜ್ ಗೆ 10 ಜಿಬಿ ಡೇಟಾ]

ಇದರ ಪರಿಣಾಮವಾಗಿಯೇ, ಸಾವಿರಾರು ಭಾರತೀಯ ಟೆಲಿಕಾಂ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆಂದು ಹೇಳಲಾಗಿದೆ. ಹಾಗಾದರೆ, ಈ ರಂಗದ ಯಾವ ವಲಯಗಳಿಗೆ ಈ ಭೀತಿ ತಟ್ಟುತ್ತದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಒಂದೂವರೆ ವರ್ಷದಲ್ಲಿ ನಿರುದ್ಯೋಗಿಗಳು?

ಒಂದೂವರೆ ವರ್ಷದಲ್ಲಿ ನಿರುದ್ಯೋಗಿಗಳು?

ಭಾರತೀಯ ಟೆಲಿಕಾಂ ರಂಗದಲ್ಲಿ ನೇರ ಹಾಗೂ ಪರೋಕ್ಷ ನೌಕರರೂ ಸೇರಿ ಸುಮಾರು 3 ಲಕ್ಷ ಉದ್ಯೋಗಿಗಳಿದ್ದಾರೆ. ಇವರಲ್ಲಿ ಅನೇಕರು ಮುಂದಿನ ಒಂದೂವರೆ ವರ್ಷಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಸಂಭವವಿದೆ.

 ಇವರಲ್ಲಿ ಉಳಿಯೋರು ಯಾರು?

ಇವರಲ್ಲಿ ಉಳಿಯೋರು ಯಾರು?

ಈಗಿರುವ ಮಾಹಿತಿ ಪ್ರಕಾರ, ಏರ್ ಟೆಲ್ ನಲ್ಲಿ 19, 048; ಐಡಿಯಾದಲ್ಲಿ 17,000; ವೊಡಾಫೋನ್ ನಲ್ಲಿ 13,000; ಏರ್ ಸೆಲ್ ನಲ್ಲಿ 8,000; ಆರ್ ಕಾಮ್ ನಲ್ಲಿ 7,500 ಹಾಗೂ ಟಾಟಾ ಟೆಲಿ ಕಂಪನಿಯಲ್ಲಿ 5,513 ಸಿಬ್ಬಂದಿಯಿದ್ದಾರೆ. ಇವರಲ್ಲಿ ಯಾರು ಉಳಿಯುವರೋ, ಯಾರು ಹೊರಹೊರಡುವರೋ ಕಾದು ನೋಡಬೇಕಿದೆ.

 ದೈತ್ಯ ಕಂಪನಿಗಳ ಲೆಕ್ಕಾಚಾರವೇನು?

ದೈತ್ಯ ಕಂಪನಿಗಳ ಲೆಕ್ಕಾಚಾರವೇನು?

ದೈತ್ಯ ಕಂಪನಿಗಳು ಪರಸ್ಪರ ಒಗ್ಗೂಡುವುದರಿಂದ ವಿವಿಧ ಕಂಪನಿಗಳಲ್ಲಿ ಸುಮಾರು 10ರಿಂದ 25 ಸಾವಿರ ಉದ್ಯೋಗಿಗಳು ಹೆಚ್ಚುವರಿ ಉದ್ಯೋಗಿಗಳೆಂದು ಪರಿಗಣಿಸಲ್ಪಡುತ್ತಾರೆ. ಹಾಗಾಗಿ, ಈ ಹೆಚ್ಚಿನ ಜವಾಬ್ದಾರಿ ಹೊರಲು ಕಂಪನಿಗಳು ಸಿದ್ಧವಿರುವುದಿಲ್ಲ.

 ಉಳಿತಾಯಕ್ಕಾಗಿ ಉದ್ಯೋಗಿಗಳಿಗೆ ಹೊಡೆತ

ಉಳಿತಾಯಕ್ಕಾಗಿ ಉದ್ಯೋಗಿಗಳಿಗೆ ಹೊಡೆತ

ಸಧ್ಯದ ಪರಿಸ್ಥಿತಿಯಲ್ಲಿ ಭಾರತೀಯ ಟೆಲಿಕಾ ಕಂಪನಿಗಳ ವಾರ್ಷಿಕ ಆದಾಯ ಒಟ್ಟಾರೆಯಾಗಿ 1,30,000 ಕೋಟಿ ರು. ಆಗಿದ್ದು, ಇದರಲ್ಲಿ ಉದ್ಯೋಗಿಗಳ ಸಂಬಳ ಹಾಗೂ ಇತರ ಸೌಲಭ್ಯಗಳ ಮೂಲಕ ಒಟ್ಟು 34,000- 36,000 ಕೋಟಿ ರು. ಖರ್ಚಾಗುತ್ತದೆ. ಈ ಖರ್ಚನ್ನು ಕಡಿಮೆ ಮಾಡುವುದೇ ಟೆಲಿಕಾಂ ಕಂಪನಿಗಳ ಮೂಲಮಂತ್ರವಾಗಲಿದೆ.

 ಎಚ್ ಆರ್ ವಲಯ ಪ್ರಮುಖ ಟಾರ್ಗೆಟ್ ?

ಎಚ್ ಆರ್ ವಲಯ ಪ್ರಮುಖ ಟಾರ್ಗೆಟ್ ?

ಟೆಲಿಕಾ ಕಂಪನಿಗಳ ಮುಖ್ಯಸ್ಥರು, ಮಾನವ ಸಂಪನ್ಮೂಲ (ಎಚ್ ಆರ್), ಕಂಪನಿಯ ಹಣಕಾಸು ವಿಭಾಗ, ಸೆಂಟ್ರಲ್ ಹಾಗೂ ಸರ್ವೀಸ್ ವಿಭಾಗದ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಂಭವವಿದೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Because of Mega merging trend among the big telecom Companies in India, 10,000 to 25,000 employees in this field may loose their job within 18 months says report.
Please Wait while comments are loading...