ಏರ್ ಟೆಲ್ ನಿಂದ ಹೊಸ ಆಫರ್ : ಉಚಿತ ವಾಯ್ಸ್ ಕಾಲ್ ಇನ್ನು ಸುಲಭ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 05 : ದೇಶದ ಬಹುದೊಡ್ಡ ಜಾಲ ಹೊಂದಿರುವ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಶುಕ್ರವಾರದಂದು ತನ್ನ ಗ್ರಾಹಕರಿಗೆ ಎರಡು ಸಕತ್ ಆಫರ್ ಘೋಷಿಸಿದೆ. ಎರಡು ಯೋಜನೆಗಳು ಕೂಡಾ ಪೋಸ್ಟ್ ಪೇಯ್ಡ್ ಯೋಜನೆಗಳಾಗಿದ್ದು, ಉಚಿತ ವಾಯ್ಸ್ ಕಾಲ್ಸ್ ಗಳನ್ನು 3 ಜಿ/ 4 ಜಿ ಡಾಟಾ ಪ್ಯಾಕ್ ಗಳಿಂದ ಪಡೆದುಕೊಳ್ಳಬಹುದಾಗಿದೆ.

ಈಗಾಗಲೇ ಏರ್ ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಪರಿಚಯವಿರುವ 'MyPlan' ಅಡಿಯಲ್ಲಿ ಈ ಹೊಸ ಇನ್ಫಿನಿಟಿ ಯೋಜನೆ ಆರಂಭಗೊಂಡಿದೆ.[ಏರ್‌ಟೆಲ್‌ನಿಂದ ವಿಡಿಯೋಕಾನ್ ಸ್ಪೆಕ್ಟ್ರಂ ಖರೀದಿ]

1,999 ರು ಗೆ ಅನಿಯಮಿತ ವಾಯ್ಸ್ ಕಾಲಿಂಗ್ (ಲೋಕಲ್ ಹಾಗೂ ಎಸ್ ಟಿಡಿ ಮತ್ತು ನ್ಯಾಷನಲ್ ರೋಮಿಂಗ್ ಸಹಿತ), ದಿನಕ್ಕೆ 100 ಎಸ್ ಎಂಎಸ್ 1 ಜಿಬಿ ತನಕ 3ಜಿ/4ಜಿ ಜೊತೆಗೆ ಅತ್ಯಂತ ಹೆಚ್ಚು ಡೌನ್ ಲೋಡ್ ಆಗಿ ದಾಖಲೆ ಬರೆದಿರುವ ಮ್ಯೂಸಿಕ್ ಅಪ್ಲಿಕೇಷನ್ WYNK ಹಾಗೂ ಮೂವಿಸ್ ಅಪ್ಲಿಕೇಷನ್ ಗೆ ಉಚಿತ ಚಂದಾದಾರರಾಗುವ ಸೌಲಭ್ಯ ಸಿಗಲಿದೆ.

Bharti Airtel announces postpaid plans with free unlimited voice calling

ಇದೇ ರೀತಿ 1,599 ಯೋಜನೆಯಲ್ಲಿ ವಾಯ್ಸ್ ಕಾಲಿಂಗ್ (ಲೋಕಲ್ ಹಾಗೂ ಎಸ್ ಟಿಡಿ ಮತ್ತು ನ್ಯಾಷನಲ್ ರೋಮಿಂಗ್ ಸಹಿತ), ದಿನಕ್ಕೆ 100 ಎಸ್ ಎಂಎಸ್, 5 ಜಿಬಿ ತನಕ 3ಜಿ/4ಜಿ ಜೊತೆಗೆ ಅತ್ಯಂತ ಹೆಚ್ಚು ಡೌನ್ ಲೋಡ್ ಆಗಿ ದಾಖಲೆ ಬರೆದಿರುವ ಮ್ಯೂಸಿಕ್ ಅಪ್ಲಿಕೇಷನ್ WYNK ಹಾಗೂ ಮೂವಿಸ್ ಅಪ್ಲಿಕೇಷನ್ ಗೆ ಉಚಿತ ಚಂದಾದಾರರಾಗುವ ಸೌಲಭ್ಯ ಸಿಗಲಿದೆ.

ಈಗ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮೈಪ್ಲ್ಯಾನ್ ಇನ್ಫಿನಿಟಿ ಮೂಲಕ ಉಚಿತವಾಗಿ ವಾಯ್ಸ್ ಕಾಲ್ ಮಾಡಬಹುದು, ಹಾಡು, ಮೂವೀಸ್ ಪಡೆದುಕೊಳ್ಳಬಹುದು ಎಂದು ಭಾರತ ಹಾಗೂ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಅಜಯ್ ಪುರಿ ಹೇಳಿದ್ದಾರೆ. ಒಟ್ಟಾರೆ, ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ದರ ಸಮಯಕ್ಕೆ ಇದು ನಾಂದಿ ಹಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharti Airtel today (August 05) announced two new postpaid plans wherein it is offering unlimited free voice calling, along with bundled 3G/4G data.
Please Wait while comments are loading...