ಎಲಾನ್‌ ಮಸ್ಕ್‌ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ ಬರ್ನಾರ್ಡ್ ಅರ್ನಾಲ್ಟ್

ನವದೆಹಲಿ, ಡಿಸೆಂಬರ್‌ 14: ವಿಶ್ವದ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ ಟೆಸ್ಲಾ ಮಾಲೀಕ, ಬಿಲಿಯನೇರ್‌ ಎಲಾನ್‌ ಮಸ್ಕ್‌ ಅವರನ್ನು ಮೀರಿಸಿ ಈಗ ಬರ್ನಾರ್ಡ್‌ ಅರ್ನಾಲ್ಟ್‌ಗೆ ಮುಂದೆ ಬಂದಿದ್ದಾರೆ.

ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಅವರು ಫೋರ್ಬ್ಸ್‌ನ ಬಿಲಿಯನೇರ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಬರ್ನಾರ್ಡ್ ಅರ್ನಾಲ್ಟ್‌ಗೆ ಬಿಟ್ಟುಕೊಟ್ಟಿದ್ದು, ಬರ್ನಾರ್ಡ್‌ ಅವರ ಕುಟುಂಬವು ವಿಶ್ವದ ಪ್ರಮುಖ ಐಷಾರಾಮಿ ಗುಂಪು ಎಲ್‌ವಿಎಂಎಚ್‌ ಅನ್ನು ಹೊಂದಿದೆ.

ಫೋರ್ಬ್ಸ್ ರಿಯಲ್‌ ಟೈಮ್‌ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್‌ 188.6 ಬಿಲಿಯನ್ ಡಾಲರ್‌ ಸಂಪತ್ತನ್ನು ಹೊಂದುವ ಮೂಲಕ 1ನೇ ಸ್ಥಾನದಲ್ಲಿದ್ದಾರೆ. ಎಲಾನ್‌ ಮಸ್ಕ್ ಈಗ 2ನೇ ಸ್ಥಾನಕ್ಕೆ ಕುಸಿದಿದ್ದು, ಒಟ್ಟು 178.6 ಬಿಲಿಯನ್‌ ಡಾಲರ್‌ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಆದಾಗ್ಯೂ, ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಮಸ್ಕ್ 1 ಬಿಲಿಯನ್‌ ಡಾಲರ್‌ ಮಾರ್ಜಿನ್‌ನೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿಯ ಟ್ಯಾಗ್ ಅನ್ನು ಹಿಡಿದಿಟ್ಟುಕೊಂಡಿದ್ದಾರೆ. ಪಟ್ಟಿಯ ಪ್ರಕಾರ ಅವರ ಸಂಪತ್ತು 168 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ ಮತ್ತು ಅರ್ನಾಲ್ಟ್ ಅವರದ್ದು 167 ಬಿಲಿಯನ್ ಡಾಲರ್‌ ಆಗಿದೆ ಎಂದು ತಿಳಿಸಿದೆ.

ಕಳೆದ ವಾರದಿಂದ ಇಬ್ಬರು ಬಿಲಿಯನೇರ್‌ಗಳು ಅಗ್ರಸ್ಥಾನದಲ್ಲಿ ಸ್ಥಾನವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 7 ರಂದು ಎಲಾನ್‌ ಮಸ್ಕ್ ಅವರು ಎಲೆಕ್ಟ್ರಿಕ್ ಕಾರ್ ತಯಾರಕರಲ್ಲಿನ ತನ್ನ ಪಾಲಿನ ಮೌಲ್ಯದಲ್ಲಿ ತೀವ್ರವಾದ ಕುಸಿತದ ನಂತರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್‌ನಲ್ಲಿ 44 ಶತಕೋಟಿ ಡಾಲರ್‌ ಸ್ವಾಧೀನಪಡಿಸಿಕೊಂಡು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಶೀರ್ಷಿಕೆಯನ್ನು ಸಂಕ್ಷಿಪ್ತವಾಗಿ ಕಳೆದುಕೊಂಡರು.

ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಡಜನ್‌ಗಟ್ಟಲೆ ಬ್ರಾಂಡ್‌ಗಳನ್ನು ಒಳಗೊಂಡಿರುವ ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್‌ನ ಮೂಲ ಕಂಪನಿ ಎಲ್‌ವಿಎಂಎಚ್‌ನ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್, ಇತ್ತೀಚಿನ ಜಾಗತಿಕ ಆರ್ಥಿಕ ಹಿಂಜರಿತಗಳ ಹೊರತಾಗಿಯೂ ಬಲವಾದ ಆದಾಯ ಮತ್ತು ಲಾಭದ ಬೆಳವಣಿಗೆಯನ್ನು ಮುಂದುವರೆಸಿದ್ದಾರೆ.

ಟ್ವಿಟ್ಟರ್‌ ಖರೀದಿಯಿಂದ ಹೊಡೆತ

ಟ್ವಿಟ್ಟರ್‌ ಖರೀದಿಯಿಂದ ಹೊಡೆತ

ಎಲಾನ್‌ ಮಸ್ಕ್‌ನ ನಿವ್ವಳ ಮೌಲ್ಯವು ನವೆಂಬರ್ 8 ರಂದು 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಯಿತು. ಏಕೆಂದರೆ ಹೂಡಿಕೆದಾರರು ಟೆಸ್ಲಾ ಅವರ ಷೇರುಗಳನ್ನು ತೊಡೆದುಹಾಕಿದರು ಮತ್ತು ವಿಶ್ವದ ಅತ್ಯಂತ ಬೆಲೆಬಾಳುವ ಎಲೆಕ್ಟ್ರಿಕ್ ವಾಹನ ತಯಾರಕರ ಉನ್ನತ ಕಾರ್ಯನಿರ್ವಾಹಕ ಮತ್ತು ಅತಿದೊಡ್ಡ ಷೇರುದಾರನಾದ ಮಸ್ಕ್‌ ಟ್ವಿಟ್ಟರ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

70 ಶತಕೋಟಿ ಡಾಲರ್‌ ಸಂಪತ್ತು ಕುಸಿತ

70 ಶತಕೋಟಿ ಡಾಲರ್‌ ಸಂಪತ್ತು ಕುಸಿತ

ಟೆಸ್ಲಾ ತನ್ನ ಅರ್ಧದಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಏಪ್ರಿಲ್‌ನಲ್ಲಿ ಟ್ವಿಟರ್‌ಗಾಗಿ ಬಿಡ್ ಮಾಡಿದ ನಂತರ ಮಸ್ಕ್‌ನ ನಿವ್ವಳ ಮೌಲ್ಯವು ಸುಮಾರು 70 ಶತಕೋಟಿ ಡಾಲರ್‌ ಕಡಿಮೆಯಾಗಿದೆ. 13 ಶತಕೋಟಿ ಡಾಲರ್‌ ಸಾಲ ಮತ್ತು 33.5 ಶತಕೋಟಿ ಡಾಲರ್‌ ಇಕ್ವಿಟಿ ಬದ್ಧತೆಯೊಂದಿಗೆ ಅಕ್ಟೋಬರ್‌ನಲ್ಲಿ ಮಸ್ಕ್ ಟ್ವಿಟರ್‌ಗಾಗಿ ಒಪ್ಪಂದವನ್ನು ಮುಗಿಸಿದರು.

ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಮಾಲೀಕ ಮಸ್ಕ್‌

ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಮಾಲೀಕ ಮಸ್ಕ್‌

ಮಸ್ಕ್ ಅವರ ಭವಿಷ್ಯವು ಪ್ರಾಥಮಿಕವಾಗಿ ಟೆಸ್ಲಾ ಷೇರು ಬೆಲೆಗೆ ಸಂಬಂಧಿಸಿರುತ್ತದೆ ಮತ್ತು ಅಕ್ಟೋಬರ್ ಅಂತ್ಯದಲ್ಲಿ ಟ್ವಿಟರ್ ಅನ್ನು ತೆಗೆದುಕೊಂಡ ನಂತರ ವಾಣಿಜ್ಯೋದ್ಯಮಿ ಎಲಾನ್‌ ಮಸ್ಕ್‌ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಟೆಸ್ಲಾ ಜೊತೆಗೆ, ಮಸ್ಕ್ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮತ್ತು ನ್ಯೂರಾಲಿಂಕ್‌ನ ಮುಖ್ಯಸ್ಥರಾಗಿದ್ದಾರೆ, ಇದು ಮಾನವನ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸಲು ಅಲ್ಟ್ರಾ ಹೈ ಬ್ಯಾಂಡ್‌ವಿಡ್ತ್ ಬ್ರೈನ್ ಮೆಷಿನ್ ಇಂಟರ್‌ಫೇಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ದ್ವಿತೀಯ ಸ್ಥಾನ ಎಲಾನ್‌ ಮಸ್ಕ್‌

ದ್ವಿತೀಯ ಸ್ಥಾನ ಎಲಾನ್‌ ಮಸ್ಕ್‌

ಅದ್ಯಾಗೂ ವಿಶ್ವದ ಟಾಪ್‌ 10 ಶ್ರೀಮಂತರನ್ನು ನಾವು ನೋಡುವುದಾರೆ ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾಡ್‌ ಅರ್ನಾಲ್ಟ್‌ (188.6 ಶತಕೋಟಿ ಡಾಲರ್‌), ದ್ವಿತೀಯ ಸ್ಥಾನ ಎಲಾನ್‌ ಮಸ್ಕ್‌ (176.6 ಶತಕೋಟಿ ಡಾಲರ್‌), ಮೂರನೇ ಸ್ಥಾನದಲ್ಲಿ ಭಾರತದ ಗೌತಮ್‌ ಅದಾನಿ (134 ಶತಕೋಟಿ ಡಾಲರ್‌), ನಾಲ್ಕನೇ ಸ್ಥಾನದಲ್ಲಿ ಜೆಫ್‌ ಬೆಜೋಸ್‌ (116 ಶತಕೋಟಿ ಡಾಲರ್‌), ಐದನೇ ಸ್ಥಾನದಲ್ಲಿ ವಾರೆನ್‌ ಬಫೆಟ್‌ (108.5 ಶತಕೋಟಿ ಡಾಲರ್‌), ಆರನೇ ಸ್ಥಾನದಲ್ಲಿ ಬಿಲ್‌ ಗೇಟ್ಸ್‌ (1073 ಶತಕೋಟಿ ಡಾಲರ್‌), ಏಳನೇ ಸ್ಥಾನದಲ್ಲಿ ಲರ್ರಿ ಎಲ್ಲಿಸನ್‌ (105.6 ಶತಕೋಟಿ ಡಾಲರ್‌), ಎಂಟನೇ ಸ್ಥಾನದಲ್ಲಿ ಭಾರತದ ಮುಕೇಶ್‌ ಅಂಬಾನಿ (92.5 ಶತಕೋಟಿ ಡಾಲರ್‌), ಒಂಬತ್ತನೇ ಸ್ಥಾನದಲ್ಲಿ ಲರ್ರಿ ಪೇಜ್‌ (84.5 ಶತಕೋಟಿ ಡಾಲರ್‌), ಹತ್ತನೇ ಸ್ಥಾನದಲ್ಲಿ ಸ್ಟೀವ್‌ ಬಲ್ಮೇರ್‌ (83.4 ಶತಕೋಟಿ ಡಾಲರ್‌) ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+