ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಕ್ಲಬ್ ರೆಸಾರ್ಟ್ ಪರಿಕಲ್ಪನೆ

Subscribe to Oneindia Kannada

ಬೆಂಗಳೂರು, ಆಗಸ್ಟ್, 03: ವೀಕೆಂಡ್ ಬಂದರೆ ಸಾಕು ಹಸಿರಿನ ವಾತಾವರಣದ ನಡುವೆ ಸ್ವಾದಿಷ್ಟ ಆಹಾರ ಸಿಗುವ ರೆಸಾರ್ಟ್‌ಗಳನ್ನು ಹುಡುಕಿಕೊಂಡು ಹೋಗುವವರಿಗೇನು ಕಡಿಮೆಯಿಲ್ಲ. ಆದರೆ, ಕ್ಲಬ್ ಮತ್ತು ರೆಸಾರ್ಟ್ ನಾವು ವಾಸಿಸುವ ಅಪಾರ್ಟ್ ಮೆಂಟ್ ಆವರಣದಲ್ಲೇ ಇದ್ದರೆ ಹೇಗಿರುತ್ತದೆ. ಅಂಥದ್ದೊಂದು ಟ್ರೆಂಡ್ ಐಟಿ ಸಿಟಿ ಬೆಂಗಳೂರಿನಲ್ಲಿ ಆರಂಭವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ನಿವಾಸಿಗಳು ವೀಕೆಂಡ್‌ನಲ್ಲಿ ರೆಸಾರ್ಟ್‌ಗಳನ್ನು ಹುಡುಕಿಕೊಂಡು ನಗರದ ಹೊರ ವಲಯಗಳಿಗೆ ಹೋಗುವದನ್ನು ತಪ್ಪಿಸಲು ಜತೆಗೆ ಸ್ಫೋರ್ಟ್ ಕ್ಲಬ್ ಲಭ್ಯವಾಗಲಿ ಎಂಬ ಉದ್ದೇಶದಿಂದ ಇಂಥದ್ದೊಂದು ಪರಿಕಲ್ಪನೆ ಇದೀಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದೆ. ನೂರಾರು ಎಕರೆ ವಿಶಾಲ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸುವ ಬಿಲ್ಡರ್‌ಗಳು ಇದೀಗ ತಮ್ಮ ಪ್ರಾಜೆಕ್ಟ್‌ನಲ್ಲಿ ಕ್ಲಬ್ ಮತ್ತು ರೆಸಾರ್ಟ್ ನಿರ್ಮಾಣಕ್ಕೂ ಒಂದಷ್ಟು ಜಾಗ ಮೀಸಲಿಡುತ್ತಿದ್ದಾರೆ.[ಊರ್ಧ್ವಮುಖಿಯಾಗಿರುವ ಬೆಂಗಳೂರು ರಿಯಲ್ ಎಸ್ಟೇಟ್]

Benagaluru: Brigade Signature Club Resort opens at Devanahalli

ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ದೇವನಹಳ್ಳಿ ವಸತಿ ಸಮುಚ್ಛಯವೊಂದರಲ್ಲಿ ನಿರ್ಮಾಣವಾಗಿರುವ 'ಸಿಗ್ನೇಚರ್ ಕ್ಲಬ್ ರೆಸಾರ್ಟ್'. ಕ್ಲಬ್ ಗೆ ಹೊಂದಿಕೊಂಡಿರುವ ರೆಸಾರ್ಟ್ ಗೆ ನೀವು ಕುಟುಂಬ ಸಮೇತ ತೆರಳಿ ವಾರದ ಕೊನೆಯನ್ನು ಮತ್ತಷ್ಟು ಸುಂದರ ಮಾಡಿಕೊಳ್ಳಬಹುದು.

ಆಟದೊಂದಿಗೆ ಬೊಂಬಾಟ್ ಊಟ
ಕ್ಲಬ್‌ಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ರೆಸಾರ್ಟ್ ನಲ್ಲಿ ಸ್ನೇಹಿತರು, ಪ್ರೇಮಿಗಳು, ಸಹೋದ್ಯೋಗಿಗಳು ಅಥವಾ ಕುಟುಂಬ ಸಮೇತರಾಗಿ ಬಂದು ಇಷ್ಟವಾದ ತಿಂಡಿ, ತಿನಿಸುಗಳನ್ನು ಸವಿದು, ಇಷ್ಟವಾದ ಪಾನೀಯ ಗಳನ್ನು ಕುಡಿದು ಆನಂದಿಸಬಹುದಾಗಿದೆ.[ದೇವನಹಳ್ಳಿ ಸಮೀಪದ 'ಕ್ಯಾಲಿಪೋರ್ನಿಯಾ'ಕ್ಕೆ ಹೋಗೋಣ ಬನ್ನಿ]

ಟ್ರಾಫಿಕ್ ಕಿರಿಕಿರಿಯಿಲ್ಲದೆ, ಹಚ್ಚಹಸಿರಿನಿಂದ ಕೂಡಿದ ಪ್ರಶಾಂತ ವಾತಾವರಣದ ನಡುವೆ ವಿಶಿಷ್ಟ ಖಾದ್ಯಗಳನ್ನು ಸವಿಯುವ ಅವಕಾಶ ಹಾಗೂ ಇಷ್ಟವಾದ ಕ್ರೀಡೆಗಳನ್ನು ಆಡಲು ಸೂಕ್ತ ವಾತಾವರಣ ಕಲ್ಪಿಸುವ ಉದ್ದೇಶ ದಿಂದ ಕ್ಲಬ್ ರೆಸಾರ್ಟ್ ಪರಿಕಲ್ಪನೆ ಪರಿಚಯಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಗ್ರಾಹಕರ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗುತ್ತದೆ ಎಂದು ಬಿಗ್ರೇಡ್ ಹಾಸ್ಪಿಟಾಲಿಟಿ ಕಾರ್ಯಕಾರಿ ನಿರ್ದೇಶಕ ವಿನೀತ್ ವರ್ಮಾ ಹೇಳುತ್ತಾರೆ.

ಕ್ಲಬ್ ರೆಸಾರ್ಟ್ ವಿಶೇಷತೆ?
ಬೆಂಗಳೂರು ಹೊರ ವಲಯಗಳಲ್ಲಿ ಅಪಾರ್ಟ್‌ಮೆಂಟ್, ವಿಲ್ಲಾ ಸಂಸ್ಕೃತಿ ಹೆಚ್ಚು ಬೆಳೆಯುತ್ತಿದೆ. ಹೀಗಾಗಿ ವಸತಿ ಸಮುಚ್ಛಯ ವ್ಯಾಪ್ತಿ ಯಲ್ಲೇ ವಿಶಾಲ ಪಾರ್ಕಿಂಗ್ ಲಾಟ್, ಸುಸಜ್ಜಿತ ಜಿಮ್, ಚೆಸ್, ಬಿಲಿಯರ್ಡ್ಸ್, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಮತ್ತಿತರ ಹೊರಾಂಗಣ ಕ್ರೀಡೆಗಳಿಗಾಗಿ ಒಲಿಂಪಿಕ್ ಮಾದರಿಯ ಪೂಲ್‌ಗಳ ಸೌಲಭ್ಯಗಳನ್ನು ಈ ಕ್ಲಬ್ ಒಳಗೊಂಡಿದೆ. ಅಷ್ಟೇ ಅಲ್ಲ, ಸ್ವಿಮ್ಮಿಂಗ್ ಆಸಕ್ತರಿಗಾಗಿ ಸುಂದರವಾದ ಒಳಾಂಗಣ ಈಜುಕೊಳವೂ ಇಲ್ಲಿದೆ. ತಂಗಲು 45 ಆಕರ್ಷಕ ಕೊಠಡಿಗಳನ್ನೂ ನಿರ್ಮಿಸಲಾಗಿದ್ದು, ಹುಟ್ಟುಹಬ್ಬ ಅಥವಾ ವೀಕೆಂಡ್ ಪಾರ್ಟಿ ಇತರ ಕಾರ್ಯಕ್ರಮಗಳನ್ನೂ ಆಯೋಜಿಸಲು ಅವಕಾಶವಿದೆ

ಸದಸ್ಯರಿಗೆ ಮಾತ್ರ ಪ್ರವೇಶ:
ಬೆಂಗಳೂರಿಗರಿಗೆ ಕ್ಲಬ್ ಸಂಸ್ಕೃತಿ ಹೊಸದೇನಲ್ಲ. ಯಾವುದೇ ಕ್ಲಬ್‌ಗಳನ್ನು ಪ್ರವೇಶಿಸಬೇಕಿದ್ದರೂ ಸದಸ್ಯತ್ವ ಹೊಂದಿರಲೇ ಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ, ಅಪಾರ್ಟ್‌ಮೆಂಟ್ ಆವರಣದಲ್ಲಿ ನಿರ್ಮಿಸಲಾಗಿರುವ ಸಿಗ್ನೇಚರ್ ಕ್ಲಬ್ ರೆಸಾರ್ಟ್ ಪ್ರವೇಶಿಸಲು ಇಚ್ಛಿಸುವವರು ಕಡ್ಡಾಯವಾಗಿ ಇದರ ಸದಸ್ಯತ್ವ ಹೊಂದಿರಬೇಕು. ಅಪಾರ್ಟ್‌ಮೆಂಟ್ ನಿವಾಸಿಗಳು ಮಾತ್ರವಲ್ಲದೇ ಸದಸ್ಯತ್ವ ಹೊಂದಿದ ಯಾರು ಬೇಕಾದರೂ ಕ್ಲಬ್‌ನ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BCV Developers, a joint venture of Brigade Enterprises with Classic Group and Valmark launched its latest lifestyle club ‘Signature Club Resort' at Brigade Orchards, a 130-acre smart township in Devanahalli, near Bengaluru. The new resort is composed of 45 executive rooms and suites with amenities that suit both business and leisure travellers.
Please Wait while comments are loading...