ನನ್ನ ಆಸ್ತಿ ವಿವರ ಕೇಳುವ ಹಕ್ಕು ಬ್ಯಾಂಕುಗಳಿಗಿಲ್ಲ : ಮಲ್ಯ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 21 : ಸಾಲ ಮಾಡಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಬ್ಯಾಂಕುಗಳಿಗೆ ತಮ್ಮ ಆಸ್ತಿ ವಿವರ ಕೇಳುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಕೋರ್ಟ್‌ಗೆ ಆಸ್ತಿ ವಿವರವನ್ನು ಸಲ್ಲಿಸಲು ಜೂನ್ 26ರ ತನಕ ಕಾಲವಕಾಶ ಬೇಕು ಎಂದು ಕೇಳಿದ್ದಾರೆ.

ಏಪ್ರಿಲ್ 7ರಂದು ವಿಜಯ್ ಮಲ್ಯ ಅವರ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಮಲ್ಯ ಮತ್ತು ಪತ್ನಿ, ಮಕ್ಕಳ ಆಸ್ತಿಯನ್ನು ಘೋಷಣೆ ಮಾಡುವಂತೆ ಸೂಚನೆ ನೀಡಿತ್ತು. ಗುರುವಾರ ಪುನಃ ಅರ್ಜಿಯ ವಿಚಾರಣೆ ನಡೆಯಿತು. [ಮಲ್ಯ ಆಸ್ತಿ ಘೋಷಣೆ ಮಾಡಲು ಸುಪ್ರೀಂ ಆದೇಶ]

vijay mallya

ಅರ್ಜಿಯ ವೇಳೆ ಮಲ್ಯ ಪರ ವಕೀಲರು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದರು. ಆಸ್ತಿ ವಿವರವನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲು 2016ರ ಜೂನ್ 26ರ ತನಕ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ಬ್ಯಾಂಕುಗಳಿಗೆ ತನ್ನ ಆಸ್ತಿ ವಿವರಗಳನ್ನು ಕೇಳುವ ಹಕ್ಕಿಲ್ಲ ಎಂದು ಹೇಳಿಕೆ ಸಲ್ಲಿಸಿರುವ ಅವರು, ಬ್ಯಾಂಕ್‌ಗಳು ನನ್ನ ವಿದೇಶದ ಆಸ್ತಿಯನ್ನು ನೋಡಿ ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ ಸಾಲ ಕೊಟ್ಟಿಲ್ಲ ಎಂದು ಹೇಳಿದ್ದಾರೆ. [ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ತಪ್ಪಿತಸ್ಥ]

ಗಡಿಪಾರಿಗೆ ಪ್ರಕ್ರಿಯೆ ಆರಂಭಿಸಿ : ಮತ್ತೊಂದು ಕಡೆ ಮುಂಬೈ ಕೋರ್ಟ್‌ನಿಂದ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ತಂದಿರುವ ಜಾರಿ ನಿರ್ದೇಶನಾಲಯ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಮಲ್ಯ ಗಡಿಪಾರಿನ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಮನವಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Chairman of the UB group, Vijay Mallya today filed an affidavit in the Supreme Court stating that the banks have no right to access information about his assets. In the affidavit he said he would submit in a sealed cover details of his assets by June 26.
Please Wait while comments are loading...