ಬ್ಯಾಂಕ್ ಆಫ್ ಇಂಡಿಯಾದ ನೂರಾರು ATMs ಬಂದ್. ಯಾಕೆ ?

Posted By:
Subscribe to Oneindia Kannada
   ಫೆಬ್ರವರಿ ಅಂತ್ಯದೊಳಗೆ ಬ್ಯಾಂಕ್ ಆಫ್ ಇಂಡಿಯಾದ 700 ಎಟಿಎಂಗಳು ಬಂದ್ | Oneindia Kannada

   ಬೆಂಗಳೂರು, ಫೆಬ್ರವರಿ 15: ನಿರ್ವಹಣಾ ವೆಚ್ಚ ಕಡಿತ ಎಂಬ ಪ್ರಕ್ರಿಯೆ ಈಗ ಐಟಿ ಕ್ಷೇತ್ರದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿರಿಸಿದೆ. ಸರಿ ಸುಮಾರು 700ಕ್ಕೂ ಅಧಿಕ ಎಟಿಎಂಗಳನ್ನು ಬಂದ್ ಮಾಡಲು ಪ್ರಮುಖ ಬ್ಯಾಂಕೊಂದು ನಿರ್ಧರಿಸಿದೆ.

   ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್ ನ 700 ಎಟಿಎಂಗಳು ಬಾಗಿಲು ಮುಚ್ಚಲು ಮುಂದಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಈ ರೀತಿ ನಿರ್ವಹಣಾ ವೆಚ್ಚ ಸರಿದೂಗಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

   Bank of India may shut 700 ATMs by the end of February

   ಮುಂದಿನ ದಿನಗಳಲ್ಲಿ ಮತ್ತೆ 300 ಎಟಿಎಂ ಮುಚ್ಚುವ ಸಾಧ್ಯತೆಯಿದೆ. ಬ್ಯಾಂಕ್ ನ non performing asset (ಎನ್ ಪಿಎ) ಹೆಚ್ಚಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳನ್ನು ಪಾಲಿಸಬೇಕಾದರೆ, ಈ ರೀತಿ ಕ್ರಮ ಅನಿವಾರ್ಯವಾಗಿದೆ.

   ಗ್ರಾಹಕರಿಗೆ ಈ ಬಗ್ಗೆ ಸೂಚನೆ ನೀಡಲಾಗುತ್ತದೆ. 2017 ಏಪ್ರಿಲ್ ನಲ್ಲಿ 7,717 ಎಟಿಎಂ ಗಳನ್ನು 7,807ಕ್ಕೆ ತಗ್ಗಿಸಲಾಗಿತ್ತು.

   ಬ್ಯಾಂಕಿನ ಷೇರು ಮೌಲ್ಯ ಬುಧವಾರದಂದು ಶೇ 7.87ರಷ್ಟು ಕುಗ್ಗಿತ್ತು. ಎನ್ ಪಿಎ ನಿಯಮ ಹಾಗೂ 3ನೇ ತ್ರೈಮಾಸಿಕದಲ್ಲಿ ಆಗಿರುವ ನಷ್ಟ ಇದಕ್ಕೆ ಕಾರಣವಾಗಿದೆ. ಡಿಸೆಂಬರ್ ಗೆ ಅಂತ್ಯಕಂಡ ತ್ರೈಮಾಸಿಕದಲ್ಲಿ 2,341.20 ಕೋಟಿ ರು ನಷ್ಟ ಅನುಭವಿಸಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In a cost-cutting drive, public sector lender Bank of India will shut 400 ATMs and will take a call on closing a further 300 ATMs by the end of February, reports

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ