Get Updates
Get notified of breaking news, exclusive insights, and must-see stories!

ದೇಶದೆಲ್ಲೆಡೆ ಬ್ಯಾಂಕುಗಳ ಅಕ್ಟೋಬರ್ ತಿಂಗಳ ರಜೆ ದಿನ ಪಟ್ಟಿ

ನವದೆಹಲಿ, ಸೆಪ್ಟೆಂಬರ್ 24: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಅಕ್ಟೋಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ವೀಕೆಂಡ್ ಕರ್ಫ್ಯೂ ಕೂಡಾ ಬಹುತೇಕ ಎಲ್ಲೆಡೆ ಹಿಂಪಡೆಯಲಾಗಿದೆ. ಆದರೆ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಕಡಿಮೆ ರಜೆ ದಿನಗಳಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ಸಿಕ್ಕಿತ್ತು. ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 21 ದಿನಗಳ ರಜೆ ಸಿಗಲಿದೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

Bank Holidays in October 2021: Full List of Bank Holiday Dates

ಗಮನಿಸಿ: ಕರ್ನಾಟಕದಲ್ಲಿ ಮಹಾಲಯ ಅಮಾವಾಸ್ಯೆ,ದಸರಾ ದಿನ ರಜೆ ಲಭ್ಯವಾಗಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..

ಅಕ್ಟೋಬರ್ 2021ರಲ್ಲಿ ಬ್ಯಾಂಕ್ ರಜಾ ದಿನ

ಅಕ್ಟೋಬರ್ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನ ದಿನಾಂಕ ರಜಾ ದಿನ ನಗರ
ಅಕ್ಟೋಬರ್ 1, 2021 ಶುಕ್ರವಾರ ಬ್ಯಾಂಕ್ ಅಕೌಂಟ್ ಕ್ಲೋಸಿಂಗ್ ಗ್ಯಾಂಗ್‌ಟಕ್
ಅಕ್ಟೋಬರ್ 2, 2021 ಶನಿವಾರ ಮಹಾತ್ಮಾ ಗಾಂಧಿ ಜಯಂತಿ ಎಲ್ಲಾ ರಾಜ್ಯಗಳಲ್ಲಿ
ಅಕ್ಟೋಬರ್ 3 ಭಾನುವಾರ ವಾರದ ರಜೆ ಭಾರತದೆಲ್ಲೆಡೆ
ಅಕ್ಟೋಬರ್ 6 ಬುಧವಾರ ಮಹಾಲಯ ಅಮಾವಾಸ್ಯೆ ಬೆಂಗಳೂರು, ಅಗರ್ತಲಾ, ಕೋಲ್ಕತಾ
ಅಕ್ಟೋಬರ್ 7 ಗುರುವಾರ ಮೆರಾ ಚಯೊರೆನ್ ಹೌಬಾ ಲೈನಿಂಗ್ ಥೊಯೊ ಸನಮಹಿ ಇಂಫಾಲ್
ಅಕ್ಟೋಬರ್ 9 ಶನಿವಾರ 2ನೇ ಶನಿವಾರ ದೇಶದೆಲ್ಲೆಡೆ
ಅಕ್ಟೋಬರ್ 10 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಅಕ್ಟೋಬರ್ 12 ಮಂಗಳವಾರ ದುರ್ಗಾಪೂಜಾ, ಮಹಾ ಸಪ್ತಮಿ ಅಗರ್ತಲಾ, ಕೋಲ್ಕತಾ
ಅಕ್ಟೋಬರ್ 12 ಬುಧವಾರ ದುರ್ಗಾಪೂಜಾ, ಮಹಾ ಅಷ್ಟಮಿ ಅಗರ್ತಲಾ, ಭುವನೇಶ್ವರ್, ಗ್ಯಾಂಗ್ ಟಕ್
ಅಕ್ಟೋಬರ್ 14 ಗುರುವಾರ ದುರ್ಗ ಪೂಜಾ, ಮಹಾನವಮಿ, ಆಯುಧ ಪೂಜಾ ಬೆಂಗಳೂರು, ಅಗರ್ತಲಾ, ಗುವಾಹತಿ, ಕಾನ್ಪುರ್, ಕೊಚ್ಚಿ, ಕೋಲ್ಕತಾ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಚೆನ್ನೈ, ಗ್ಯಾಂಗ್ ಟಕ್, ಕೊಚ್ಚಿ, ಶ್ರೀನಗರ, ತಿರುವನಂತಪುರಂ
ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ದೇಶದೆಲ್ಲೆಡೆ ರಜೆ
ಅಕ್ಟೋಬರ್ 16 ಶನಿವಾರ ದುರ್ಗಾಪೂಜಾ ಗ್ಯಾಂಗ್ ಟಕ್
ಅಕ್ಟೋಬರ್ 17 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಅಕ್ಟೋಬರ್ 18 ಸೋಮವಾರ ಕೋಟಿ ಬಿಹು ಗುವಾಹತಿ
ಅಕ್ಟೋಬರ್ 19 ಮಂಗಳವಾರ ಈದ್ ಮಿಲಾದ್ ಅಹಮದಾಬಾದ್, ಬೇಲಾಪುರ್, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ್, ನವದೆಹಲಿ, ರಾಯ್ ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ
ಅಕ್ಟೋಬರ್ 20 ಬುಧವಾರ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಅಗರ್ತಲಾ, ಬೆಂಗಳೂರು, ಚಂದೀಗಢ, ಕೋಲ್ಕತಾ, ಶಿಮ್ಲಾ
ಅಕ್ಟೋಬರ್ 22 ಶುಕ್ರವಾರ ಈದ್ ಮಿಲಾದ್ ಉಲ್ ನಬಿ ಜಮ್ಮು, ಶ್ರೀನಗರ
ಅಕ್ಟೋಬರ್ 23 ಶನಿವಾರ ನಾಲ್ಕನೇ ಶನಿವಾರ ದೇಶದೆಲ್ಲೆಡೆ
ಅಕ್ಟೋಬರ್ 24 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಅಕ್ಟೋಬರ್ 26 ಮಂಗಳವಾರ Accession Day ಜಮ್ಮು, ಶ್ರೀನಗರ
ಅಕ್ಟೋಬರ್ 31 ಭಾನುವಾರ ವಾರದ ರಜೆ ದೇಶದೆಲ್ಲೆಡೆ

ಇದಲ್ಲದೆ, ದಸರಾ ಹಬ್ಬ ದಿನದಂದು ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+