ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಎಟಿಎಂ ಬಳಕೆ ಮಿತಿ ಹೆಚ್ಚಳ

By Mahesh
|
Google Oneindia Kannada News

ಬೆಂಗಳೂರು, ಅ.16: ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಅನೇಕ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರಮುಖವಾಗಿ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವವರಿಗೆ ಅನುಕೂಲವಾಗುವಂತೆ ಎಟಿಎಂ ಬಳಕೆ ಮಿತಿ ಹೆಚ್ಚಳ ಮಾಡಲಾಗಿದೆ. ಹೊಸ ನಿಯಮಗಳು ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ಎಸ್ ಬಿ ಐ ಗ್ರಾಹಕರಿಗೆ ಎಟಿಎಂ ಬಳಕೆ ಮಿತಿಯನ್ನು ಹೆಚ್ಚಿಸಲು ಹಾಗೂ 25 ಸಾವಿರಕ್ಕಿಂತ ಹೆಚ್ಚು ಹಣ ಖಾತೆಯಲ್ಲಿ ಹೊಂದಿರುವವರಿಗೆ ಅನಿಯಮಿತ ಎಟಿಎಂ ಬಳಕೆಗೆ ಅವಕಾಶ ಮಾಡಿಕೊಡಲು ಬ್ಯಾಂಕ್ ನಿರ್ಧರಿಸಿದೆ. [ಎಸ್ಬಿಐ ಇನ್ಟಚ್ ಡಿಜಿಟಲ್ ಸ್ಟೋರ್]

ಹೊಸ ನಿಯಮದ ಅನ್ವಯ 25 ಸಾವಿರ ರು ತನಕ ಬ್ಯಾಲೆನ್ಸ್ ಹೊಂದಿರುವವರು ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣ ಪಡೆಯಬಹುದು. 25 ಸಾವಿರಕ್ಕಿಂತ ಹೆಚ್ಚು ಬ್ಯಾಲೆನ್ಸ್ ಕಾಯ್ದುಕೊಳ್ಳುವವರು ಸ್ಟೇಟ್ ಬ್ಯಾಂಕಿನ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ತೆಗೆಯಬಹುದು. ಸ್ಟೇಟ್ ಬ್ಯಾಂಕಿನ ಯಾವುದೇ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ತೆಗೆಯಬಹುದು. ಸ್ಟೇಟ್ ಬ್ಯಾಂಕ್ ಯೇತರ ಎಟಿಎಂಗಳಲ್ಲಿ ಮಾತ್ರ ತಿಂಗಳಿಗೆ ಮೂರು ಬಾರಿಯಷ್ಟೇ ವ್ಯವಹಾರ ನಡೆಸಬಹುದು.

Bank balance matters! SBI revamps its ATM usage policies wef Nov 1

ಒಂದು ವೇಳೆ ಎಟಿಎಂ ಬಳಕೆ ಮಿತಿ ಮೀರಿದರೆ 5 ರು ಪ್ರತಿ ವ್ಯವಹಾರಕ್ಕೆ ಚಾರ್ಜ್ ಮಾಡಲಾಗುತ್ತದೆ. ಅದೇ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ 20 ರು ಹೆಚ್ಚುವರಿ ಶುಲ್ಕ ಕಟ್ ಆಗಲಿದೆ.

ತಮ್ಮ ಖಾತೆಯಲ್ಲಿ 1 ಲಕ್ಷರು.ಗಳಿಗಿಂತಲೂ ಹೆಚ್ಚು ಹಣ ಇಟ್ಟಿರುವವರು ದೇಶಾದ್ಯಂತ ಇರುವ ಎಸ್.ಬಿಐ ಎಟಿಎಂಗಳಲ್ಲಿ ಅನಿಯಮಿತ ವ್ಯವಹಾರ ನಡೆಸಬಹುದು. ಇಡೀ ತಿಂಗಳು ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಎಸ್.ಬಿಐ ಗ್ರಾಹಕರಿಗೆ ಆಯಾ ಶಾಖೆಯೆ ಎಟಿಎಂಗಳಲ್ಲಿ ಮಾಡಬಹುದಾದ ವ್ಯವಹಾರದ ಮಿತಿಯ ಸಂಖ್ಯೆಯನ್ನು 5ರಿಂದ 9ಕ್ಕೆ ಏರಿಸಲಾಗಿದೆ.

ಈ ಎಲ್ಲಾ ಸೌಲಭ್ಯಗಳು ಆರು ಪ್ರಮುಖ ನಗರಗಳಲ್ಲಿ ಜಾರಿಗೆ ಬರಲಿದೆ. ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಹಾಗೂ ಹೈದರಾಬಾದಿನಲ್ಲಿ ಮೊದಲಿಗೆ ಜಾರಿಗೆ ಬರಲಿದೆ. ಉಳಿದೆಡೆ ಸದ್ಯಕ್ಕೆ ಇರುವ ನಿಯಮಗಳೇ ಜಾರಿಯಲ್ಲಿರಲಿದೆ.

English summary
The State Bank of India (SBI), India's largest lender has reviewed its ATM usage charges, allowing people with hefty bank balance free transactions across all banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X