• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕರ್ಷಕ Audi ಎಸ್5 ಸ್ಪೋರ್ಟ್‍ಬ್ಯಾಕ್ ಭಾರತದಲ್ಲಿ ಬಿಡುಗಡೆ

|

ಬೆಂಗಳೂರು, ಮಾರ್ಚ್ 23: ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಸಂಸ್ಥೆ ಆಡಿ ಇಂದು ಹೊಸ ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ಅತ್ಯಾಧುನಿಕ ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ 3.0ಲೀಟರ್, ಟ್ವಿನ್-ಟರ್ಬೊ ಟಿಎಫ್‍ಎಸ್‍ಐ ಎಂಜಿನ್ ಹೊಂದಿದ್ದು 354ಎಚ್‍ಪಿ ಮತ್ತು 500 ಎನ್‍ಎಂ ಟಾರ್ಕ್ ಹೊಂದಿದ್ದು 8-ಸ್ಪೀಡ್ ಟಿಪ್ಟ್ರಾನಿಕ್ ಗೇರ್‌ಬಾಕ್ಸ್ ಹೊಂದಿದ್ದು ಇದು ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ಕಳುಹಿಸುತ್ತದೆ. ನಾಲ್ಕು-ಡೋರ್‌ನ ಸ್ಪೋರ್ಟ್ ಕೂಪೆ ಭಾರತಕ್ಕೆ ಸಿಬಿಯು(ಕಂಪ್ಲೀಟ್ಲಿ ಬಿಲ್ಟ್ ಅಪ್) ರೀತಿಯಲ್ಲಿ ತರಲಾಗಿದೆ ಮತ್ತು ಬೆಲೆ ರೂ. 79.06 ಲಕ್ಷಗಳು ಹೊಂದಿದೆ.

ಆಡಿ ಇಂಡಿಯಾ ಮುಖ್ಯಸ್ಥ ಬಲ್‍ಬೀರ್ ಸಿಂಗ್ ಧಿಲ್ಲೋನ್, "ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ ಈ ವರ್ಷ ದ್ವಿತೀಯ ಉತ್ಪನ್ನ ಬಿಡುಗಡೆಯಾಗಿದೆ ಮತ್ತು ಈ ಬ್ಯೂಟಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ ಒಂದು ಕಡೆ ತನ್ನ ಅನನ್ಯ ಸ್ಟೈಲಿಂಗ್ ಮತ್ತು ಸಕ್ರಿಯ ಚಾಲನೆಯ ಅನುಭವಕ್ಕೆ ಹಾಗೂ ಪ್ರತಿನಿತ್ಯದ ಬಳಕೆಯಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ ಮತ್ತೊಂದೆಡೆ ಐದು ಸೀಟುಗಳ ಸೌಖ್ಯ ಹೊಂದಿದೆ. ಗ್ಲಾಮರಸ್, ಶಕ್ತಿಯುತ ಮತ್ತು ಪ್ರಾಯೋಗಿಕವಾಗಿರು ಇದು ಕೊಳ್ಳುಗರು ಎಲ್ಲರೂ ಬಯಸುವ ಪ್ರಸ್ತಾವನೆಯನ್ನು ಹೊಂದಿದೆ. ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ ದೇಶದಲ್ಲಿ ನಮ್ಮ ಕಾರ್ಯಕ್ಷಮತೆಯ ಪೋರ್ಟ್‍ಫೋಲಿಯೋವನ್ನು ಮತ್ತಷ್ಟು ಸದೃಢಗೊಳಿಸುತ್ತದೆ" ಎಂದರು.

ಆಡಿ ಎಸ್5 ಸ್ಪೋರ್ಟ್‍ಬ್ಯಾಕ್ ಅದ್ಭುತ ಸೌಖ್ಯ ಮತ್ತು ಸ್ಪೋರ್ಟಿನೆನ್ಸ್ ಸಂಯೋಜನೆ ನೀಡುತ್ತದೆ. ಸಪಾಟಾದ ತಳಹದಿಯ ಸ್ಟೀರಿಂಗ್ ವ್ಹೀಲ್, ಸ್ಪೋರ್ಟ್ ಫ್ರಂಟ್ ಸೀಟುಗಳು ಮತ್ತು ಅಲ್ಕಾಂಟಾರಾ ಲೆದರ್ ಅಪ್‍ಹೋಲ್ಸ್‌ಟ್ರೀ ಕ್ಯಾಬಿನ್ ರೂಪಿಸಿವೆ.

ಆಡಿ ವರ್ಚುಯಲ್ ಕಾಕ್‍ಪಿಟ್ ಪ್ಲಸ್ ಅಪ್‍ಡೇಟ್ ಆದ ಎಂಎಂಐ ಸಿಸ್ಟಂ ಮತ್ತು ಪನೋರಮಿಕ್ ಗ್ಲಾಸ್ ಸನ್ ರೂಫ್ ಒಳಗಡೆಯ ಪ್ರಮುಖಾಂಶಗಳಾಗಿವೆ. ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 19 ಸ್ಪೀಕರ್, 755 ಡಬ್ಲ್ಯೂ ಬ್ಯಾಂಕ್ ಅಂಡ್ ಒಲುಫ್ಸೆನ್ ಪ್ರೀಮಿಯಂ ಸೌಂಡ್ ಸಿಸ್ಟಂ 3ಡಿ ಸೌಂಡ್‍ನೊಂದಿಗೆ ಕೊಳ್ಳುಗರಿಗೆ ಐಚ್ಛಿಕ ಅಪ್‍ಗ್ರೇಡ್‍ಗಳನ್ನು ನೀಡುತ್ತದೆ.

ನಾಲ್ಕು ಚಕ್ರಗಳಿಗೆ ಕ್ವಾಟ್ರೊ ಪರ್ಮನೆಂಟ್ ಆಲ್-ವ್ಹೀಲ್ ಡ್ರೈವ್, ಸೆಲ್ಫ್ ಲಾಕಿಂಗ್ ಡಿಫರೆನ್ಷಿಯಲ್‍ನೊಂದಿಗೆ ಬಂದಿದ್ದು ಕಾರನ್ನು ಕೇವಲ 4.8 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ. ವೇಗ ನೀಡುತ್ತದೆ.

ಧಿಲ್ಲೋನ್, "ಹೊಸ ಉತ್ಪನ್ನಗಳ ಬಿಡುಗಡೆಯಿಂದ ನಾವು ಎಲ್ಲ ವರ್ಗಗಳಲ್ಲೂ ಗ್ರಾಹಕರ ಸಂತೋಷಕ್ಕೆ ಗಮನ ನೀಡಿದ್ದೇವೆ. ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ನಮ್ಮ ಮಾರಾಟವು ಕೂಡಾ ಹೆಚ್ಚಾಗುತ್ತಿದೆ ಮತ್ತು ನಾವು ಈ ವರ್ಷ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಹೊಂದಿದ್ದೇವೆ. 2021 ಆಡಿ ಇಂಡಿಯಾಗೆ ಉತ್ಸಾಹಕರ ವರ್ಷವಾಗಿದೆ ಮತ್ತು ಗ್ರಾಹಕರು ಬ್ರಾಂಡ್ ಆಡಿಗೆ ಮುಂದೆ ಇರುವುದನ್ನು ಕಾಣಲು ಥ್ರಿಲ್ ಆಗುತ್ತಾರೆ. ನಾನು ಈಗ ಹೇಳುವುದೇನೆಂದರೆ, ಮುಂದಿನ ತಿಂಗಳುಗಳಲ್ಲಿ ಸಾಕಷ್ಟು ಚಟುವಟಿಕೆಗೆ ಸಜ್ಜಾಗಿರಿ" ಎಂದರು.

English summary
Audi, the German luxury car manufacturer, today announced the launch of the new Audi S5 Sportback in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X