• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ರಿಮೆಡ್‌ ಫಾರ್ಮಾದಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಹ್ಯಾಂಡ್‌ ಸ್ಯಾನಿಟೈಸರ್‌

|

ಬೆಂಗಳೂರು, ಜೂನ್‌ 9: ಸಸ್ಯಗಳನ್ನು ಆಧರಿಸಿದ ಮತ್ತು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಟ್ಟ ಸೂಕ್ಷ್ಮ ಔಷಧಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂಚೂಣಿಯಲ್ಲಿ ಇರುವ ಬೆಂಗಳೂರಿನ ಅತ್ರಿಮೆಡ್‌ ಫಾರ್ಮಾ, ಗಿಡಮೂಲಿಕೆಗಳಿಂದ ತಯಾರಿಸಿದ ಅಗ್ಗದ ಬೆಲೆಯ ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿದೆ. ಈ ಉತ್ಪನ್ನದ ಮೂಲಕ ಕಂಪನಿಯು ಕೋವಿಡ್‌-19 ವಿರುದ್ಧದ ಸಮರದಲ್ಲಿ ಕೈಜೋಡಿಸಿದೆ.

   ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Oneindia Kannada

   ಕಂಪನಿ ತಯಾರಿಸಿರುವ ಸಸ್ಯ ವಿಜ್ಞಾನ ಶ್ರೇಣಿಯ ಈ ಹ್ಯಾಂಡ್‌ ಸ್ಯಾನಿಟೈಸರ್‌, ಬೇವು ಮತ್ತು ತುಳಸಿಯ ಸೂಕ್ಷ್ಮ ಕಣಗಳನ್ನು ಒಳಗೊಂಡಿದೆ. ಇದು ಬ್ಯಾಕ್ಟಿರೀಯಾ ಮತ್ತು ವೈರಾಣುಗಳನ್ನು ನಿವಾರಿಸುವ ಸಸ್ಯಜನ್ಯ ಔಷಧಿ ಗುಣ ಹೊಂದಿದೆ.

   ಭಾರತದಲ್ಲಿ ದಾಂಧಲೆ ಎಬ್ಬಿಸಿರುವ ಕೊರೊನಾ ವೈರಸ್ ಚೀನಾದ್ದಲ್ಲ: ಮೂಲ ಯಾವುದು?

   'ವೈದ್ಯಕೀಯ ಕ್ಷೇತ್ರಕ್ಕೆ ಸೇರಿರುವ ನಾವು ಕೂಡ, ವಿಶ್ವದಾದ್ಯಂತ ಕಂಡು ಬಂದಿರುವ ಆರೋಗ್ಯ ಬಿಕ್ಕಟ್ಟಿಗೆ ನಮ್ಮದೇ ಆದ ಕೊಡುಗೆ ಕೊಡಬೇಕು ಎನ್ನುವ ಹಂಬಲವನ್ನು ಈ ಗಿಡಮೂಲಿಕೆಗಳಿಂದ ತಯಾರಿಸಿರುವ ಹ್ಯಾಂಡ್‌ ಸ್ಯಾನಿಟೈಸರ್‌ ಮೂಲಕ ಈಡೇರಿಸಿಕೊಂಡಿದ್ದೇವೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಕ್ಕೆ ಅಗತ್ಯವಾದ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಜನಸಾಮಾನ್ಯರ ಕೈಗೆ ಸುಲಭವಾಗಿ ಎಟುಕುವ ಬೆಲೆಯಲ್ಲಿ ತಯಾರಿಸಲಾಗಿದೆ' ಎಂದು ಅತ್ರಿಮೆಡ್‌ ಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಡಾ. ಹೃಷಿಕೇಷ್ ದಾಮ್ಲೆ ಹೇಳಿದ್ದಾರೆ.

   ಹ್ಯಾಂಡ್ ಸ್ಯಾನಿಟೈಸರ್‌ಗಳು ತುಂಬ ಅಗತ್ಯ

   ಹ್ಯಾಂಡ್ ಸ್ಯಾನಿಟೈಸರ್‌ಗಳು ತುಂಬ ಅಗತ್ಯ

   ದೇಶವು ಕೋವಿಡ್‌ ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿರುವಾಗ ಹ್ಯಾಂಡ್ ಸ್ಯಾನಿಟೈಸರ್‌ಗಳು ತುಂಬ ಅಗತ್ಯವಾಗಿವೆ. ಅನೇಕ ತಯಾರಕರು ತಮ್ಮ ಉತ್ಪಾದನೆ ಹೆಚ್ಚಿಸಿದ್ದಾರೆ. ಹಲವಾರು ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದರೂ ಸ್ಯಾನಿಟೈಸರ್‌ಗಳ ಸರಾಸರಿ ಬೆಲೆಯು ಮಧ್ಯಮ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದೆ. ಪ್ರತಿ ಎಂಎಲ್‌ಗೆ ಸರ್ಕಾರವು 50 ಪೈಸೆಗಳ ಬೆಲೆಯನ್ನು ನಿಗದಿಪಡಿಸಿದೆ. ಶೇ 18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡುವುದರಿಂದ ಬೆಲೆಯನ್ನು ಇನ್ನಷ್ಟು ತಗ್ಗಿಸಲು ಸಾಧ್ಯವಿದೆ.

   DRDO ಸಂಪರ್ಕರಹಿತ ಸ್ಯಾನಿಟೈಸರ್ OakMist ಜನಪ್ರಿಯತೆ

   ‘ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಅವಶ್ಯಕ ಸರಕು ಎಂದು ವರ್ಗೀಕರಿಸಿ ಅವುಗಳ ಮೇಲಿನ ತೆರಿಗೆ ಹೊರೆ ತಗ್ಗಿಸಲು ಸಾಧ್ಯವಿದೆ. ಪ್ರತಿ ಬಾಟಲ್‌ ಮಾರಾಟದಿಂದ ಆಗುವ ನಷ್ಟ ಭರಿಸುವುದರಿಂದ ಬೆಲೆಯನ್ನು ಇನ್ನಷ್ಟು ತಗ್ಗಿಸಲು ಸಾಧ್ಯವಿದೆ. ಈ ಕಾರಣದಿಂದಲೇ ನಾವು ಪ್ರತಿ ಅರ್ಧ ಲೀಟರ್‌ ಸ್ಯಾನಿಟೈಸರ್‌ನ ಬೆಲೆಯನ್ನು 200 ರೂಪಾಯಿಗಳಿಗೆ ನಿಗದಿಪಡಿಸಿದ್ದೇವೆ. ಇದು ಆರೋಗ್ಯ ವಿಷಯ ಮತ್ತು ನಮ್ಮ ಕಂಪನಿಯ ಮೌಲ್ಯಗಳಿಗೆ ನಮ್ಮ ಬದ್ಧತೆಯ ಪ್ರತೀಕವಾಗಿದೆ' ಎಂದು ಡಾ. ದಾಮ್ಲೆ ಅವರು ಮಾರುಕಟ್ಟೆ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾರೆ.

   ಅತ್ರಿಮೆಡ್‌ ಫಾರ್ಮಾದಿಂದ ಗಿಡಮೂಲಿಕೆ ಹ್ಯಾಂಡ್‌ ಸ್ಯಾನಿಟೈಸರ್‌

   ಅತ್ರಿಮೆಡ್‌ ಫಾರ್ಮಾದಿಂದ ಗಿಡಮೂಲಿಕೆ ಹ್ಯಾಂಡ್‌ ಸ್ಯಾನಿಟೈಸರ್‌

   ರಿಟೇಲ್ ಮಾರುಕಟ್ಟೆಯೂ ಬಿಕ್ಕಟ್ಟಿನಲ್ಲಿದೆ. ಬಹುತೇಕರು 10 ml ಸ್ಯಾನಿಟೈಸರ್ ಖರೀದಿಸಲು ಬಯಸುತ್ತಾರೆ. 10 ಎಂಎಲ್ ಸ್ಯಾನಿಟೈಸರ್ ಮಾರುವುದರಿಂದ ರಿಟೇಲ್ ಮಾರಾಟಗಾರರಿಗೆ ಪ್ರತಿಯೊಬ್ಬ ಗ್ರಾಹಕನಿಗೆ 5 ರೂಪಾಯಿ ವೆಚ್ಚ ತಗುಲುತ್ತದೆ. ಇದರಿಂದ ರಿಟೇಲ್ ಮಾರಾಟಗಾರರ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವರಮಾನದಲ್ಲಿ ಭಾರಿ ನಷ್ಟಕ್ಕೂ ಕಾರಣವಾಗುತ್ತದೆ. ಗ್ರಾಹಕರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುವ ಮಾಲ್, ಕಚೇರಿ ಮತ್ತು ಬ್ಯಾಂಕ್ನಂತಹ ಸ್ಥಳಗಳಲ್ಲಿ ಸ್ಯಾನಿಟೈಸರ್ಗಳ ಮಾರಾಟವು ಲಾಭದಾಯಕವಾಗಿರುವುದಿಲ್ಲ. ಇಂತಹ ಸ್ಥಳಗಳಲ್ಲಿ ಕಡಿತಗೊಳಿಸಿದ ಬೆಲೆಯಲ್ಲಿ ಹರ್ಬಲ್ ಸ್ಯಾನಿಟೈಸರ್ ದೊಡ್ಡ ಪ್ರಮಾಣದಲ್ಲಿ ದೊರೆಯುವ ವ್ಯವಸ್ಥೆ ಮಾಡಲಾಗುವುದು. ಸಗಟು ಅಗತ್ಯಗಳನ್ನು ಪೂರೈಸಲು ಕಂಪನಿಯು ಆರ್ಡರ್ಗಳನ್ನು ಪಡೆಯಲು ಆರಂಭಿಸಿದೆ. ಬೆಂಗಳೂರಿನಲ್ಲಿ ಈ ವಾರ ರಿಟೇಲ್ ಮಾರಾಟಕ್ಕೆ ಚಾಲನೆ ನೀಡಲಾಗುವುದು.

   ಬೆಂಗಳೂರಿನ ಕಂಪನಿ ಅತ್ರಿಮೆಡ್ ಫಾರ್ಮಾ

   ಬೆಂಗಳೂರಿನ ಕಂಪನಿ ಅತ್ರಿಮೆಡ್ ಫಾರ್ಮಾ

   ಬೆಂಗಳೂರಿನ ಕಂಪನಿಯಾಗಿರುವ ಅತ್ರಿಮೆಡ್ ಫಾರ್ಮಾ, ಸಸ್ಯಗಳನ್ನು ಆಧರಿಸಿದ ಅಣುಗಳಿಂದ ಔಷಧಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಚರ್ಮದ ಕಾಯಿಲೆ, ಮೊಡವೆ ಮತ್ತು ಸಂಧಿ ನೋವು ಮುಂತಾದವುಗಳನ್ನು ಗುಣಪಡಿಸುವ ಔಷಧಿಗಳನ್ನು ತಯಾರಿಸುತ್ತಿದೆ. ಸಾಂಪ್ರದಾಯಿಕ ಚಿಕಿತ್ಸೆಗೆ ಮತ್ತು ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ನೆರವಿನಿಂದ ಅಭಿವೃದ್ಧಿ ಪಡಿಸಿರುವ ಔಷಧಿಗಳ ವಿನ್ಯಾಸವನ್ನು ತಳಕು ಹಾಕಿದೆ. 4 ಲಕ್ಷದಷ್ಟು ಸಸ್ಯಗಳ ಅಣುಗಳ ಸಂಗ್ರಹ ಹೊಂದಿದೆ. ಇದು ವಿಶ್ವದಲ್ಲಿಯೇ ದೊಡ್ಡ ಪ್ರಮಾಣವಾಗಿದೆ.

   ಜೈವಿಕ ತಂತ್ರಜ್ಞಾನ ಮೇಳದಲ್ಲಿ ಪಾಲ್ಗೊಳ್ಳುವಿಕೆ

   ಜೈವಿಕ ತಂತ್ರಜ್ಞಾನ ಮೇಳದಲ್ಲಿ ಪಾಲ್ಗೊಳ್ಳುವಿಕೆ

   ಚರ್ಮ ರಕ್ಷಣೆ, ಕೇಶ ರಕ್ಷಣೆ , ತಾಯಿ ಮತ್ತು ಮಗುವಿನ ಕಾಳಜಿಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮೂಳೆ ಸಂಬಂಧಿ ಕಾಯಿಲೆ, ಪೋಷಕಾಂಶ, ಚಯಾಪಚಯ ಮತ್ತು ಅಲರ್ಜಿ ನಿವಾರಕ ಔಷಧಿಗಳನ್ನು ತಯಾರಿಸುತ್ತಿದೆ.

   ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಬಳಸುವ ಸ್ಯಾನಿಟೈಸರ್ ಎಂಥದ್ದು?

   ಅಮೆರಿಕದ ಫಿಲಡೆಲ್ಫಿಯಾದಲ್ಲಿ2019ರಲ್ಲಿ ನಡೆದ ವಿಶ್ವದ ಅತಿದೊಡ್ಡ ಜೈವಿಕ ತಂತ್ರಜ್ಞಾನ ಮೇಳಕ್ಕೆ ಕರ್ನಾಟಕ ಸರ್ಕಾರವು ಈ ಕಂಪನಿಯನ್ನು ಕಳಿಸಿಕೊಟ್ಟಿತ್ತು. ರಾಜ್ಯದಲ್ಲಿನ ಜೈವಿಕ ತಂತ್ರಜ್ಞಾನದ ಪ್ರಗತಿಯನ್ನು ವಿಶ್ವಕ್ಕೆ ಪರಿಚಯಿಸಲು ಮತ್ತು ಜಾಗತಿಕ ಜೈವಿಕ ತಂತ್ರಜ್ಞಾನ ಉದ್ದಿಮೆಯಲ್ಲಿನ ಹೊಸ ಅವಕಾಶಗಳು ಮತ್ತು ಸವಾಲುಗಳನ್ನು ತಿಳಿದುಕೊಳ್ಳಲು ಸರ್ಕಾರ ಅತ್ರಿಮೆಡ್ ಫಾರ್ಮಾಸ್ಯುಟಿಕಲ್ ಪ್ರೈವೇಟ್ ಲಿಮಿಟೆಡ್ ಆಯ್ಕೆ ಮಾಡಿಕೊಂಡಿತ್ತು.

   English summary
   Bangalore based Atrimed Pharma – a pioneer in developing scientifically-tested plant-based medication, today announced its efforts to join the fight against Covid-19, with the launch of a company-subsidized Herbal Hand Sanitiser.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X