ಎಟಿಎಂನಲ್ಲಿ ಚಿನ್ನದ ನಾಣ್ಯ, ಓಹ್ ನಿಮಗಿನ್ನೂ ಗೊತ್ತಿಲ್ವಾ?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ ಅಟೋಮೆಟಿವ್ ಟೆಲ್ಲಿಂಗ್ ಮಶೀನ್ (ಎಟಿಎಂ) ಸ್ವಲ್ಪ ಭಿನ್ನವಾಗಿದೆ. ಜನರ ಕುತೂಹಲಕ್ಕೂ ಕಾರಣವಾಗಿದೆ. ಈ ಎಟಿಎಂನಿಂದ ಹಣ ಬರೋದಿಲ್ಲ. 24 ಕ್ಯಾರೆಟ್ ಚಿನ್ನದ ನಾಣ್ಯ ಪಡೆಯಬಹುದು. ದೀಪಾವಳಿ ಅಂಗವಾಗಿ ಬ್ಲೂ ಸ್ಟೋನ್ ಆನ್ ಲೈನ್ ಆಭರಣಗಳ ಕಂಪನಿ ಈ ರೀತಿ ಪ್ರಯೋಗಕ್ಕೆ ಮುಂದಾಗಿದೆ.

ಈ ಎಟಿಎಂ ಬಳಕೆ ಕೂಡ ಬಲು ಸಲೀಸು. ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ಬಳಸಬಹುದು. 'ಚಿನ್ನದ ನಾಣ್ಯ ಖರೀದಿಸುವುದಕ್ಕೆ ತುಂಬ ಸಮಯ ಅಗುತ್ತದೆ ಅನ್ನೋ ಹಾಗಿಲ್ಲ. ಅಂಗಡಿಗಳಿಗೆ ಹೋಗುವ ಅಗತ್ಯ ಇಲ್ಲ. ನಿಮ್ಮ ಬೆರಳ ತುದಿಯ ಸಂಗತಿ ಇದು' ಎನ್ನುತ್ತಾರೆ ಗ್ರಾಹಕಿ ಮೋನಿಕಾ.[ಎಲ್ಲ ಚಿನ್ನಾಭರಣಗಳಿಗೂ ಹಾಲ್ ಮಾರ್ಕ್ ಕಡ್ಡಾಯ]

Gold coin

ಇಲ್ಲಿ ಹಣ ಪಾವತಿಸುವುದಕ್ಕೂ ಹಲವು ಆಯ್ಕೆಗಳಿವೆ. ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೀಗೆ ಯಾವುದರ ಮೂಲಕವಾದರೂ ಹಣ ಪಾವತಿಸಬಹುದು. ಇನ್ನು ಚಿನ್ನದ ನಾಣ್ಯದ ತೂಕ ಒಂದರಿಂದ ಇಪ್ಪತ್ತು ಗ್ರಾಮ್ ನವರೆಗೆ ಮಾರುಕಟ್ಟೆ ದರದಲ್ಲಿ ದೊರೆಯುತ್ತದೆ. ನಾಣ್ಯದ ಸಾಚಾತನ ಹಾಗೂ ಶುದ್ಧತೆಗೆ ಪ್ರಮಾಣ ಪತ್ರ ಕೂಡ ದೊರೆಯುತ್ತದೆ.[ಚಿನ್ನದ ದರ 30 ಸಾವಿರ ತಲುಪಲು ಕಾರಣವೇನು?]

ಗ್ರಾಹಕರು ಖರೀದಿ ವೇಳೆ ಇಷ್ಟಪಡುವ ತೂಕದಲ್ಲಿ ನಾಣ್ಯಗಳು ನಮ್ಮಲ್ಲಿ ದೊರೆಯುತ್ತವೆ. ಬೆಲೆ ಕೂಡ ಸ್ಪರ್ಧಾತ್ಮಕವಾಗಿದೆ ಎಂದು ಬ್ಲೂ ಸ್ಟೋನ್ ನ ಅರವಿಂದ್ ಸಿಂಘಾಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರಯೋಗಕ್ಕೆ ಗ್ರಾಹಕರ ಸ್ಪಂದನೆಗೆ ಕಂಪನಿಯ ಪ್ರತಿನಿಧಿಗಳು ತುಂಬ ಖುಷಿಯಾಗಿದ್ದಾರೆ. ಇತರ ನಗರಗಳು ಇಂಥ ಎಟಿಎಂ ಆರಂಭಿಸುವುದಕ್ಕೆ ಉತ್ಸುಕರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the occasion of Deepavali, BlueStone has set up ATMs which dispense 24 karat gold coins instead of money in Bengaluru. Users can buy gold coins ranging from 1 gram to 20 grams at market rates.
Please Wait while comments are loading...