• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮನಿರ್ಭರ ಭಾರತ: ಭಾರತದಲ್ಲೇ ತಯಾರಾಗುವ ಸ್ಮಾರ್ಟ್‌ಫೋನ್‌ಗಳ ರಿಯಾಲಿಟಿ ಚೆಕ್

|
Google Oneindia Kannada News

ನವದೆಹಲಿ, ಆಗಸ್ಟ್‌ 13: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತದ ಉಪಕ್ರಮದ ಪ್ರಮುಖ ಭಾಗವಾಗಿ ಹತ್ತಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲೇ ತಯಾರಾಗಲಿವೆ. ಸ್ಯಾಮ್‌ಸಂಗ್, ಆ್ಯಪಲ್, ಪೆಗಾಟ್ರಾನ್, ವಿಸ್ಟ್ರಾನ್, ಫಾಕ್ಸ್‌ಕಾನ್ ಮತ್ತು ರೈಸಿಂಗ್ ಸ್ಟಾರ್ ಸೇರಿದಂತೆ ಒಟ್ಟಾರೆ 22 ಕಂಪನಿಗಳು ದೇಶದಲ್ಲಿ ಮುಂದಿನ 5 ವರ್ಷಗಳಲ್ಲಿ 11 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ತಯಾರಿಸುವ ಪ್ರಸ್ತಾಪವನ್ನು ಮುಂದಿಟ್ಟಿವೆ.

ಇದರ ನಡುವೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚದ ಕಡೆಗೂ ಒಮ್ಮೆ ನೋಡಬೇಕಿದೆ. ಭಾರತದಲ್ಲೇ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಅಷ್ಟು ಸುಲಭವಾಗಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪ

ಶೇಕಡಾ 85ರಷ್ಟು ಉತ್ಪನ್ನಗಳ ಆಮದು

ಶೇಕಡಾ 85ರಷ್ಟು ಉತ್ಪನ್ನಗಳ ಆಮದು

ಭಾರತದಲ್ಲಿ ತಯಾರಾಗುವ ಸ್ಮಾರ್ಟ್‌ಫೋನ್‌ಗಳ ಒಟ್ಟು ವೆಚ್ಚದ ಶೇಕಡಾ 85ರಷ್ಟು ಸಾಧನವು ವಿದೇಶಿ ಮೂಲದ ಘಟಕದಿಂದ ಆಮದು ಮಾಡಿಕೊಳ್ಳುವುದಾಗಿದೆ. ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳು, ಚಿಪ್‌ಸೆಟ್‌ಗಳು, ಡಿಸ್‌ಪ್ಲೇ ಮತ್ತು ಕ್ಯಾಮೆರಾ ಮಾಡ್ಯೂಲ್‌ಗಳಂತಹ ಸಾಧನವು ಭಾರತದ ಉತ್ಪಾದನೆ ಘಟಕಗಳಲ್ಲಿ ಉತ್ಪಾದನೆಯು ಕನಿಷ್ಠ ಅಥವಾ ಇಲ್ಲವಾಗಿದೆ. ಏಕೆಂದರೆ ಇವುಗಳನ್ನು ಚೀನಾ ಅಥವಾ ತೈವಾನ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ.

ಹಾಗಿದ್ದರೆ ಭಾರತದಲ್ಲಿ ಏನೆಲ್ಲಾ ಉತ್ಪಾದನೆಯಾಗುತ್ತದೆ?

ಹಾಗಿದ್ದರೆ ಭಾರತದಲ್ಲಿ ಏನೆಲ್ಲಾ ಉತ್ಪಾದನೆಯಾಗುತ್ತದೆ?

ಭಾರತವು ಬಹುತೇಕ ಸ್ಮಾರ್ಟ್‌ಫೋನ್‌ಗಳ ಹೈಟೆಕ್ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಅಸೆಂಬ್ಲಿ, ಟೆಸ್ಟ್‌, ಪ್ಯಾಕಿಂಗ್ ಸೌಲಭ್ಯಗಳಿಗೆ ಮಾತ್ರ ಸೀಮಿತವಾಗಿದೆ.

ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕಿದ ಹುವಾಯಿ : ಜಗತ್ತಿನಲ್ಲೇ ನಂಬರ್ 1 ಸ್ಮಾರ್ಟ್‌ಫೋನ್ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕಿದ ಹುವಾಯಿ : ಜಗತ್ತಿನಲ್ಲೇ ನಂಬರ್ 1 ಸ್ಮಾರ್ಟ್‌ಫೋನ್

ಉತ್ಪಾದನಾ ಪರಿಸರ ನಿರ್ಮಾಣಕ್ಕೆ 10 ವರ್ಷಗಳೇ ಬೇಕಾಗಬಹುದು

ಉತ್ಪಾದನಾ ಪರಿಸರ ನಿರ್ಮಾಣಕ್ಕೆ 10 ವರ್ಷಗಳೇ ಬೇಕಾಗಬಹುದು

ಸದ್ಯ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಬೇಕಾಗಿರುವ ಸಂಪೂರ್ಣ ಸಾಧನಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ಏಕೆಂದರೆ ಬಹುತೇಕ ಅತ್ಯಾಧುನಿಕ ಸಾಧನಗಳ ಆಮದು ಮೇಲೆ ಅವಲಂಬಿತಗೊಂಡಿದೆ. ಇದರ ಜೊತೆಗೆ ಸಂಪೂರ್ಣ ಉತ್ಪಾದನಾ ಪರಿಸರ ನಿರ್ಮಾಣಕ್ಕೆ 10 ವರ್ಷಗಳೇ ಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಸರ್ಕಾರ ಭಾರೀ ಪ್ರೋತ್ಸಾಹ ನೀಡದಿದ್ದರೆ ಕಷ್ಟಸಾಧ್ಯ

ಸರ್ಕಾರ ಭಾರೀ ಪ್ರೋತ್ಸಾಹ ನೀಡದಿದ್ದರೆ ಕಷ್ಟಸಾಧ್ಯ

ಹೌದು, ಘಟಕ ತಯಾರಕರಿಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಕಾರ್ಯಕ್ರಮವನ್ನು ಬದಿಗಿಟ್ಟು ಭಾರತ ಎರಡು ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ ಕಂಪನಿಗಳು ದೊಡ್ಡ ಬಂಡವಾಳವನ್ನು ಹೂಡದಿದ್ದರೆ ಮತ್ತು ಸರ್ಕಾರವು ಉದಾರವಾದ ಪ್ರೋತ್ಸಾಹವನ್ನು ನೀಡದಿದ್ದರೆ, ಇದು ಕಠಿಣ ಸವಾಲಾಗಿ ಉಳಿಯುತ್ತದೆ.


ಆದರೆ, ಕ್ವಾಲ್ಕಾಮ್, ಮೀಡಿಯಾಟೆಕ್, ಸ್ಯಾಮ್‌ಸಂಗ್‌ನಂತಹ ಕಂಪನಿಗಳು ಹೆಚ್ಚಿನ ಸಂಶೋಧನೆ ಮತ್ತು ವಿನ್ಯಾಸವನ್ನು ಇಲ್ಲಿ ವರ್ಗಾಯಿಸಬಹುದು. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.

English summary
The reality check for Made-in-India smartphones, a major focus of official drive on ‘self-reliance’, is that value of components sourced abroad is around 85% of a device’s cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X