100 ರೂಪಾಯಿ ಜಾಗದಲ್ಲಿ 2000; ಎಟಿಎಂನಲ್ಲಿ ಹಣದ ಮಳೆ

Subscribe to Oneindia Kannada

ಜೈಪುರ, ಜನವರಿ 18: ರಾಜಸ್ಥಾನದ ಟೊಂಕ್ ನಿವಾಸಿ ಜಿತೇಶ್ ದಿವಾಕರ್ ಗೆ ಮಂಗಳವಾರ ಸಂಜೆ ಎಟಿಎಂನಲ್ಲೆ ಲಾಟರಿ ಹೊಡೆದಿದೆ. ಅಚ್ಚರಿಯಾಗಬೇಡಿ ಇದು ಸತ್ಯ. ದಿವಾಕರ್ ಎಂಬುವರು ಕೇವಲ 3500 ರೂಪಾಯಿ ಡ್ರಾ ಮಾಡಲು ಹೊರಟರೆ ಎಟಿಎಂ ಮೆಶೀನ್ 70,000 ರೂಪಾಯಿ ನೀಡಿ, ಅವರನ್ನು ಅಚ್ಚರಿಯಲ್ಲಿ ಕೆಡವಿದೆ.

ದಿವಾಕರ್ ಮಾತ್ರವಲ್ಲ ಇದೇ ರೀತಿ ಸುಮಾರು ಹತ್ತು ಜನರಿಗೆ ಎಟಿಎಂ ಮೆಶೀನ್ ಕೇಳಿದ್ದಕ್ಕಿಂತ ಹಚ್ಚಿನ ಹಣ ನೀಡಿ ದಾನಶೂರ ಕರ್ಣನಂತೆ ವರ್ತಿಸಿದೆ.[ಜ.17ರಿಂದ ಎಟಿಎಂನಿಂದ ದಿನಕ್ಕೆ 10 ಸಾವಿರ ಡ್ರಾ ಮಾಡಬಹುದು!]

ATM rains cash: Man in Rajasthan asks for Rs 3500, gets Rs 70k

ರಾಜಸ್ಥಾನದ ರಾಜಧಾನಿ ಜೈಪುರದಿಂದ 80 ಕಿಲೋಮೀಟರ್ ದೂರದಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರದಲ್ಲಿ ಹಣ ಇಟ್ಟಿದ್ದು ಅದಲು ಬದಲಾಗಿತ್ತು. 100 ರೂಪಾಯಿ ನೋಟು ಇಡಬೇಕಾದ ಜಾಗದಲ್ಲಿ ಸಿಬ್ಬಂದಿ 2,000 ರೂಪಾಯಿ ನೋಟುಗಳನ್ನು ಇಟ್ಟಿದ್ದರು. ಇದರಿಂದ 100 ರೂ ನೋಟಿಗೆ ಅದಕ್ಕಿಂತ20 ಪಟ್ಟು ಹೆಚ್ಚಿನ ಬೆಲೆಯ ನೋಟು ಗ್ರಾಹಕರ ಕೈಗೆ ಬಂದು ಬೀಳುತ್ತಿತ್ತು.

ಹೀಗೆ 70 ಸಾವಿರ ರುಪಾಯಿ ಹಣ ದಿವಾಕರ್ ಕೈಗೂ ತಲುಪಿತು. ಆದರೆ ಹೆಚ್ಚಿನ ಜನ ಹಣ ಪಡೆದು ದುರಾಸೆಯಿಂದ ವಾಪಸಾದರೆ, ದಿವಾಕರ್ ಮಾತ್ರ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾನವೀಯತೆ ಮೆರೆದರು. ಬ್ಯಾಂಕ್ ಅಧಿಕಾರಿಗಳು ದಿವಾಕರ್ ದೂರಿನ ಮೇಲೆ ಬಂದು ನೋಡಿದರೆ ಅದಾಗಲೇ 6.76 ಲಕ್ಷ ರೂಪಾಯಿ ನಿಗದಿಗಿಂತ ಹೆಚ್ಚಾಗಿ ಖಾಲಿಯಾಗಿತ್ತು.[ಎಟಿಎಂ ವಿಥ್ ಡ್ರಾಗೆ ಬೀಳಲಿದೆ ಮಿತಿ, 3ಕ್ಕಿಂತ ಹೆಚ್ಚು ಡ್ರಾಗೆ ಶುಲ್ಕ ಪಾವತಿ]

"ತಾಂತ್ರಿಕವಾಗಿ 100 ರೂಪಾಯಿ ನೋಟು ಇಡುವ ಜಾಗದಲ್ಲಿ 2000 ರೂಪಾಯಿ ಇಟ್ಟರೆ ಸೆನ್ಸಾರುಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಾವು ತಾಂತ್ರಿಕ ಪರಿಣತರ ಬಳಿ ವಿಷಯದ ತನಿಖೆ ಮಾಡುವಂತೆ ಹೇಳಿದ್ದೇವೆ," ಎಂದು ಬ್ಯಾಂಕ್ ಆಫ್ ಬರೋಡದ ಚೀಫ್ ಮ್ಯಾನೇಜರ್ ಹರಿಕಿಶನ್ ಮೀನಾ ಹೇಳಿದ್ದಾರೆ. ಬ್ಯಾಂಕ್ ಈ ಕುರಿತು ಪೊಲೀಸ್ ದೂರು ಕೂಡಾ ದಾಖಲಿಸಲಿದೆ ಎಂದು ಅವರು ಹೇಳಿದ್ದಾರೆ.

ಲಾಟರಿ ಹೊಡೆದವರು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರಾ? ನೋಡಬೇಕಷ್ಟೆ.

ಇದೇ ರೀತಿ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿಯೂ 4 ಸಾವಿರ ಡ್ರಾ ಮಾಡಲು ಹೋದವರಿಗೆ 80,000 ಹಣ ಬಂದಿತ್ತು.[ಎಟಿಎಂ ಚಮತ್ಕಾರ: 4 ಸಾವಿರ ಡ್ರಾ ಮಾಡಿದವರಿಗೆ ಸಿಕ್ಕಿದ್ದು 80 ಸಾವಿರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Man in Rajasthan gets Rs 70k from Bank of Baroda ATM, instead of Rs 3500. ATM officials mistake made him a lucky star.
Please Wait while comments are loading...