Anant Ambani Radhika Merchant 2nd Pre Wedding: ಐಷಾರಾಮಿ ಹಡಗಿನಲ್ಲಿ ಅನಂತ್ ಅಂಬಾನಿ-ರಾಧಿಕಾ ಸೆಕೆಂಡ್ ಪ್ರಿ ವೆಡ್ಡಿಂಗ್!
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಸಂಪತ್ತಿನ ಬಗ್ಗೆ ಚರ್ಚೆಗಳು ಆಗಾಗ ಉದ್ಭವಿಸುತ್ತಲೇ ಇರುತ್ತವೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈನಲ್ಲಿ ವಿವಾಹವಾಗಲಿದ್ದಾರೆ.
ಅನಂತ್ ಮತ್ತು ಅವರ ಪ್ರೇಯಸಿ ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅದರ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ಹಲವು ಮಾಧ್ಯಮಗಳ ವರದಿ ಪ್ರಕಾರ, ಎರಡನೇ ಪ್ರೀ ವೆಡ್ಡಿಂಗ್ ಫಂಕ್ಷನ್ ಇದೇ ತಿಂಗಳು ಅಂದರೆ ಮೇ 28-30ರ ನಡುವೆ ನಡೆಯಲಿದೆ ಎಂಬ ಸುದ್ದಿ ಬಂದಿದೆ.

ನೀರಿನಲ್ಲಿ ನಡೆಯುವ ಸಮಾರಂಭ
ಅನಂತ್-ರಾಧಿಕಾ ಅವರ ಎರಡನೇ ಪೂರ್ವ ವಿವಾಹ ಸಂಭ್ರಮವನ್ನು ಸಮುದ್ರದ ಮಧ್ಯದಲ್ಲಿ ಆಚರಿಸಲಾಗುತ್ತದೆ. ಇದಕ್ಕಾಗಿ ಕ್ರೂಸ್ ಹಡಗನ್ನು ಆಯ್ಕೆ ಮಾಡಲಾಗಿದ್ದು, ದಕ್ಷಿಣ ಫ್ರಾನ್ಸ್ ಕರಾವಳಿಯಲ್ಲಿ ಅಂಬಾನಿ ಕುಟುಂಬ ವಿವಾಹ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಿದೆ.
ವರದಿಗಳ ಪ್ರಕಾರ, ಈ ಕ್ರೂಸ್ ಹಡಗು ಇಟಲಿಯ ನಗರ ಬಂದರಿನಿಂದ ದಕ್ಷಿಣ ಫ್ರಾನ್ಸ್‌ಗೆ ಹೋಗಲಿದ್ದು, ಇದರಲ್ಲಿ ಅಂಬಾನಿ ಕುಟುಂಬದ ಪ್ರೀತಿಯ ಮಗ ಮತ್ತು ಸೊಸೆಯನ್ನು ತಮ್ಮ ಮುಂಬರುವ ವೈವಾಹಿಕ ಜೀವನಕ್ಕಾಗಿ ಕಾರ್ಯಕ್ರಮಗಳ ಮೂಲಕ ಅಭಿನಂದಿಸಲಾಗುವುದು.

ಎಷ್ಟು ಅತಿಥಿಗಳು ಬರುವ ನಿರೀಕ್ಷೆಯಿದೆ?
ಅನಂತ್-ರಾಧಿಕಾ ಅವರ ಮದುವೆ ಪೂರ್ವ ಸಂಭ್ರಮಾಚರಣೆಗೆ ಸುಮಾರು 800 ಅತಿಥಿಗಳು ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಮತ್ತು ಸೊಸೆಯ ವಿವಾಹದ ಪೂರ್ವ ಸಮಾರಂಭವನ್ನು ಸ್ಮರಣೀಯವಾಗಿಸಲು ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ 600 ಸಿಬ್ಬಂದಿಯನ್ನು ಕ್ರೂಸ್ ಹಡಗಿನಲ್ಲಿ ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸೆಲೆಬ್ರಿಟಿ ಅತಿಥಿಗಳಿಗೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕ್ರೂಸ್ ಎಷ್ಟು ದೂರ ಪ್ರಯಾಣಿಸಲಿದೆ?
ಮೇ 28ರಂದು ಇಟಲಿಯಿಂದ ಕ್ರೂಸ್ ಪ್ರಾರಂಭವಾಗಲಿದ್ದು, ನಂತರ ಅದು 2365 ನಾಟಿಕಲ್ ಮೈಲುಗಳಷ್ಟು ಅಂದರೆ ಸುಮಾರು 4380 ಕಿಲೋಮೀಟರ್‌ಗಳನ್ನು ಕ್ರಮಿಸಿದ ನಂತರ ತನ್ನ ಗಮ್ಯಸ್ಥಾನವನ್ನು ತಲುಪಲಿದೆ. ನೀಲಿ ಸಮುದ್ರದ ಅಲೆಗಳ ಮೇಲೆ ಈ ಐಷಾರಾಮಿ ಹಡಗು ಸಾಗುತ್ತಿರುವಾಗ ಬಣ್ಣ ಬಣ್ಣದ ದೀಪಗಳು, ಸಂಗೀತ, ನೃತ್ಯದ ಕಾರ್ಯಕ್ರಮಗಳ ಮೂಲಕ ಮದುವೆ ಪೂರ್ವ ಕಾರ್ಯಕ್ರಮ ನಡೆಯಲಿದೆ.

ಜುಲೈನಲ್ಲಿ ಅನಂತ್ ಮತ್ತು ರಾಧಿಕಾ ಮದುವೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಸಂಬಂಧಿಸಿದ ಸುದ್ದಿಗಳ ಪ್ರಕಾರ, ಇವರಿಬ್ಬರು ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮೊದಲ ವಿವಾಹ ಪೂರ್ವ ಸಮಾರಂಭ ಮೆಗಾ ಕಾರ್ಯಕ್ರಮ:-
ಮಾರ್ಚ್ 1 ರಿಂದ 3 ರವರೆಗೆ ಗುಜರಾತ್‌ನ ಜಾಮ್‌ಗರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಕಾರ್ಯಕ್ರಮ ನಡೆದು ವಿಶ್ವದಾದ್ಯಂತ ಗಮನ ಸೆಳೆದಿತ್ತು. ಈ ಮೆಗಾ ಸಮಾರಂಭದಲ್ಲಿ ದೇಶ-ವಿದೇಶಗಳ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿ ತಮ್ಮ ಉಪಸ್ಥಿತಿಯಿಂದ ಆಚರಣೆಯನ್ನು ಸ್ಮರಣೀಯವಾಗಿಸಿದರು.
ಜಾಗತಿಕ ಪಾಪ್ ಗಾಯಕಿ ರಿಹಾನ್ನಾ ಅವರಿಂದ ಹಿಡಿದು ಭಾರತೀಯ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ವರೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿಲ್ ಗೇಟ್ಸ್‌ನಿಂದ ಮಾರ್ಕ್ ಜುಕರ್‌ಬರ್ಗ್‌ವರೆಗಿನ ಉದ್ಯಮದ ಜನರು ಸಹ ಇದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು.












Click it and Unblock the Notifications