ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ಹೊಗಳಿದ ಆನಂದ್ ಮಹೀಂದ್ರಾ
ನವದೆಹಲಿ, ಸೆಪ್ಟೆಂಬರ್ 20: ಕಾರ್ಪೊರೇಟ್ ತೆರಿಗೆ ಕಡಿತದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ದೇಶದಾದ್ಯಂತ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುತ್ತಿದ್ದಂತೆಯೇ ಷೇರು ಪೇಟೆ ಸೂಚ್ಯಂಕವೂ ಹುಮ್ಮಸ್ಸಿನಿಂದ ಜಿಗಿತ ಕಂಡಿರುವುದು ಹೂಡಿಕೆದಾರರು ಹಾಗೂ ಉದ್ಯಮಗಳಲ್ಲಿ ಖುಷಿ ನೀಡಿದೆ.
ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅಮೆರಿಕದ ಪ್ರವಾಸದಲ್ಲಿರುವ ಅವರು ಈ ನಡೆಯನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.
'ಅಮೆರಿಕದಲ್ಲಿ ಈ ಸುದ್ದಿಯಿಂದ ಎಚ್ಚರಗೊಂಡೆ. ದಿನವನ್ನು ಆರಂಭಿಸಲು ಇದು ಅತ್ಯುತ್ತಮ ಮಾರ್ಗ. ಕಂಪೆನಿಗಳು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅಲ್ಲ. ಏಕೆಂದರೆ ಇದು ಮತ್ತೊಂದು ನೀತಿಯನ್ನು ತಿರುಚುವಿಕೆಯಲ್ಲ. ನಿರ್ಮಲಾ ಸೀತಾರಾಮನ್ ಅವರು ಹಾರಿಸಿರುವ ಗುಂಡಿನ ಸದ್ದು ಜಗತ್ತಿನೆಲ್ಲೆಡೆ ಕೇಳಿಸುತ್ತದೆ. ಭಾರತವು ಜಾಗತಿಕ ಹೂಡಿಕೆದಾರರಿಗೆ ಆಹ್ವಾನ ಪತ್ರಿಕೆಯನ್ನು ರವಾನಿಸಿದೆ' ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲು ದೇಶಿ ಉತ್ಪಾದನಾ ಕಂಪೆನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ 25.17ಕ್ಕೆ ಕಡಿತಗೊಳಿಸಿರುವುದಾಗಿ ಪ್ರಕಟಿಸಿದ್ದರು. ಇದಲ್ಲದೆ ಹೂಡಿಕೆದಾರರನ್ನು ಸೆಳೆಯಲು ವಿವಿಧ ತೆರಿಗೆ ವಿನಾಯಿತಿಗಳನ್ನು ಘೋಷಿಸಿದ್ದರು.












Click it and Unblock the Notifications