ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗುತ್ತಿವೆ ಕಂಪನಿಗಳು: ಗಾಬರಿ ಹುಟ್ಟಿಸುತ್ತಿದೆ ಅಮೆಜಾನ್‌ ಉದ್ಯೋಗ ಕಡಿತ- ಮತ್ತೆ ನೌಕರರ ವಜಾ

ವಾಷಿಂಗ್ಟನ್, ಡಿಸೆಂಬರ್‌ 05: ಅನಿಶ್ಚಿತ ಆರ್ಥಿಕತೆ ಮತ್ತು ಕೋವಿಡ್‌ ಸಮಯದಲ್ಲಿ ಉಂಟಾದ ನಷ್ಟವನ್ನು ಉಲ್ಲೇಖಿಸಿ ಅಮೆಜಾನ್‌ ಕಂಪನಿಯು ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ 10,000 ಉದ್ಯೋಗಿಗಳನ್ನು ಅಮೆಜಾನ್‌ ವಜಾಗೊಳಿಸಿತ್ತು. ಈಗ ಮತ್ತೆ 18,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಬುಧವಾರ ಪ್ರಕಟಿಸಿದೆ.

'ನಾವು 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡಲು ನಿರ್ಧರಿಸಿದ್ದೇವೆ' ಎಂದು ಸಿಇಒ ಆಂಡಿ ಜಾಸ್ಸಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Amazon To Sack Over 18,000 Employees, Several Teams To Be Impacted, Says CEO

ಕಂಪನಿಯ ನಾಯಕತ್ವವು ವಜಾಗೊಳಿಸುವಂತಹ ಕ್ರಮಗಳಿಂದ ನೌಕರರಿಗೆ ಕಷ್ಟವಾಗಲಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಈ ರೀತಿಯ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದೂ ಇಲ್ಲ ಎಂದು ಆಂಡಿ ಜಾಸ್ಸಿ ಹೇಳಿದ್ದಾರೆ.

'ಕೆಲಸದಿಂದ ವಜಾಗೊಂಡ ನೌಕರರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಅವರಿಗೆ ಪ್ರತ್ಯೇಕ ಹಣ ನೀಡಲಿದ್ದೇವೆ. ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಹೊರ ಉದ್ಯೋಗದ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ಯುರೋಪ್‌ನಲ್ಲಿ ಹೆಚ್ಚು ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಜನವರಿ 18 ರಿಂದ ನೌಕರರಿಗೆ ಮೇಲ್‌ ಮೂಲಕ ಇದನ್ನು ತಿಳಿಸಲಾಗುವುದು ಎಂದು ಆಂಡಿ ಜಾಸ್ಸಿ ಹೇಳಿದ್ದಾರೆ.

Amazon To Sack Over 18,000 Employees, Several Teams To Be Impacted, Says CEO

'ನಮ್ಮ ತಂಡದ ಸದಸ್ಯರೊಬ್ಬರು ಈ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ. ಆದ್ದರಿಂದ, ಹಠಾತ್ ಘೋಷಣೆ ಮಾಡಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ಅಮೆಜಾನ್ ಕಂಪನಿ ಈ ಹಿಂದೆಯೂ ಅನಿಶ್ಚಿತ ಮತ್ತು ಕಷ್ಟಕರವಾದ ಆರ್ಥಿಕತೆಗಳನ್ನು ಎದುರಿಸಿದೆ. ಈ ಬಾರಿಯೂ ನಾವು ಅದನ್ನು ಎದುರಿಸಿ ಯಶಸ್ವಿಯಾಗಲಿದ್ದೇವೆ ಎಂಬ ಭರವಸೆಯನ್ನು ಜಾಸ್ಸಿ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿಶ್ವಾದ್ಯಂತ 1.54 ಮಿಲಿಯನ್ ಉದ್ಯೋಗಿಗಳನ್ನು ಅಮೆಜಾನ್‌ ಹೊಂದಿತ್ತು.

2022 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಟಾಪ್ 10 ಕಂಪನಿಗಳ ಪಟ್ಟಿ

1. ಮೆಟಾ- 2004 ರಲ್ಲಿ ಸ್ಥಾಪಿಸಲಾಯಿತು
CEO: ಮಾರ್ಕ್ ಜುಕರ್‌ಬರ್ಗ್
ವಜಾ: 11000 ಉದ್ಯೋಗಿಗಳು

Amazon To Sack Over 18,000 Employees, Several Teams To Be Impacted, Says CEO

2. ಅಮೆಜಾನ್- 1994 ರಲ್ಲಿ ಸ್ಥಾಪಿಸಲಾಯಿತು
CEO: ಜೆಫ್ ಬೆಜೋಸ್
ವಜಾ: 10000 ಉದ್ಯೋಗಿಗಳು

3- ಟ್ವಿಟರ್- 2006 ರಲ್ಲಿ ಸ್ಥಾಪಿಸಲಾಯಿತು
CEO: ಎಲೋನ್ ಮಸ್ಕ್
ವಜಾ: 3700

4- ಫೋರ್ಡ್- 1903 ರಲ್ಲಿ ಸ್ಥಾಪನೆ
CEO: ಜಿಮ್ ಫಾರ್ಲೆ
ವಜಾ: 3580 ಉದ್ಯೋಗಿಗಳು

5- ಬೆಟರ್.ಕಾಮ್- 2014 ರಲ್ಲಿ ಸ್ಥಾಪನೆ
ಸಿಇಒ: ವಿಶಾಲ್ ಗಾರ್ಗ್
ವಜಾ: 3250 ಉದ್ಯೋಗಿಗಳು

6- ಮೈಕ್ರೋಸಾಫ್ಟ್ -1975 ರಲ್ಲಿ ಸ್ಥಾಪಿಸಲಾಯಿತು
ಸಿಇಒ: ಸತ್ಯ ನಾಡೆಲ್ಲಾ
ವಜಾ: 3000 ಉದ್ಯೋಗಿಗಳು

7- ಬೈಜುಸ್- 2011 ರಲ್ಲಿ ಸ್ಥಾಪಿಸಲಾಯಿತು
ಸಿಇಒ: ಬೈಜು ರವೀಂದ್ರನ್
ವಜಾ: 2500 ಉದ್ಯೋಗಿಗಳು

8- ಬ್ಲಿಂಕಿಟ್- 2013 ರಲ್ಲಿ ಸ್ಥಾಪನೆ
CEO: ಅಲ್ಬಿಂದರ್ ದಿಂಡಾ
ವಜಾ: ಸರಿಸುಮಾರು 1600 ಉದ್ಯೋಗಿಗಳು

9- ಯೂನಿಲಿವರ್ -ಯುಕೆ ಮೂಲದ FMCG ಕಾರ್ಪೊರೇಷನ್
CEO: ಅಲನ್ ಜೋಪ್
ವಜಾ: 1500

10- ದೂರ್‌ದರ್ಶ್‌- 2013 ರಲ್ಲಿ ಸ್ಥಾಪಿನೆ
CEO: ಟೋನಿ ಕ್ಸು
ವಜಾ: 1250 ಉದ್ಯೋಗಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+