ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆನ್‌ಲೈನ್ ಕಲಿಕಾ ಅಕಾಡೆಮಿ ಮುಚ್ಚಲಿದೆ ಅಮೆಜಾನ್

|
Google Oneindia Kannada News

ಬೆಂಗಳೂರು, ನವೆಂಬರ್‌ 24: ಭಾರತದಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಾರಂಭವಾದ ಅಮೆಜಾನ್‌. ಕಾಂ ಗುರುವಾರದಂದು ತನ್ನ ಆನ್‌ಲೈನ್ ಕಲಿಕಾ ವೇದಿಕೆಯನ್ನು ಎರಡು ವರ್ಷಗಳೊಳಗೆ ಯಾವುದೇ ಕಾರಣವನ್ನು ಉಲ್ಲೇಖಿಸದೆ ಮುಚ್ಚುವುದಾಗಿ ಹೇಳಿದೆ.

ಅಮೆಜಾನ್ ಅಕಾಡೆಮಿ ಪ್ಲಾಟ್‌ಫಾರ್ಮ್ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ವರ್ಚುವಲ್ ಕಲಿಕೆಯ ಜನಪ್ರಿಯತೆಯ ಮಧ್ಯೆ ಕಳೆದ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾಯಿತು. ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿತು. ಇದು ಭಾರತದಾದ್ಯಂತ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಗೆ ಇದು ತರಬೇತಿ ನೀಡುತ್ತದೆ.

ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌

ಇ ಕಾಮರ್ಸ್ ದೈತ್ಯ ಅಮೆಜಾನ್ ಅಕಾಡೆಮಿಯನ್ನು ಪ್ರಸ್ತುತ ಗ್ರಾಹಕರನ್ನು ನೋಡಿಕೊಂಡು ಹಂತ ಹಂತವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಕೋವಿಡ್ 19 ಪ್ರೇರಿತ ಲಾಕ್‌ಡೌನ್‌ಗಳ ನಂತರ ಭಾರತದಾದ್ಯಂತ ಮತ್ತೆ ತೆರೆಯುವ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳ ಒತ್ತಡದಲ್ಲಿ ಅನೇಕ ಎಜುಟೆಕ್ ಸಂಸ್ಥೆಗಳು ತತ್ತರಿಸುತ್ತಿರುವ ಸಮಯದಲ್ಲಿ ಅಮೆಜಾನ್ ಈ ನಿರ್ಧಾರ ಮಾಡಿದೆ.

Amazon to close online learning academy in India

ಕಳೆದ ತಿಂಗಳು ಆಕಾಶ್‌ ಎಜುಟೆಕ್‌ ಕಂಪೆನಿ ಮಾಲೀಕ ಬೈಜುಸ್ ಲಾಭ ಕೊರತೆಯ ಕಾರಣ 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿತ್ತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಇತರ ಎಜುಟೆಕ್‌ ಕಂಪೆನಿಗಳಾದ ಅನ್ ಅಕಾಡೆಮಿ, ಟಾಪ್‌ಆರ್, ವೈಟ್‌ಹ್ಯಾಟ್ ಜೂನಿಯರ್ ಮತ್ತು ವೇದಾಂತು ಕೂಡ ಈ ವರ್ಷದ ಆರಂಭದಲ್ಲಿ ವಜಾಗಳನ್ನು ಘೋಷಿಸಿದ್ದರು.

ವಜಾಕ್ಕೂ ಮುನ್ನ ಅಮೆಜಾನ್‌ನಿಂದ ಭಾರತೀಯ ಉದ್ಯೋಗಿಗಳಿಗೆ ಆಫರ್‌ವಜಾಕ್ಕೂ ಮುನ್ನ ಅಮೆಜಾನ್‌ನಿಂದ ಭಾರತೀಯ ಉದ್ಯೋಗಿಗಳಿಗೆ ಆಫರ್‌

ಮೂಲಗಳ ಪ್ರಕಾರ ಈ ವರ್ಷದ ಅಕ್ಟೋಬರ್‌ನಲ್ಲಿ ಎಜುಟೆಕ್‌ ಪ್ಲಾಟ್‌ಫಾರ್ಮ್ ಅನ್ನು ಸ್ಥಗಿತಗೊಳಿಸುವ ಯೋಜನೆಯ ಬಗ್ಗೆ ಅಮೆಜಾನ್ ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಸುಮಾರು 25 ಉದ್ಯೋಗಿಗಳು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರನ್ನೂ ಈಗ ಕಂಪನಿಯು ತೆಗೆದಿದೆ. ವೇದಿಕೆಯು ಸುಮಾರು 150 ವಿದ್ಯಾರ್ಥಿಗಳಿಗೆ ತನ್ನ ಕೋರ್ಸ್‌ಗಳನ್ನು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರು ಅಕ್ಟೋಬರ್ 2024 ರವರೆಗೆ ಒಂದು ವರ್ಷದ ಅವಧಿಯವರೆಗೆ ಆನ್‌ಲೈನ್‌ನಲ್ಲಿ ಪೂರ್ಣ ಕೋರ್ಸ್‌ಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಪ್ರಸ್ತುತ ಶೈಕ್ಷಣಿಕ ಬ್ಯಾಚ್‌ನಲ್ಲಿ ದಾಖಲಾದವರಿಗೆ ಸಂಪೂರ್ಣ ಶುಲ್ಕವನ್ನು ಅಮೆಜಾನ್‌ ಅಕಾಡೆಮಿ ಮರುಪಾವತಿ ಮಾಡುತ್ತದೆ.

English summary
Amazon .com, launched for high school students in India, said on Thursday it will shut down its online learning platform in two years, without citing any reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X