ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜಾಕ್ಕೂ ಮುನ್ನ ಅಮೆಜಾನ್‌ನಿಂದ ಭಾರತೀಯ ಉದ್ಯೋಗಿಗಳಿಗೆ ಆಫರ್‌

|
Google Oneindia Kannada News

ನವದೆಹಲಿ, ನವೆಂಬರ್‌ 17: ಇ ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಜಗತ್ತಿನಾದ್ಯಂತ ಬರೋಬ್ಬರಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವಾಗಲೇ ಭಾರತೀಯ ಉದ್ಯೋಗಿಗಳಿಗೆ ಆಫರ್‌ ನೀಡಿದ್ದು, ತಾವೇ ಸ್ವಯಂ ಆಗಿ ಕಂಪೆನಿ ತ್ಯಜಿಸಿದರೆ ಈ ಆಫರ್‌ ನೀಡುವುದಾಗಿದೆ ತಿಳಿಸಿದೆ.

ಜೆಫ್ ಬೆಜೋಸ್ ಒಡೆತನದ ಅಮೆಜಾನ್‌ ಕಂಪೆನಿ ತನ್ನ ಕೆಲವು ಭಾರತೀಯ ಉದ್ಯೋಗಿಗಳಿಗೆ ಸ್ವಯಂ ಆಗಿ ಅವರು ಕಂಪೆನಿ ತ್ಯಜಿಸಿದರೆ ಆ ಪ್ರತ್ಯೇಕಗೊಳ್ಳುವುದಕ್ಕಾಗಿ ಕೊಡುಗೆ ಪಡೆಯಲಿದ್ದಾರೆ ಎಂದು ತಿಳಿಸಿದೆ.

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವುLargest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

ಭಾರತದ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಬೇರ್ಪಡುವಿಕೆ ಕಾರ್ಯಕ್ರಮದ ಪ್ರಕಾರ ಭಾರತೀಯ ಉದ್ಯೋಗಿಗಳಿಗೆ 22 ವಾರಗಳ ಮೂಲ ವೇತನಕ್ಕೆ ಸಮಾನವಾದ ವೇತನವನ್ನು ನೀಡುವುದಾಗಿ ಘೋಷಿಸಿದೆ. ಅಲ್ಲದೆ ಪ್ರತಿ ಆರು ತಿಂಗಳ ಸೇವೆಗೆ ಒಂದು ವಾರದ ಮೂಲ ವೇತನ ಹಾಗೂ ಆರು ತಿಂಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆ ಹಾಗೂ ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ನೋಟಿಸ್‌ ಅವಧಿ ಬದಲು ಹಣ ಪಾವತಿಸಿ ಹೊರಹೋಗುವ ಅವಕಾಶ ನೀಡಿದೆ.

ಇದರೊಂದಿಗೆ ಬೋನಸ್‌ ಇಲ್ಲವೇ ಸ್ಥಳಾಂತರದ ವೆಚ್ಚಗಳಿಗೆ ಸಹಿ ಮಾಡಲು ಬಾಕಿ ಉಳಿದಿರುವ ಕೆಲವು ಬಾಧ್ಯತೆಗಳ ಪೂರೈಕೆ ರಿಯಾಯಿತಿಯನ್ನು ಸಹ ಈ ಕೊಡುಗೆ ಹೊಂದಿರುತ್ತದೆ. ಜಗತ್ತಿನ ಅತಿ ದೊಡ್ಡ ಟೆಕ್‌ ದೈತ್ಯ ಕಂಪೆನಿಯೆನಿಸಿರುವ ಅಮೆಜಾನ್‌ ಜಗತ್ತಿನಾದ್ಯಂತ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 10,000 ಮಂದಿಯನ್ನು ವಜಾಗೊಳಿಸಲು ನಿರ್ಧರಿಸಿದೆ.

Amazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆAmazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆ

2001ರ ವರ್ಷದ ಸ್ಥಿತಿಗೆ ಅಮೆಜಾನ್‌ ಕಂಪೆನಿ

2001ರ ವರ್ಷದ ಸ್ಥಿತಿಗೆ ಅಮೆಜಾನ್‌ ಕಂಪೆನಿ

ಇದು ಕಂಪೆನಿಯ ಇತಿಹಾಸದಲ್ಲಿ ಅತಿ ದೊಡ್ಡ ಉದ್ಯೋಗ ಕಡಿತವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಕೋವಿಡ್‌ ಸಾಂಕ್ರಮಿಕದ ನಂತದ ಜನರು ತಮ್ಮ ಕೊಳ್ಳುವಿಕೆಯನ್ನು ಕಡಿಮೆ ಮಾಡಿದ್ದರು. ಇದು ಈ ವರ್ಷ ಬೆಳವಣಿಗೆಯಲ್ಲಿ ಕಂಪೆನಿಯನ್ನು ನಿಧಾನಗತಿಯಲ್ಲಿ ಬೆಳವಣಿಗೆಯನ್ನು ತೋರಿಸಿತು. ಅಲ್ಲದೆ ಬೆಳವಣಿಗೆ ದುರ್ಬಲವಾಗಿ ಆದಾಯವು ಕುಸಿಯತೊಡಗಿತು. ಇದು 2001ರ ವರ್ಷದ ಕಂಪೆನಿಯ ಸ್ಥಿತಿಗೆ ಕೊಂಡ್ಯೋಯಿತು.

ಆದಾಯದಲ್ಲಿ ಕುಸಿತ, ಜಾಗತಿಕ ಆರ್ಥಿಕ ಅನಿಶ್ಚಿತತೆ

ಆದಾಯದಲ್ಲಿ ಕುಸಿತ, ಜಾಗತಿಕ ಆರ್ಥಿಕ ಅನಿಶ್ಚಿತತೆ

ಜಗತ್ತಿನ ಪ್ರಮುಖ ಟೆಕ್‌ ಕಂಪೆನಿಗಳು ಇತ್ತೀಚಿನ ದಿನಗಳಲ್ಲಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಡಿಜಿಟಲ್‌ ಜಾಹೀರಾತು ಆದಾಯದಲ್ಲಿ ಕುಸಿತ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ನೇಮಕಾತಿಯನ್ನು ತಡೆ ಹಿಡಿದಿವೆ. ಇದರಲ್ಲಿ ಪ್ರಮುಖವಾಗಿ ಮೈಕ್ರೋಸಾಫ್ಟ್‌, ಮೆಟಾ, ಟ್ವಿಟ್ಟರ್‌ ಹಾಗೂ ಸ್ನಾಟ್‌ಚಾಟ್‌ನಂತಹ ಕಂಪೆನಿಗಳು ಉದ್ಯೋಗಿಗಳನ್ನು ವಜಾ ಮಾಡಿವೆ. ಆಪಲ್‌ ಆಲ್ಫಾಬೆಟ್‌ ಕೂಡ ತಮ್ಮ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸಿವೆ.

ಹೆಚ್ಚಿನ ಉದ್ಯೋಗಿಗಳನ್ನು ನೇಮಕಕ್ಕೆ ಹಿಂದೇಟು

ಹೆಚ್ಚಿನ ಉದ್ಯೋಗಿಗಳನ್ನು ನೇಮಕಕ್ಕೆ ಹಿಂದೇಟು

ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಜಗತ್ತು ಮುಕ್ತವಾಗುತ್ತಿರುವಾಗಲೇ ಹಲವಾರು ಆರ್ಥಿಕ ಹಿಂಜರಿತಗಳು ಕಂಡು ಬರುತ್ತಿವೆ. ನಾವು 2023ಕ್ಕೆ ವಾರ್ಷಿಕ ಯೋಜನೆ ಮಾಡಲು ಪ್ರಕ್ರಿಯೆ ಆರಂಭಿಸುತ್ತಿರುವಾಗಲೇ ಕೆಲವು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಅಮೆಜಾನ್‌ ತಿಳಿಸಿದೆ. ನಮ್ಮ ಕಾರ್ಪೋರೇಟ್‌ ಉದ್ಯೋಗಿಗಳಲ್ಲಿ ಹೊಸ ನೇಮಕಾತಿಗಳನ್ನು ನಿಲ್ಲಿಸಿದ್ದೇವೆ. ಇದರಿಂದ ಕೆಲವು ತಂಡಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಇದರರ್ಥ ಕೆಲವು ಸಂದರ್ಭಗಳಲ್ಲಿ ಕೆಲವು ಉದ್ಯೋಗಿ ಪಾತ್ರಗಳ ಅಗತ್ಯ ನಮಗೆ ಇರುವುದಿಲ್ಲ ಎಂದು ಅಮೆಜಾನ್‌ ತಿಳಿಸಿದೆ.

ಭಾರತದಲ್ಲಿ1,00,000 ಉದ್ಯೋಗಿಗಳ ಸಂಖ್ಯೆ

ಭಾರತದಲ್ಲಿ1,00,000 ಉದ್ಯೋಗಿಗಳ ಸಂಖ್ಯೆ

ಉದ್ಯೋಗಿಗಳ ಅನುಭವ ಮತ್ತು ತಂತ್ರಜ್ಞಾನದ ಹಿನ್ನೆಲೆಯಲ್ಲಿ ನೇಮಕಾತಿಯಲ್ಲಿನ ವಿಳಂಬವು ನಮ್ಮ ಅಮೆಜಾನ್‌ ಕಂಪೆನಿಯ ಅಮೆಜಾನಿಯನ್‌ ಅನುಭವ ಹಾಗೂ ತಂತ್ರಜ್ಞಾನ ತಂಡದ ಮೇಲೆ ಪ್ರಭಾವ ಬೀರುತ್ತಿದೆ. ನಾವು ನಮ್ಮ ವ್ಯಾಪಾರದ ಅಗತ್ಯಗಳೊಂದಿಗೆ ಕಂಪೆನಿ ಹೊಂದಾಣೀಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಉದ್ಯೋಗಿಗಳು ಸ್ವಯಂ ಆಗಿ ಉದ್ಯೋಗ ತ್ಯಜಿಸಲು ಅವಕಾಶ ನೀಡುತ್ತಿದ್ದೇವೆ ಎಂದು ಕಂಪೆನಿ ತಿಳಿಸಿದೆ. ಅಮೆಜಾನ್‌ ಭಾರತದಲ್ಲಿ ಸುಮಾರು 1,00,000 ಉದ್ಯೋಗಿಗಳ ಬಲವನ್ನು ಹೊಂದಿದೆ.

English summary
E-commerce firm Amazon has made an offer to Indian employees even as it plans to lay off 10,000 employees worldwide, and said that it will give this offer if they voluntarily leave the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X