ವೊಡಾಪೋನ್ ಐಡಿಯಾದಲ್ಲಿ ಹೂಡಿಕೆಗೆ ಅಮೆಜಾನ್ ಆಸಕ್ತಿ
ನವದೆಹಲಿ ಜೂನ್ 1: ಅಮೆರಿಕಾದ ರಿಟೇಲ್ ದೈತ್ಯ ಅಮೆಜಾನ್ ಮತ್ತು ಕೆಲವು ಹೂಡಿಕೆದಾರರು, ಸಂಕಷ್ಟದಲ್ಲಿರುವ ವೊಡಾಪೋನ್ ಐಡಿಯಾದಲ್ಲಿ 20,000 ಕೋಟಿ ರುಪಾಯಿ ವರೆಗೆ ಹೂಡಿಕೆ ಮಾಡಲು ಆದಿತ್ಯ ಬಿರ್ಲಾ ಗ್ರೂಪ್ ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಮಾರಾಟದ ಆದಾಯವನ್ನು ಮುಂಬರುವ 5ಜಿ ಸ್ಪಕ್ಟ್ರಮ್ ಹರಾಜಿಗಾಗಿ ಮತ್ತು ವರ್ಷಾಂತ್ಯದೊಳಗೆ ಸೇವೆಗಳ ರೋಲ್-ಔಟ್‌ಗಾಗಿ ಬಂಡವಾಳ ವೆಚ್ಚಕ್ಕಾಗಿ ಬಿಡ್ ಮಾಡಲು ಬಳಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಮೆಜಾನ್ ಹೊರತಾಗಿ ಭಾರತದಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಹಿಡಲು ಯತ್ನಿಸುತ್ತಿರುವ ಖಾಸಗಿ ಈಕ್ವಿಟಿ ಹೂಡಿಕೆದಾರರೊಂದಿಗೆ ಆದಿತ್ಯ ಬಿರ್ಲಾ ಗ್ರೂಪ್ ಮಾತುಕತೆ ನಡೆಸುತ್ತಿದೆ.
"ಹಲವು ಹೂಡಿಕೆದಾರರೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಹೊಸ ಹೂಡಿಕೆದಾರರ ಕುರಿತು ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ. ಹೂಡಿಕೆದಾರರು 10,000 ಕೋಟಿ ರೂ. ವರೆಗೆ ಈಕ್ವಿಟಿ ರೂಪದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಉಳಿದ ಮೊತ್ತವನ್ನು ಸಾಲ ಪಡೆಯುವ ಸಾಧ್ಯತೆಯಿದೆ,'' ಎಂದು ಮೂಲಗಳು ತಿಳಿಸಿವೆ.

29,870 ಕೋಟಿ ರುಪಾಯಿಗಳ ಮೌಲ್ಯ
ಈ ಬಗ್ಗೆ ಪ್ರತಿಕ್ರಿಯಿಸಲು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅಮೆಜಾನ್ ವಕ್ತಾರರು ನಿರಾಕರಿಸಿದ್ದಾರೆ. ಸೋಮವಾರದ ವೇಳೆಗೆ ವೊಡಾಪೋನ್ ಐಡಿಯಾದ ಷೇರುಗಳು ಶೇ. 4.14 ರಷ್ಟು ಏರಿಕೆಯಾಗಿ ಒಂದು ಷೇರಿಗೆ 9.3 ರುಪಾಯಿಗಳಿಗೆ ತಲುಪಿದೆ. ಸೋಮವಾರದ ವೇಳೆಗೆ ಕಂಪನಿಯು ಒಟ್ಟು 29,870 ಕೋಟಿ ರುಪಾಯಿಗಳ ಮೌಲ್ಯ ಹೊಂದಿದೆ. ಒಮ್ಮೆ ಕಂಪನಿಯು ಅದರ ಬಾಕಿಗಳಿಗೆ ಬದಲಾಗಿ ಕಂಪನಿಯಲ್ಲಿ ಪಾಲನ್ನು ತೆಗೆದುಕೊಂಡ ನಂತರ ಸರಕಾರ ಪಾತ್ರದ ಬಗ್ಗೆ ಹೂಡಿಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಜನವರಿ 10ರಂದು ನಿರ್ಧಾರ
ಸರಕಾರದಿಂದ ಈಕ್ವಿಟಿಯಾಗಿ ಪರಿವರ್ತಿಸಲು ಬಡ್ಡಿಯ ನಿವ್ವಳ ಪ್ರಸ್ತುತ ಮೌಲ್ಯವನ್ನು(ಎನ್ ಪಿವಿ) ಲೆಕ್ಕಾಚಾರ ಮಾಡಲು ಪರಿಣಾಮಕಾರಿ ದಿನಾಂಕವು ಜನವರಿ 10 ಎಂದು ಕಂಪನಿ ನಿರ್ಧರಿಸಿದೆ. ಮೊರಟೋರಿಯಂ ಅವಧಿಯ ಮೇಲಿನ ಬಡ್ಡಿ ಹೊಣೆಗಾರಿಕೆಯ ಎನ್ ಪಿವಿ ಯು ಎಜಿಆರ್(ಹೊಂದಾಣಿಕೆ ಮಾಡಿದ ಒಟ್ಟು ಆದಾಯಗಳು) ಮತ್ತು ಮುಂದೂಡಲ್ಪಟ್ಟ ಸ್ಪೆಕ್ಟ್ರಮ್ ಹೊಣೆಗಾರಿಕೆಗಳ ಕಡೆಗೆ 16,130 ಕೋಟಿ ರು. ಆಗಿದೆ.

ಟೆಲಿಕಾಂ ಕ್ಷೇತ್ರಕ್ಕೆ ಸಹಾಯಹಸ್ತ
"ಸರಕಾರವು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೂಡಿಕೆದಾರರು ಬರಲಿದ್ದಾರೆ,'' ಎಂದು ಮೂಲಗಳು ತಿಳಿಸಿವೆ. ಟೆಲಿಕಾಂ ವಲಯಕ್ಕೆ ಸಹಾಯಹಸ್ತ ಚಾಚಲು ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡ ನಂತರ ಹೂಡಿಕೆದಾರರು ವೊಡಾಪೋನ್ ಐಡಿಯಾದಲ್ಲಿ ಹಣವನ್ನು ಹೂಡುಲು ಆಸಕ್ತಿ ತೋರಿದ್ದಾರೆ.

ಕಂಪನಿಗಳಿಗೆ ಆರ್ಥಿಕವಾಗಿ ಸಹಾಯ
ಈ ವರ್ಷದ ಮಾರ್ಚ್ ನಲ್ಲಿ ದೂರಸಂಪರ್ಕ ಇಲಾಖೆಯು ಹಿಂದಿನ ಸ್ಪೆಕ್ಟ್ರಮ್ ಹರಾಜಿಗೆ ಸಂಬಂಧಿಸಿದ ಹಣಕಾಸು ಬ್ಯಾಂಕ್ ಗ್ಯಾರೆಂಟಿಗಳನ್ನು ಕಂಪನಿಗೆ ಹಿಂತಿರುಗಿಸಲು ನಿರ್ದೇಶನ ನೀಡಿತು. ಇಲ್ಲಿಯವರೆಗೆ 16,000 ಕೋಟಿ ರುಪಾಯಿ ಮೌಲ್ಯದ ಬ್ಯಾಂಕ್ ಗ್ಯಾರೆಂಟಿಗಳನ್ನು ಹಿಂತಿರುಗಿಸಲಾಗಿದೆ. ಹೀಗಾಗಿ ಕಂಪನಿಗಳಿಗೆ ಆರ್ಥಿಕವಾಗಿ ಸಹಾಯವಾಗಿದೆ.

4,500 ಕೋಟಿ ರುಪಾಯಿ ಹೂಡಿಕೆ
ಇನ್ನೊಂದೆಡೆ, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ವೊಡಾಪೋನ್ ಐಡಿಯಾ ಪಿಎಲ್ ಸಿ ಹೊಸದಾಗಿ ಆದ್ಯತೆಯ ಇಕ್ವಿಟಿ ಇನ್ಫ್ಯಷನ್ ಮೂಲಕ ಟೆಲ್ಕೋದಲ್ಲಿ 4,500 ಕೋಟಿ ರುಪಾಯಿ ಹೂಡಿಕೆ ಮಾಡಿವೆ. ಪ್ರತಿ ಈಕ್ವಿಟಿ ಷೇರಿಗೆ 13.3 ರು.ಗಳಂತೆ ಷೇರುಗಳನ್ನು ಪ್ರಮೋಟರ್ ಗಳಿಗೆ ನೀಡಲಾಯಿತು. ಇದರಲ್ಲಿ ವೊಡಾಪೋನ್ ಐಡಿಯಾ 3,375 ಕೋಟಿ ರು. ಮತ್ತು ಆದಿತ್ಯ ಬಿರ್ಲಾ ಗ್ರೂಪ್ 1,125 ಕೋಟಿ ರು.ಹೂಡಿಕೆ ಮಾಡಿದೆ. ಇದರ ನಂತರ ಪ್ರಮೋಟರ್ ಗಳ ಸಂಯೋಜಿತ ಷೇರುಗಳು ಶೇ. 74.99 ಆಗಿದೆ. ಬಡ್ಡಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದ ನಂತರ ಸರಕಾರದ ಷೇರುಗಳು ಶೇ. 33 ಆಗುವ ನಿರೀಕ್ಷೆಯಿದೆ.

5ಜಿ ಸೇವೆಗಳಲ್ಲಿ ಹೂಡಿಕೆ ಮಾಡಲು ಉತ್ಸುಕ
ಪುಣೆ ಮತ್ತು ಗಾಂಧಿನಗರದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ನಂತರ ಕಂಪನಿಯು 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ. 5ಜಿ ಬೆಲೆಯ ಸಮಾಲೋಚನೆಯ ನಂತರ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಟೆಲಿಕಾಂ ಉದ್ಯಮದಿಂದ ಹಲವು ಮನವಿಗಳನ್ನು ಪಡೆದಿದೆ. ಅಲ್ಲದೇ 5ಜಿ ಸ್ಪೆಕ್ಟ್ರಮ್ ಬೆಲೆಯು ಅದರ ಆರಂಭಿಕ ಅಂದಾಜಿನಿಂದ ಶೇ. 36 ಪ್ರತಿದಷ್ಟು ಕಡಿಮೆಯಾಗಿದೆ. ಹಿಂದಿನ ಹರಾಜಿನಲ್ಲಿದ್ದಂತೆ ಶೇ. 50 ಪ್ರತಿಶತ ಮುಂಗಡ ಪಾವತಿಗೆ ಹೋಲಿಸಿದರೆ ಸ್ಪೆಕ್ಟ್ರಮ್ ಪಾವತಿಗಳನ್ನು ಸ್ಪೆಕ್ಟ್ರಮ್ ವ್ಯಾಲಿಡಿಟಿ ವರೆಗೆ ಮಾಡಲು ಟ್ರಾಯ್ ಶಿಫಾರಸು ಮಾಡಿದೆ. ಇದು ಅಪರೇಟರ್‌ಗಳು ತಮ್ಮ ನಗದು ಹರಿವನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುವ ಮತ್ತೊಂದು ಹಂತವಾಗಿದೆ.
(ಒನ್ಇಂಡಿಯಾ ಸುದ್ದಿ)
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications