ಕನ್ನಡ ಬಳಸಲು ನಿರಾಕರಿಸಿದ ಅಮೆಜಾನ್ ಗೆ ನೋಟಿಸ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 7: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇ ಕಾಮರ್ಸ್ ಕಂಪೆನಿ ಅಮೆಜಾನ್ ಇಂಡಿಯಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಕನ್ನಡ ಭಾಷೆ ಜಾರಿ ವಿಚಾರವಾಗಿ ಕಂಪೆನಿ ನಿರ್ಲಕ್ಷ್ಯ ಮಾಡಿದೆ. ಇನ್ನು ಹದಿನೈದು ದಿನದೊಳಗೆ ಕರ್ನಾಟಕ ರಾಜ್ಯದ ಎಲ್ಲ ನಿಯಮಗಳನ್ನು ಅನುಸರಿಸಲೇ ಬೇಕು ಎಂದು ಪ್ರಾಧಿಕಾರ ಖಡಕ್ ಸೂಚನೆಯನ್ನು ನೀಡಿದೆ.

ಅಮೆಜಾನ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಒಟ್ಟು ಎಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಆ ಪೈಕಿ ಕನ್ನಡ ಮಾತನಾಡುವವರು ಎಷ್ಟು ಮಂದಿ, ಗ್ರಾಹಕ ಸೇವಾ ವಿಭಾಗವೂ ಸೇರಿದಂತೆ ಕಂಪನಿಯ ಇತರ ವಿಭಾಗಗಳಲ್ಲಿ ಕನ್ನಡ ಅನುಷ್ಠಾನ ಆಗಿದೆಯೇ.. ಹೀಗೆ ಇತರ ವಿವರಗಳನ್ನು ಸಲ್ಲಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೂಚನೆ ನೀಡಿದೆ.['ಕನ್ನಡಕ್ಕೆ ಐದು ಪೈಸೆ ಕಿಮ್ಮತ್ತು ನೀಡದ ಅಮೆಜಾನ್ ಗೆ ಧಿಕ್ಕಾರ'!]

Amazon gets notice to refuse to use Kannada

ಅಮೆಜಾನ್ ಲಕ್ಷಾಂತರ ಮಂದಿಯನ್ನು ನೇಮಿಸಿಕೊಂಡಿರಬಹುದು. ಆದರೆ ಅದರ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಏನೂ ಮಾಡುತ್ತಿಲ್ಲ. ಗ್ರಾಹಕ ಸೇವಾ ವಿಭಾಗಕ್ಕೆ ಕನ್ನಡ ಮಾತನಾಡುವವರು ಕರೆ ಮಾಡಿದರೆ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ನೋಟಿಸ್ ನೀಡಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಖಾತ್ರಿ ಪಡಿಸಿದ್ದಾರೆ. ಅಮೆಜಾನ್ ನ ಕಿಂಡಲ್ ಇ ಬುಕ್ ರೀಡರ್ ನಲ್ಲಿ ಕನ್ನಡ ಪುಸ್ತಕ ಮಾರುವುದಕ್ಕೆ ನಿರಾಕರಿಸಿದ ದೂರು ಬಂದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಕೈಗಾರಿಕಾ ಇಲಾಖೆಗೆ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸೂಚಿಸಲಾಗಿದೆ.[ಕನ್ನಡ ಮಾತನಾಡದ ಟೆಕ್ಕಿ ಮೇಲೆ ಬೆಂಗಳೂರು ಪೊಲೀಸರ ಹಲ್ಲೆ?]

'ಅಮೆಜಾನ್ ಇಂಡಿಯಾ ವ್ಯವಹಾರ ಮಾಡುತ್ತಿರುವುದು ಕರ್ನಾಟಕದಲ್ಲಿ. ಕನ್ನಡ ಅನುಷ್ಠಾನಗೊಳಿಸುವುದು ಅದರ ಜವಾಬ್ದಾರಿ. ದೂರು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದೇವೆ' ಎಂದು ಹನುಮಂತಯ್ಯ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amazon India which is operating in Bengaluru, has been served a notice by the Kannada Development Authority for not implementing State government rules,not using Kannada in its daily work routine.Karnataka government issued a notice to Amazon India.
Please Wait while comments are loading...