ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

whiskey News: ಎಣ್ಣೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಈ ವಿಷಯದಲ್ಲಿ ಭಾರತವೇ ನಂ.1

|
Google Oneindia Kannada News

ನವದೆಹಲಿ, ಮಾರ್ಚ್ 15: ಖುಷಿಯಾದ್ರೂ ಎಣ್ಣೆ ಬೇಕು, ದುಃಖ ಆದ್ರೂ ಎಣ್ಣೆ ಬೇಕು. ಪಾರ್ಟಿ ಮಾಡೋಕೂ ಎಣ್ಣೆ, ಸೆಲೆಬ್ರೇಟ್ ಮಾಡೋದಕ್ಕೂ ಎಣ್ಣೆ. ಇಂಡಿಯಾದಲ್ಲಿ ಎಣ್ಣೆಯಿಲ್ಲದೇ ಯಾವುದೇ ಕಾರ್ಯಕ್ರಮ ಕಂಪ್ಲೀಟ್ ಆಗುವುದೇ ಇಲ್ಲ ಅನ್ನುವ ಒಂದು ವರ್ಗವಿದೆ. ಇದು ಮದ್ಯಪ್ರಿಯರ ಒನ್ ಆಂಡ್ ಒನ್ಲಿ ಫೇವರಿಟ್ ಸುದ್ದಿ.

ಜಗತ್ತಿನಲ್ಲಿ ಅತಿ ಹೆಚ್ಚು ವಿಸ್ಕಿ ಅನ್ನು ಬಳಕೆ ಮಾಡಿಕೊಳ್ಳುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೇ ನಂಬರ್ 1 ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅತಿ ಹೆಚ್ಚು ವಿಸ್ಕಿ ಅನ್ನು ಬಳಸುವ ಎರಡನೇ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಾಗಿಂತಲೂ ಮೂರು ಪಟ್ಟು ಹೆಚ್ಚು ವಿಸ್ಕಿಯು ಭಾರತದಲ್ಲಿ ಸೇಲ್ ಆಗುತ್ತೆ ಎಂದು ಸಮೀಕ್ಷೆಯ ವರದಿಯೊಂದು ಹೇಳಿದೆ.

"ಎಣ್ಣೆ ಹೊಡೆಯುವವರು ಯಾರಿದ್ದೀರಿ": ಕಾಂಗ್ರೆಸ್ ಸಭೆಯಲ್ಲಿ ರಾಹುಲ್ ಗಾಂಧಿ ಇದೆಂಥಾ ಪ್ರಶ್ನೆ?

ದೇಶದಲ್ಲಿ ಅತಿಹೆಚ್ಚು ವಿಸ್ಕಿ ಬಳಕೆ ಆಗುತ್ತಿದ್ದರೂ ನಗರ ಪ್ರದೇಶಗಳ ಮದ್ಯಪ್ರಿಯರಿಗೆ ಮಾತ್ರ ಬಿಯರ್ ಅಂದ್ರೆ ಪಂಚಪ್ರಾಣವಂತೆ. ನಗರ ಪ್ರದೇಶಗಳಲ್ಲಿ ಶೇ.16ರಷ್ಟು ಜನರು ವಿಸ್ಕಿಯನ್ನು ಮೆಚ್ಚಿಕೊಂಡರೆ, ಶೇ.56ರಷ್ಟು ಮಂದಿ ಬಿಯರ್‌ಗಾಗಿ ಬಾಯಿ ಬಾಯಿ ಬಿಡುತ್ತಾರಂತೆ. ಇನ್ನು ವೈನ್ ಇಷ್ಟಪಡುವವರ ಪ್ರಮಾಣ ಶೇ.55ರಷ್ಟು ಇದೆ ಎಂದು YouGuv ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ದೇಶದ ವಿಸ್ಕಿ, ಬಿಯರ್, ವೈನ್ ಪ್ರಿಯರು ತಿಳಿದುಕೊಳ್ಳಬೇಕಾದ ಬೊಂಬಾಟ್ ವಿಷಯಗಳು ಮುಂದಿವೆ ಓದಿ.

 ವಿಶೇಷ ಸಂದರ್ಭಗಳಲ್ಲಿ ವಿಸ್ಕಿ ಕುಡಿಯುವವರೇ ಹೆಚ್ಚು!

ವಿಶೇಷ ಸಂದರ್ಭಗಳಲ್ಲಿ ವಿಸ್ಕಿ ಕುಡಿಯುವವರೇ ಹೆಚ್ಚು!

ಪುರುಷರಲ್ಲಿ ಅತಿಹೆಚ್ಚು ಮಂದಿಗೆ ವಿಸ್ಕಿ ಅಷ್ಟಾಗಿ ಇಷ್ಟವಾಗುವುದಿಲ್ಲ. ಯುವಕರು ಮತ್ತು ಮಧ್ಯಮ ವಯಸ್ಕರು ಹೆಚ್ಚಾಗಿ ಬಿಯರ್ ಅನ್ನು ಮೆಚ್ಚಿಕೊಳ್ಳುತ್ತಾರೆ. ಹಾಗಿದ್ದರೆ ವಿಸ್ಕಿಗೆ ಡಿಮ್ಯಾಂಡ್ ಸೃಷ್ಟಿಯಾಗುವುದಕ್ಕೆ ಮಹಿಳೆಯರು ಕಾರಣವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಸಾಮಾನ್ಯವಾಗಿ ವಿಸ್ಕಿಯನ್ನು ವಿಶೇಷ ಸಂದರ್ಭದಲ್ಲಿ ಇಷ್ಟ ಪಡುವವರ ಸಂಖ್ಯೆಯು ಶೇ.86ರಷ್ಟಿದೆ. ಈ ವರ್ಗದ ಜನರು ಪಾರ್ಟಿ, ಬರ್ತ್ ಡೇ ಮತ್ತು ವೀಕೆಂಡ್ ಸಂದರ್ಭದಲ್ಲಿ ಮಾತ್ರ ವಿಸ್ಕಿಯನ್ನು ಕುಡಿಯುತ್ತಾರೆ. ಇನ್ನು ದಿನವಿಡೀ ಮದ್ಯಪಾನ ಮಾಡುವವರು ಅಥವಾ ಪ್ರತಿನಿತ್ಯ ಸಂಜೆ ವೇಳೆ ಮದ್ಯಪಾನ ಮಾಡುವವರಲ್ಲಿ ವಿಸ್ಕಿ ಕುಡಿಯುವವರ ಸಂಖ್ಯೆ ಶೇ.22ರಷ್ಟಿದೆ.

ಮದ್ಯಪಾನ ಪ್ರಿಯರಲ್ಲಿ ಆಲ್ಕೋಹಾಲ್ ಕಂಟೆಂಟ್ ನೋಡುವವರೆಷ್ಟು?

ಮದ್ಯಪಾನ ಪ್ರಿಯರಲ್ಲಿ ಆಲ್ಕೋಹಾಲ್ ಕಂಟೆಂಟ್ ನೋಡುವವರೆಷ್ಟು?

ಮದ್ಯಪಾನ ಮಡುವವರಲ್ಲಿ ಬಹುಪಾಲು ಜನರು ತಾವು ಕುಡಿಯುವ ಎಣ್ಣೆಯಲ್ಲಿ ಆಲ್ಕೋಹಾಲ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿಕೊಳ್ಳುತ್ತಾರಂತೆ. 5 ಜನರಲ್ಲಿ ಕನಿಷ್ಠ 3 ಜನರು ಅಂದರೆ ಶೇ.60ರಷ್ಟು ಮಂದಿ ಆಲ್ಕೋಹಾಲ್ ಕಂಟೆಂಟ್ ಅನ್ನು ನೋಡಿಕೊಂಡು ಮದ್ಯಪಾನ ಮಾಡುತ್ತಾರೆ. ಶೇ.11ರಷ್ಟು ವಿಸ್ಕಿ ಪ್ರಿಯರು ಹೊಸ ಬ್ರ್ಯಾಂಡ್ ಅನ್ನು ಹುಡುಕಿಕೊಂಡು ಹೋದರೆ, ಶೇ.8ರಷ್ಟು ಮಂದಿ ತಮ್ಮದೇ ಬ್ರ್ಯಾಂಡ್ ಪ್ರಿಯರಾಗಿದ್ದಾರೆ. ಅದರಲ್ಲೂ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಆಲ್ಕೋಹಾಲ್ ಕಂಟೆಂಟ್ ಕಡಿಮೆ ಇರುವ ವಿಸ್ಕಿಯನ್ನು ಇಷ್ಟಪಡುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಶೇ.48ರಷ್ಟು ಜನರು ಹೊಸ ಬ್ರ್ಯಾಂಡ್ ನೋಡುತ್ತಾರಂತೆ!

ಶೇ.48ರಷ್ಟು ಜನರು ಹೊಸ ಬ್ರ್ಯಾಂಡ್ ನೋಡುತ್ತಾರಂತೆ!

ವಿಸ್ಕಿಗೆ ಹೋಲಿಸಿದರೆ ಬಿಯರ್ ಹಾಗೂ ವೈನ್ ಪ್ರಿಯರು ತಮ್ಮದೇ ಬ್ರ್ಯಾಂಡ್ ಮೇಲೆ ಹೆಚ್ಚು ಒಲವು ಹೊಂದಿರುವುದು ಗೊತ್ತಾಗಿದೆ. ಶೇ.74ರಷ್ಟು ಬಿಯರ್ ಪ್ರಿಯರು ತಮ್ಮದೇ ಬ್ರ್ಯಾಂಡ್ ಅನ್ನು ಕುಡಿಯುವುದಕ್ಕೆ ಬಯಸಿದರೆ, ಶೇ.73ರಷ್ಟು ವೈನ್ ಪ್ರಿಯರು ತಮ್ಮದೇ ಬ್ರ್ಯಾಂಡ್ ಅನ್ನು ನೆಚ್ಚಿಕೊಂಡಿದ್ದಾರೆ.

ಕೊವಿಡ್-19 ಕಾಲದಲ್ಲಿ ಪಾಲಿಗೆ ಬಂದಿದ್ದೇ ಪಂಚಾಮೃತ

ಕೊವಿಡ್-19 ಕಾಲದಲ್ಲಿ ಪಾಲಿಗೆ ಬಂದಿದ್ದೇ ಪಂಚಾಮೃತ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಮದ್ಯಪ್ರಿಯರ ಬ್ರ್ಯಾಂಡ್ ಮೇಲಿನ ನಿಷ್ಛೆ ಕಡಿಮೆ ಆಯಿತು. ವಾಸ್ತವದಲ್ಲಿ ಯಾವ ಬ್ರ್ಯಾಂಡ್ ಸಿಗುತ್ತದೆಯೇ ಅದನ್ನೇ ಹೆಚ್ಚಾಗಿ ಸೇವಿಸುವುದಕ್ಕೆ ಮುಂದಾದರು. ಕೊವಿಡ್-19 ಅವಧಿಯಲ್ಲಿ ಎಣ್ಣೆ ಸಿಗುವುದೇ ಅಪರೂಪವಾಗಿತ್ತು. ಅಂಥ ಸಂದರ್ಭದಲ್ಲಿ ಯಾವುದೇ ಮದ್ಯಪ್ರಿಯರು ತಮ್ಮದೇ ಆಗಿರುವ ಬ್ರ್ಯಾಂಡ್ ಗೆ ಅಂಟಿಕೊಳ್ಳದೇ, ಪಾಲಿಗೆ ಬಂದಿದ್ದೇ ಪಂಚಾಮೃತ ಎನ್ನುವಂತೆ ಖರೀದಿಸಿದ್ದರು," ಎಂದು YouGuv ಸಂಸ್ಥೆಯ ಜನರಲ್ ಮ್ಯಾನೇಜರ್ ದೀಪಾ ಭಾಟಿಯಾ ಹೇಳಿದ್ದಾರೆ.

English summary
Alcohol consumption in India : India is largest whiskey consumer in world, Beer is favorite of urban Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X