• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿಗೆ ಮುಂದಾದ ಆಕಾಶ ಏರ್‌‌ ಬ್ರ್ಯಾಂಡ್‌

|
Google Oneindia Kannada News

ನವದೆಹಲಿ, ನವೆಂಬರ್‌ 16: ಅಮೆರಿಕ ಮೂಲದ ಬೋಯಿಂಗ್‌ ಸಂಸ್ಥೆಯ 737 ಮ್ಯಾಕ್ಸ್ ನ 72 ವಿಮಾನಗಳನ್ನು ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರರಾದ ರಾಕೇಶ್‌ ಝುಂಝುನ್ ವಾಲಾ'ರ "ಆಕಾಶ್ ಏರ್" ಸಂಸ್ಥೆ ಖರೀದಿ ಮಾಡಲಿದೆ. 737 ಮ್ಯಾಕ್ಸ್ ವಿಭಾಗದ 737-8 ಹಾಗೂ ಗರಿಷ್ಠ ಸಾಮರ್ಥ್ಯದ 737-8-200 ಎಂಬ ಎರಡು ಆವೃತ್ತಿಗಳನ್ನು ಆಕಾಶ್ ಏರ್ ಆರ್ಡರ್ ಮಾಡಿದೆ ಎಂದು ಬೋಯಿಂಗ್ ಹಾಗೂ ಆಕಾಶ ಏರ್ ಬ್ರಾಂಡ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಕಳೆದ ತಿಂಗಳು ಆಕಾಶ ಏರ್‌‌ ಬ್ರ್ಯಾಂಡ್‌ಗೆ ಗಗನಕ್ಕೆ ಏರಲು ಸರ್ಕಾರದಿಂದ ನಿರಾಕ್ಷೇಪಣೆ ಪ್ರಮಾಣಪತ್ರ ದೊರೆತಿದೆ. ಈ ಬಗ್ಗೆ ಎಸ್‌ಎನ್‌ವಿ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಪ್ರಕಟಣೆ ಮೂಲಕ ತಿಳಿಸಿತ್ತು. ಆಕಾಶ ಏರ್‌ (Akasa Air) ಬ್ರ್ಯಾಂಡ್ ಹೆಸರಿನಲ್ಲಿ ಹಾರಲಿದೆ ಎಂದು ಕೂಡಾ ಪ್ರಕಟಣೆ ಉಲ್ಲೇಖ ಮಾಡಿದೆ. ಜೆಟ್ ಏರ್‌ವೇಸ್‌ನ ಮಾಜಿ ಸಿಇಒ ವಿನಯ್ ದುಬೆ ಅವರ ಬೆಂಬಲವನ್ನು ಪಡೆದಿರುವ ಏರ್‌ಲೈನ್ 2022ರ ಬೇಸಿಗೆಯಿಂದ ಕಾರ್ಯ ನಿರ್ವಹಿಸಲು ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ)ಯಿಂದ ಪರವಾನಗಿ ಪಡೆದಿದೆ.

ವಿಚಕ್ಷಣಾ ವಿಮಾನ ನಿರ್ಮಾಣಕ್ಕೆ ಸಜ್ಜಾದ ಡಿಆರ್‌ಡಿಒ: ವಾಯುಸೇನೆ ಮತ್ತಷ್ಟು ಬಲಿಷ್ಠವಿಚಕ್ಷಣಾ ವಿಮಾನ ನಿರ್ಮಾಣಕ್ಕೆ ಸಜ್ಜಾದ ಡಿಆರ್‌ಡಿಒ: ವಾಯುಸೇನೆ ಮತ್ತಷ್ಟು ಬಲಿಷ್ಠ

ಇನ್ನು ಈ ಬಗ್ಗೆ ಪ್ರತ್ಯೇಕ ಪ್ರಕಟಣೆಯನ್ನು ಹೊರಡಿಸಿದೆ. "ಸುಮಾರು 9 ಶತಕೋಟಿ ಡಾಲರ್‌ ಮೌಲ್ಯದ 737 ಮ್ಯಾಕ್ಸ್ ವಿಭಾಗದ 737-8 ಹಾಗೂ ಗರಿಷ್ಠ ಸಾಮರ್ಥ್ಯದ 737-8-200 ಎಂಬ ಎರಡು ಆವೃತ್ತಿಗಳನ್ನು ಆಕಾಶ್ ಏರ್ ಆರ್ಡರ್ ಮಾಡಿದೆ. 737 ಮ್ಯಾಕ್ಸ್ ವಿಭಾಗವು ಶೀಘ್ರವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸಲಿದೆ," ಎಂದು ತಿಳಿಸಿದೆ.

ಇದು ಆಕಾಶ ಏರ್‌ ಬ್ರ್ಯಾಂಡ್‌ಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಯುಎಸ್‌ ವಿಮಾನ ತಯಾರಕ ಸಂಸ್ಥೆ ತನ್ನ ತನ್ನ 737 MAX ವಿಮಾನದೊಂದಿಗೆ ಮಾರುಕಟ್ಟೆಗೆ ತಡವಾಗಿ ಬಂದಿತ್ತು. ಹಾಗೆಯೇ ಎರಡು ಅಪಘಾತ, ನಂತರದ ಕೆಲವು ಬೆಳವಣಿಗೆಗಳು ತಯಾರಕರಿಗೆ ಮತ್ತಷ್ಟು ಹೊಡೆತವನ್ನು ನೀಡಿತು. ಜೆಟ್ ಏರ್‌ವೇಸ್‌ನಿಂದ ಹೊರಗುಳಿದ ನಂತರ, ಬೋಯಿಂಗ್ ಪ್ರಸ್ತುತ ಭಾರತದಲ್ಲಿ ನ್ಯಾರೋ ಬಾಡಿ ಏರ್‌ಕ್ರಾಫ್ಟ್‌ಗಳಿಗೆ ಕೇವಲ ಒಂದು ಗ್ರಾಹಕರನ್ನು ಹೊಂದಿದೆ. ಅದು ಸ್ಪೈಸ್‌ಜೆಟ್ ಆಗಿದೆ.

ಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ದುರಂತದಲ್ಲಿ ಸಾವುಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ದುರಂತದಲ್ಲಿ ಸಾವು

ಮಾರುಕಟ್ಟೆ ಸಂಖ್ಯೆಗಳು ಏನು ಹೇಳುತ್ತವೆ?

ಡಿಜಿಸಿಎ ತನ್ನ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ ಮಧ್ಯದ ಅಪ್‌ಡೇಟ್‌ನಲ್ಲಿ ಭಾರತ ದೇಶದಲ್ಲಿ 700 ಕ್ಕಿಂತ ಸ್ವಲ್ಪ ಕಡಿಮೆ ಪ್ರಯಾಣಿಕ ವಿಮಾನಗಳನ್ನು ಹೊಂದಿದೆ ಎಂದು ಉಲ್ಲೇಖ ಮಾಡಿದೆ. ಇವುಗಳಲ್ಲಿ ಸುಮಾರು ಶೇಕಡ 65 ಏರ್‌ಬಸ್ ಆಗಿದೆ. ಭಾರತದಲ್ಲಿ ಬೋಯಿಂಗ್ ಶೇಕಡ 100 ರಷ್ಟು ವಿಶಾಲವಾದ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಒಟ್ಟು ಪ್ಯಾಸೆಂಜರ್ ಫ್ಲೀಟ್ ಅನ್ನು ವಿಶ್ಲೇಷಿಸಿದಾಗ, ಸಣ್ಣ ವಿಮಾನವು ಶೇಕಡ 78 ರಷ್ಟು ಇದೆ. ಬಳಿಕ ಟರ್ಬೊ ಪ್ರಾಪ್ಸ್ ಶೇಕಡ 14 ರಷ್ಟು ಇದೆ. ವೈಡ್ ಬಾಡಿ ಶೇಕಡ 7 ಹಾಗೂ ಪ್ರಾದೇಶಿಕ ಜೆಟ್‌ಗಳು ಶೇಕಡ 1 ಆಗಿದೆ. ಭಾರತದಲ್ಲಿ 540 ವಿಮಾನಗಳು ನೋಂದಾಯಿಸಲ್ಪಟ್ಟಿವೆ. ಆ ಪೈಕಿ ಶೇಕಡ 83 ರಷ್ಟು ಅಂದರೆ 451 ಏರ್‌ಬಸ್ ಆಗಿದ್ದರೆ 89 ಮಾತ್ರ ಬೋಯಿಂಗ್ ವಿಮಾನ ಆಗಿದೆ.

ಇನ್ನು ಆಕಾಶ ಏರ್‌‌ ಬ್ರ್ಯಾಂಡ್‌ಗೆ ಗಗನಕ್ಕೆ ಏರಲು ಸರ್ಕಾರದಿಂದ ನಿರಾಕ್ಷೇಪಣೆ ಪ್ರಮಾಣಪತ್ರ ಪಡೆಯುವ ಮುನ್ನಾ ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರರಾದ ರಾಕೇಶ್‌ ಝುಂಝುನ್ ವಾಲಾ ಮತ್ತು ಅವರ ಪತ್ನಿ ರೇಖಾ ಭೇಟಿ ಮಾಡಿದ್ದರು. ಜುಂಜುನ್​ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತದೆ. ದಲಾಲ್ ಸ್ಟ್ರೀಟ್‌ನಲ್ಲಿ ಜುಂಜುನ್​ವಾಲ್​ ಅವರು ತೆಗೆದುಕೊಳ್ಳುವ ಪ್ರತಿ ಸ್ಟಾಕ್ ಕುರಿತಾದ ನಡೆಯನ್ನು ಮತ್ತು ಹೂಡಿಕೆ ತಂತ್ರವನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಾರೆ.

(ಒನ್‌ಇಂಡಿಯಾ ಸುದ್ದಿ)

English summary
Akasa set for take-off, inks deal with Boeing for 72 aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X