ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಲ್ಲಿಯೇ ಏರ್‌ಟೆಲ್ ಸೂಪರ್ ಫಾಸ್ಟ್ 5G ಸೇವೆ ಪ್ರಾರಂಭ?

|
Google Oneindia Kannada News

ನವದೆಹಲಿ, ಆಗಸ್ಟ್ 22: ಭಾರತದ ಮೂಲೆ-ಮೂಲೆಯಲ್ಲಿ ಎಲ್ಲಾ ಭಾರತೀಯ ಟೆಲಿಕಾಂ ಆಪರೇಟರ್‌ಗಳು 5G ಸೇವೆಗಳನ್ನು ನೀಡುವ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ. ಹೀಗಿರುವಾಗ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ಭಾರ್ತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಅಖಿಲ್ ಗುಪ್ತಾ ಈ ಕುರಿತು ಮಹತ್ವದ ಮಾಹಿತಿ ನೀಡುವ ಮೂಲ 5G ಸೇವೆಯನ್ನು ಗ್ರಾಹಕರಿಗೆ ಆಗಸ್ಟ್‌ನಲ್ಲಿಯೇ ಪಡೆಯಬಹುದು ಎಂದು ಖಚಿತ ಪಡಿಸಿದ್ದಾರೆ. ಅಖಿಲ್ ಗುಪ್ತಾ ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಏರ್‌ಟೆಲ್ ಹೆಚ್ಚಿನ ಸುಂಕದ ಯೋಜನೆಗಳೊಂದಿಗೆ 5G ಸೇವೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಮಾಹಿತಿಗಳ ಪ್ರಕಾರ, ಭಾರತದಲ್ಲಿ ಏರ್‌ಟೆಲ್ 5G ಸೇವೆಯನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಿರುವ ಯೋಜನೆ ವೇಗವಾಗಿ ಸಾಗುತ್ತಿದೆ.

ಏರ್‌ಟೆಲ್‌ನ 5G ತನ್ನ ಸೇವೆಯನ್ನು ಈ ತಿಂಗಳಲ್ಲೇ ಪ್ರಾರಂಭಿಸಲಾಗುವುದು. ಈ ಬಗ್ಗೆ ಕೆಲ ಸಮಯದ ಹಿಂದೆಯೇ ಕಂಪನಿ ಮಾಹಿತಿ ನೀಡಿತ್ತು. ಆಗಸ್ಟ್‌ನಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ಹೇಳಿತ್ತು. ಸದ್ಯ ಇದರೊಂದಿಗೆ ನೀವು ನಿಮ್ಮ 5G ಸ್ಮಾರ್ಟ್‌ಫೋನ್‌ನಲ್ಲಿ 5G ಸೇವೆಯನ್ನು ಆನಂದಿಸಬಹುದು ಎಂದು ಖಚಿತ ಪಡಿಸಿದ್ದಾರೆ. ಇನ್ನಷ್ಟು ವಿವರ ನೀಡಿದ ಗುಪ್ತಾ, ಏರ್‌ಟೆಲ್ ತನ್ನ ಸೂಪರ್‌ಫಾಸ್ಟ್ ನೆಟ್‌ವರ್ಕ್‌ಗೆ ಪ್ರೀಮಿಯಂ ವಿಧಿಸದೆ ಅದು ಹೆಚ್ಚಿನ ಬೆಲೆಯ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದರು.

ಭಾರತದಲ್ಲಿ 5ಜಿ ಸೌಲಭ್ಯ ಜಾರಿ ಯಾವಾಗ? ಟೆಲಿಕಾಂ MoSರಿಂದ ಸುಳಿವುಭಾರತದಲ್ಲಿ 5ಜಿ ಸೌಲಭ್ಯ ಜಾರಿ ಯಾವಾಗ? ಟೆಲಿಕಾಂ MoSರಿಂದ ಸುಳಿವು

5ಜಿ ಸೇವೆ ಸಂಪೂರ್ಣ ಸೂಪರ್ ಫಾಸ್ಟ್ ಆಗಲಿದ್ದು, ಬಳಕೆದಾರರು ವೇಗದ ನೆಟ್ ವರ್ಕ್ ಅನುಭವವನ್ನು ಪಡೆಯಲಿದ್ದಾರೆ ಮತ್ತು ಮುಂಬರುವ ಭವಿಷ್ಯದಲ್ಲಿ 5ಜಿ ಸೇವೆಗೆ ಬೇಡಿಕೆ ಹೆಚ್ಚಾಗುವುದರಿಂದ ಟೆಲಿಕಾಂ ಕಂಪನಿಗಳ ಆದಾಯವೂ ಹೆಚ್ಚಲಿದೆ ಎಂದು ಗುಪ್ತಾ ಹೇಳಿದ್ದಾರೆ. ಅದೇ ಸಮಯದಲ್ಲಿ, ವಿಶ್ವಕ್ಕೆ ಹೋಲಿಸಿದರೆ, ಭಾರತದಲ್ಲಿ ದೂರಸಂಪರ್ಕ ಸೇವಾ ಶುಲ್ಕಗಳು ಕಡಿಮೆ ಬೆಲೆಯಲ್ಲಿ ವೇಗದ ಸೇವೆಯನ್ನು ನೀಡಲು ಸಾಧ್ಯವಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.

 ಏರ್‌ಟೆಲ್ ಮೊದಲು ಹೆಚ್ಚಿನ ಬೆಲೆಯ 5G ಸೇವೆ

ಏರ್‌ಟೆಲ್ ಮೊದಲು ಹೆಚ್ಚಿನ ಬೆಲೆಯ 5G ಸೇವೆ

ಏರ್‌ಟೆಲ್ ಮೊದಲು ಹೆಚ್ಚಿನ ಬೆಲೆಯ ಯೋಜನೆಗಳಲ್ಲಿ 5G ಸೇವೆಗಳನ್ನು ಹೊರತರಲಿದ್ದೇವೆ. ಇಡೀ ವಿಷಯವನ್ನು ಚರ್ಚಿಸಲಾಗುತ್ತಿದೆ. ಭಾರ್ತಿ ಎಂಟರ್‌ಪ್ರೈಸ್ ಉಪಾಧ್ಯಕ್ಷ ಅಖಿಲ್ ಗುಪ್ತಾ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ. ಈ ದಿನಗಳಲ್ಲಿ ಅನೇಕ ಜನರಿಗೆ ಕೆಲಸ ಅಥವಾ ಮನರಂಜನೆಗಾಗಿ ಹೆಚ್ಚುವರಿ ಡೇಟಾ ಅಗತ್ಯವಿದೆ. ಏರ್‌ಟೆಲ್ ಅಂತಹ ಗ್ರಾಹಕರಿಗೆ ವ್ಯವಸ್ಥೆ ರೂಪಿಸಿದೆ ಕಂಪನಿಯು ಪ್ರಸ್ತುತ ನಾಲ್ಕು ಡೇಟಾ ಬೂಸ್ಟರ್ ಪ್ಯಾಕ್‌ಗಳನ್ನು ಹೊಂದಿದೆ. ದೇಶದಲ್ಲಿ 5Gಯ ​​ಹರಡುವಿಕೆ ಬಹಳ ವೇಗವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಈ ದಿನಗಳಲ್ಲಿ ಅನೇಕ ಜನರಿಗೆ ಕೆಲಸ ಅಥವಾ ಮನರಂಜನೆಗಾಗಿ ಹೆಚ್ಚುವರಿ ಡೇಟಾ ಅಗತ್ಯವಿದೆ. ಏರ್‌ಟೆಲ್ ಅವರಿಗೆ ಸಂಪೂರ್ಣ ವ್ಯವಸ್ಥೆ ಮಾಡಿದೆ. ಕಂಪನಿಯು ಪ್ರಸ್ತುತ ನಾಲ್ಕು ಡೇಟಾ ಬೂಸ್ಟರ್ ಪ್ಯಾಕ್‌ಗಳನ್ನು ಹೊಂದಲಿದೆ ಎಂದಿರುವ ಅವರು ಪ್ರತ್ಯೇಕ 5G ಮಾತ್ರ ಯೋಜನೆ ಬರುತ್ತಿದೆಯೇ? ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಏರ್‌ಟೆಲ್ ಮುಖ್ಯಸ್ಥರು, "ಯಾವುದೇ ಪ್ರತ್ಯಕವಾಗಿ 5G ಯೋಜನೆ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು. ನಾವು ಏನು ಮಾಡಬಹುದು ಎಂದರೆ ಹೆಚ್ಚು ದುಬಾರಿ ಯೋಜನೆಗಳಲ್ಲಿ 5G ನೀಡಲು ಪ್ರಾರಂಭಿಸುವುದು. ಅದರ ನಂತರ, ಫೋನ್ ಬಳಸುತ್ತಿರುವವರು ತಾವು ಯಾವುದನ್ನು ಬಳಸಬೇಕೆಂದು ನಿರ್ಧರಿಸುತ್ತಾರೆ. (ಚಿತ್ರವು ಸಾಂಕೇತಿಕವಾಗಿದೆ)

ಟೆಲಿಕಾಂ ಸಮರ: 5ಜಿ ಸೇವೆ ಆರಂಭ ಘೋಷಿಸಿದ ಏರ್‌ಟೆಲ್!ಟೆಲಿಕಾಂ ಸಮರ: 5ಜಿ ಸೇವೆ ಆರಂಭ ಘೋಷಿಸಿದ ಏರ್‌ಟೆಲ್!

 ಭಾರತದಲ್ಲಿ ಏರ್‌ಟೆಲ್ 5G ಬ್ಯಾಂಡ್‌ಗಳು

ಭಾರತದಲ್ಲಿ ಏರ್‌ಟೆಲ್ 5G ಬ್ಯಾಂಡ್‌ಗಳು

ಏರ್‌ಟೆಲ್ 900 MHz (n8), 1800 MHz (n3), 2100MHz (n1), 3300 MHz (n78), ಮತ್ತು 26 GHz (n258 mmWave) ಬ್ಯಾಂಡ್‌ಗಳನ್ನು ಖರೀದಿಸಿದೆ. ಇದಕ್ಕಾಗಿ ಕಂಪನಿಯು ಸುಮಾರು 43,038 ಕೋಟಿ ರೂ.ಯನ್ನು ಏರ್‌ಟೆಲ್ ಹಣ ಖರ್ಚು ಮಾಡಿದೆ.

 ಈ ನಗರಗಳಲ್ಲಿ ಏರ್‌ಟೆಲ್ 5G ಸೇವೆ

ಈ ನಗರಗಳಲ್ಲಿ ಏರ್‌ಟೆಲ್ 5G ಸೇವೆ

ದೆಹಲಿ, ಗಾಂಧಿನಗರ, ಬೆಂಗಳೂರು, ಚಂಡೀಗಢ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಏರ್‌ಟೆಲ್ 5G ಸಂಪರ್ಕವನ್ನು ಒದಗಿಸುವ ಮೊದಲ ನಗರಗಳಾಗಿವೆ ಎಂದು ಇತ್ತೀಚಿನ ಮೂಲಗಳು ಹೇಳುತ್ತಿವೆ. ಇನ್ನು ಮೊದಲ ಹಂತದಲ್ಲಿಇದು ಮೊದಲ 13 ನಗರಗಳಲ್ಲಿ ಪದಾರ್ಪಣೆ ಮಾಡಲಿದೆ. ನಂತರ ಇದು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿ ಲಭ್ಯವಾಗಲಿದೆ.

 ಏರ್‌ಟೆಲ್ 5G ಬೆಲೆ ಎಷ್ಟು?

ಏರ್‌ಟೆಲ್ 5G ಬೆಲೆ ಎಷ್ಟು?

ಏರ್‌ಟೆಲ್ 5G ವೆಚ್ಚದ ಬಗ್ಗೆ ಈವರಿಗೂ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಲಾಗಿಲ್ಲ. ಆದರೆ ಏರ್‌ಟೆಲ್ 5G ಅದರ ವೆಚ್ಚವು 4Gನ್ನು ಮೀರಬಹುದು. ಭಾರತದಲ್ಲಿ ಅದರ ಯೋಜನೆಗಳ ವೆಚ್ಚವು 500 ರೂಪಾಯಿಗಳಿಂದ ಪ್ರಾರಂಭವಾಗಬಹುದು. ಏರ್‌ಟೆಲ್ 4G ಯೋಜನೆಗಳು ಸುಮಾರು 300 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತಿದೆ.

English summary
Airtel 5G service likely to launched in August: Know pricing, installation process check here More Details,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X