ಏರ್ ಏಷ್ಯಾದಿಂದ ಸಿಕ್ಕಾಪಟ್ಟೆ ಅಗ್ಗದ ವಿಮಾನ ಯಾನ ಕೊಡುಗೆ

Posted By:
Subscribe to Oneindia Kannada

ಒಮ್ಮೆ ವಿಮಾನದಲ್ಲಿ ಹೋಗಿಬರಬೇಕು ಅಥವಾ ವಿದೇಶಕ್ಕೆ ಹೋಗಿಬರಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರೆ ಏರ್ ಏಷ್ಯಾದವರ ಈ ಕೊಡುಗೆ ನಿಮಗೆ ಸಹಾಯವಾಗಬಹುದಾ ಎಂದು ಒಮ್ಮೆ ಗಮನಿಸಿ.

ದೇಶೀಯ ವಿಮಾನ ಪ್ರಯಾಣಕ್ಕೆ ಏರ್ ಏಷ್ಯಾದವರು ನಿಗದಿ ಮಾಡಿರುವ ಕನಿಷ್ಠ ಮೂಲಬೆಲೆ (ಬೇಸ್ ಪ್ರೈಸ್) 99 ರುಪಾಯಿ ಮಾತ್ರ. ಇನ್ನು ಅಂತರರಾಷ್ಟ್ರೀಯ ಯಾನವಾದರೆ ಕನಿಷ್ಠ ಮೂಲಬೆಲೆ 444 ಮಾತ್ರ.

ಇನ್ಮುಂದೆ ಕನ್ನಡದಲ್ಲೇ ವಿಮಾನ ಹಾರಾಟ ಮಾಹಿತಿ ಲಭ್ಯ!

ಇದರ ಜತೆಗೆ ಮೂಲಬೆಲೆ ಶೂನ್ಯ ದರಕ್ಕೂ ಅಂತರರಾಷ್ಟ್ರೀಯ ಪ್ರವಾಸ ಯೋಜನೆ ಹಾಕಿಕೊಳ್ಳಬಹುದು. ಕೋಲ್ಕತ್ತಾದಿಂದ ಜೊಹೊರ್ ಬಹ್ರುಗೆ ತೆರಳಲು ಈ ಯೋಜನೆ ಇದೆ. ಗ್ರಾಹಕರು ತಮ್ಮ ವಿಮಾನ ಪ್ರಯಾಣದ ತೆರಿಗೆಯನ್ನು ಪಾವತಿಸಿದರೆ ಸಾಕು.

Air Asia

ಹಾಗೆ ನೋಡಿದರೆ ಶೂನ್ಯ ಬೆಲೆ ಅನ್ನೋದಕ್ಕಿಂತ ವಿಮಾನ ಯಾನ ದರದಲ್ಲಿ ಫ್ಯುಯೆಲ್ ಸರ್ ಚಾರ್ಜ್, ವಿಮಾನ ನಿಲ್ದಾಣದ ಶುಲ್ಕ, ತೆರಿಗೆ ಮತ್ತಿತರ ಶುಲ್ಕ ಒಳಗೊಳ್ಳುತ್ತವೆ.

ಈಗ ಟಿಕೆಟ್ ಬುಕ್ ಮಾಡಿದರೆ ಮುಂದಿನ ವರ್ಷ ಪ್ರಯಾಣ ಮಾಡಬಹುದು. ಇದರಿಂದ ಮುಂದಿನ ವರ್ಷದ ರಜಾದಿನಕ್ಕೆ ಈಗಲೇ ಯೋಜನೆ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕಾಗಿ ಅಡ್ವಾನ್ಸ್ ಬುಕಿಂಗ್ ಮಾಡಬೇಕು.

ತೀರಾ ಬೇಡಿಕೆ ಇರುವ ಸಮಯದಲ್ಲಿ ಈ ಕೊಡುಗೆ ಸಿಗುವುದಿಲ್ಲ. ನವೆಂಬರ್ 13ರಿಂದ 19ರ ಮಧ್ಯೆ ಕಂಪನಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಮೊಬೈಲ್ ಅಪ್ಲಿಕೇಷನ್ ಮೂಲಕವೂ ಬುಕ್ ಮಾಡಬಹುದು.

ಏರ್ ಟಿಕೆಟ್ ಬುಕ್ಕಿಂಗಿಗೆ ಗುರುತಿನ ಚೀಟಿ ಕಡ್ಡಾಯ !

ಬೆಂಗಳೂರು, ಕೊಚ್ಚಿ, ಹೈದರಾಬಾದ್, ರಾಂಚಿ, ಭುವನೇಶ್ವರ್, ಕೋಲ್ಕತ್ತಾ, ದೆಹಲಿ, ಗೋವಾ ಮತ್ತಿತರ ನಗರಗಳಿಗೆ, ಎಲ್ಲೆಲ್ಲಿ ಏರ್ ಏಷ್ಯಾ ಕಾರ್ಯ ನಿರ್ವಹಿಸುತ್ತದೋ ಆ ಸ್ಥಳಗಳಿಗೆ ಅನ್ವಯ ಆಗುತ್ತದೆ.

ಇನ್ನು ಅದೇ ರೀತಿ ಕೌಲಾಲಂಪುರ್ ಗೆ ತಿರುಚಿ, ಕೊಚ್ಚಿ, ದೆಹಲಿ, ಭುವನೇಶ್ವರ್, ಜೈಪುರ್ ಮತ್ತು ಬಾಲಿಗೆ ಮುಂಬೈ ಮತ್ತು ಕೋಲ್ಕತ್ತಾ, ಬ್ಯಾಂಕಾಕ್ ಗೆ ಜೈಪುರ್, ಕೋಲ್ಕತ್ತಾ, ಕೊಚ್ಚಿ, ಚೆನ್ನೈ ಮತ್ತು ಬೆಂಗಳೂರಿನಿಂದ ಹೊರಡುವ ವಿಮಾನಗಳಿಗೆ ಈ ಕೊಡುಗೆಗಳು ಅನ್ವಯ ಆಗುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air Asia has announced a sale, and believe it or not, the company is offering tickets priced at as low as Rs 99 for base fare in domestic sector and an unbelievable Rs 444 for international flights.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ