Gold Rate: ಚಿನ್ನದ ಬೆಲೆ ಕುಸಿತದ ಬಳಿಕ ಬೆಳ್ಳಿ ಬೆಲೆ ಕೂಡ ₹2000 ಕುಸಿತ
ಜೂನ್ ತಿಂಗಳ ಮೊದಲ ದಿನವೇ ಚಿನ್ನ, ಬೆಳ್ಳಿ ದರದಲ್ಲಿ ಕುಸಿತ ಕಂಡಿರುವುದು ಆಭರಣ ಪ್ರಿಯರ ಖುಷಿಗೆ ಕಾರಣವಾಗಿದೆ. ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಏರಿಳಿಕೆ ಕಾಣುತ್ತದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಹೆಚ್ಚುವ ಮೂಲಕ ದುಬಾರಿಯಾಗಿತ್ತು. 70 ಸಾವಿರ ದಾಟಿದ್ದ ಚಿನ್ನದ ಬೆಲೆ ಇನ್ನೇನು 10 ಗ್ರಾಂಗೆ 1 ಲಕ್ಷ ಮುಟ್ಟುತ್ತದೆ ಎನ್ನುವಾಗಲೇ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,670 ರಿಂದ ₹6,650ಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ₹2000 ಕುಸಿತ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ ₹ 7,276 ಗಳಿಂದ ₹7,255 ರೂಗಳಿಗೆ ಅಂದರೆ ಪ್ರತಿ ಗ್ರಾಂಗೆ ₹21 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ದರ ಕೂಡ ಕುಸಿತ
ಚಿನ್ನದ ಬೆಲೆ ಕಡಿಮೆಯಾದ ಬೆನ್ನಲ್ಲೇ ಬೆಳ್ಳಿ ಧಾರಣೆ ಕೂಡ ಕುಸಿತ ಕಂಡಿದೆ. ₹95,500 ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ₹93,500 ಕ್ಕೆ ಕುಸಿತ ಕಂಡಿತು. ಒಂದು ಕೆಜಿ ಬೆಳ್ಳಿ ಬೆಲೆ ಒಂದೇ ದಿನದಲ್ಲಿ ₹2000 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಸದ್ಯ ಬೆಳ್ಳಿಯ ದರ ಕೆ.ಜಿ. ಗೆ ₹95,500 ಇದ್ದರೂ, ಚೆನ್ನೈನಲ್ಲಿ ಮಾತ್ರ ₹98,000 ಇದೆ. ದೇಶದ ಹಲವು ನಗರಗಳಲ್ಲಿ ಬೆಳ್ಳಿ ಬೆಲೆ ಕೆ.ಜಿ ಗೆ ₹98,000 ಬೆಂಗಳೂರಿನಲ್ಲಿ ಮಾತ್ರ 93,500 ರೂಪಾಯಿ ಆಗಿತ್ತು.












Click it and Unblock the Notifications