• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಬಲಗೊಳ್ಳಲಿವೆ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್‌: ಇಲ್ಲಿದೆ ಕಾರಣ

ಗಂಭೀರ ಆರೋಪ ಎದುರಿಸುತ್ತಿರುವ ಅದಾನಿ ಗ್ರೂಪ್ ಷೇರುಗಳು ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೇ ವಾತಾವರಣ ಮುಂದುವರಿದರೆ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ ದುರ್ಬಲವಾಗಲಿದೆ. ಈ ಕುರಿತು ತಜ್ಞರು ಏನು ಹೇಳಿದ್ದಾರೆ ಎಂಬುದನ್ನು ಓದಿ.
|
Google Oneindia Kannada News

ಮುಂಬೈ, ಜನವರಿ 25: ಗಂಭೀರ ಆರೋಪ ಎದುರಿಸುತ್ತಿರುವ ಅದಾನಿ ಗ್ರೂಪ್ ಷೇರುಗಳು ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೇ ವಾತಾವರಣ ಮುಂದುವರಿದರೆ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ ದುರ್ಬಲವಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಅದಾನಿ ಗ್ರೂಪ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಮತ್ತು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನಿಂದ ನಿಯಂತ್ರಿಸಲ್ಪಡುವ ಹೆಚ್ಚು-ಲಿಕ್ವಿಡ್ ಸ್ಟಾಕ್‌ಗಳು ಸಂಘಟಿತ ಷೇರುಗಳಲ್ಲಿ ಭಾರೀ ನಷ್ಟ ಅನುಭವಿಸಿವೆ. ಇವುಗಳು ವಿಸ್ತೃತ ಮಾರಾಟದ ಸಂದರ್ಭದಲ್ಲಿ ಹೆಚ್ಚು ದುರ್ಬಲಗೊಳ್ಳಲಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ವಿಶ್ಲೇಷಕ ನಿತಿನ್ ಚಂದುಕಾ ಅವರ ಅಭಿಪ್ರಾಯವಾಗಿದೆ ಎಂದು 'ದಿ ಮಿಂಟ್‌' ವರದಿ ಮಾಡಿದೆ.

ಅದಾನಿ ಗ್ರೂಪ್‌ ವಿರುದ್ಧ ಭಾರೀ ವಂಚನೆ ಆರೋಪ: ₹ 46,000 ಕೋಟಿ ಷೇರು ನಷ್ಟ- ಮಾಹಿತಿ, ವರದಿ, ವಿವರ ಇಲ್ಲಿದೆ ಅದಾನಿ ಗ್ರೂಪ್‌ ವಿರುದ್ಧ ಭಾರೀ ವಂಚನೆ ಆರೋಪ: ₹ 46,000 ಕೋಟಿ ಷೇರು ನಷ್ಟ- ಮಾಹಿತಿ, ವರದಿ, ವಿವರ ಇಲ್ಲಿದೆ

'ಈಗ ಅದಾನಿ ಗ್ರೂಪ್‌ನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅದಾನಿ ಅವರ ಪೋರ್ಟ್‌ಗಳಿಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಷೇರುಗಳನ್ನು ಖರೀದಿ ಮಾಡಲು ಯಾರೂ ಮುಂದಾಗುತ್ತಿಲ್ಲ. ಸಾರ್ವಜನಿಕರು ಅದಾನಿ ಗ್ರೂಪ್‌ನ ಷೇರುಗಳನ್ನು ಖರೀದಿಸಲು ಮುಂದು ಬರುವುದಿಲ್ಲ. ಇದರ ಪರಿಣಾಮ ಪೋರ್ಟ್‌ಗಳ ಮೇಲೆ ಬೀಳುತ್ತದೆ. ಪೋರ್ಟ್‌ಗಳು ದುರ್ಬಲಗೊಳ್ಳಲಿವೆ' ಎಂದು ಚಂದುಕಾ ಹೇಳಿದ್ದಾರೆ.

ವಿದ್ಯುತ್‌, ಮೂಲಸೌಕರ್ಯ ಮತ್ತು ಮಾಧ್ಯಮಗಳಲ್ಲಿ ಗುಜರಾತ್‌ ಮೂಲದ ಅದಾನಿ ಗ್ರೂಪ್‌ ಹೂಡಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದ 10 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಯುಎಸ್ ಹೂಡಿಕೆದಾರ ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿಯು ಅದಾನಿ ಗ್ರೂಪ್‌ನ ವಿರುದ್ಧ ಗಂಭೀರ ಆರೋಪ ಮಾಡಿದೆ. ಆ ನಂತರ ಅದಾನಿ ಗ್ರೂಪ್‌ ಭಾರೀ ನಷ್ಟದತ್ತ ಸಾಗುತ್ತಿದೆ ಎಂದು ವರದಿ ಆಗಿದೆ.

ಹೋಲ್ಸಿಮ್ ಲಿಮಿಟೆಡ್‌ನಿಂದ ಕಳೆದ ವರ್ಷ ಅದಾನಿ ಖರೀದಿಸಿದ ಅಂಬುಜಾ ಸಿಮೆಂಟ್ಸ್, ಶೇ 9.7ಕ್ಕೂ ಹೆಚ್ಚು ಕುಸಿದಿದೆ. ಅದಾನಿ ಪೋರ್ಟ್ಸ್ ಮತ್ತು ಎಸಿಸಿ ಲಿಮಿಟೆಡ್ ಎರಡೂ ಶೇ 7.3ರಷ್ಟು ಕಳೆದುಕೊಂಡಿವೆ. ಅದಾನಿ ಗ್ರೂಪ್ ಎಂಎಸ್‌ಸಿಐ ಇಂಡಿಯಾ ಇಂಡೆಕ್ಸ್‌ನಲ್ಲಿ ಎಂಟು ಷೇರುಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ಭಾರತದ ಪ್ರಮುಖ ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್‌ನ ಭಾಗವಾಗಿದೆ.

ಹಿಂಡೆನ್‌ಬರ್ಗ್ ವರದಿ ಏನು?

'ನಮ್ಮ ತನಿಖೆಯ ಸಂಶೋಧನೆಗಳನ್ನು ನೀವು ನಿರ್ಲಕ್ಷಿಸಿದರೂ ಸಹ, ಅದರ 7 ಪ್ರಮುಖ ಪಟ್ಟಿ ಮಾಡಿದ ಕಂಪನಿಗಳು ಶೇ 85 ನಷ್ಟವನ್ನು ಹೊಂದಿವೆ. ಪಟ್ಟಿಯಲ್ಲಿರುವ ಪ್ರಮುಖ ಅದಾನಿ ಕಂಪನಿಗಳು ತಮ್ಮ ಸ್ಟಾಕ್‌ನ ಷೇರುಗಳನ್ನು ಸಾಲಕ್ಕಾಗಿ ವಾಗ್ದಾನ ಮಾಡುವುದು ಸೇರಿದಂತೆ ಗಣನೀಯ ಸಾಲವನ್ನು ತೆಗೆದುಕೊಂಡಿವೆ. ಅದು ಭಾರೀ ಅವಘಡಕ್ಕೆ ಕಾರಣವಾಗಲಿವೆ. ಇಡೀ ಗುಂಪನ್ನು ಅನಿಶ್ಚಿತ ಆರ್ಥಿಕ ತಳಹದಿಯ ಮೇಲೆ ನಿಲ್ಲಿಸಿವೆ' ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ.

ಈ ಪರಿಸ್ಥಿತಿ ಹೀಗೇ ಮುಂದುವರಿದರೆ, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೌತಮ್‌ ಅದಾನಿ ಭಾರೀ ಆಸ್ತಿ ಮೌಲ್ಯದಲ್ಲಿ ಭಾರೀ ಕುಸಿತ ಕಾಣಲಿದ್ದಾರೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary
Facing allegations, Adani Group shares are losing thousands of crores of rupees. Analysts opined that if this continues, Adani Ports, Ambuja Cement will weaken
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X