2025ನೇ ಸಾಲಿನಲ್ಲಿ ಅದಾನಿ ಗ್ರೂಪ್‌ನಿಂದ ₹74,945 ಕೋಟಿ ತೆರಿಗೆ ಪಾವತಿ
ಅಹಮದಾಬಾದ್, ಜೂನ್ 05: 2025 ನೇ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್‌ನ ಒಟ್ಟು ತೆರಿಗೆ ಕೊಡುಗೆಯು ಶೇ 29 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಅದಾನಿ ಗ್ರೂಪ್‌ನಿಂದ ಒಟ್ಟು ₹74,945 ಕೋಟಿ ತೆರಿಗೆ ಪಾವತಿ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಅದಾನಿ ಗ್ರೂಪ್ ಅಡಿಯಲ್ಲಿ ಬರುವ ಸಂಸ್ಥೆಗಳಿಂದ 2023-24ನೇ ವರ್ಷದಲ್ಲಿ ಒಟ್ಟು ₹58,104 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಲಾಗಿತ್ತು.
ಅದಾನಿ ಗ್ರೂಪ್‌ನಿಂದ ಪಾವತಿ ಮಾಡಲಾಗಿರುವ ತೆರಿಗೆಯು ಒಟ್ಟು ₹74,945 ಕೋಟಿಯಾಗಿದೆ. ಇದರಲ್ಲಿ ನೇರವಾಗಿ ₹28,720 ಕೋಟಿ ತೆರಿಗೆ ಪಾವತಿಯಾಗಿದೆ. ಪರೋಕ್ಷ ತೆರಿಗೆಯು ₹45,407 ಕೋಟಿಯಾಗಿದೆ. ಇತರೆ ತೆರಿಗೆ ಮೊತ್ತವು ₹818 ಕೋಟಿ ರೂಪಾಯಿ ಆಗಿದೆ.

ಇಷ್ಟು ಮೊತ್ತದ ತೆರಿಗೆ ಪಾವತಿಯನ್ನು ಹೋಲಿಕೆ ಮಾಡುವುದಾದರೆ, ₹74,945 ಕೋಟಿ ಮುಂಬೈ ಮೆಟ್ರೋ ಜಾಲವನ್ನು ನಿರ್ಮಿಸಲು ಬೇಕಾಗುವ ವೆಚ್ಚಕ್ಕೆ ಸಮಾನವಾಗಿದೆ. ಇದು ಲಕ್ಷಾಂತರ ಜನರಿಗೆ ಮೂಲಸೌಕರ್ಯ ಕಲ್ಪಿಸುವ ಮೊತ್ತವಾಗಿದೆ. ಒಲಿಂಪಿಕ್ಸ್ ಆಯೋಜಿಸಲು ತಗಲುವಷ್ಟು ಮೊತ್ತಕ್ಕೆ ಸರಿಸಾಟಿಯಾಗಿದೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL), ಅದಾನಿ ಸಿಮೆಂಟ್ ಲಿಮಿಟೆಡ್ (ACL), ಅದಾನಿ ಪೋರ್ಟ್‌ಗಳು ಮತ್ತು ವಿಶೇಷ ಆರ್ಥಿಕ ವಲಯ (APSEZ) ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಸೇರಿದಂತೆ ಪಟ್ಟಿ ಮಾಡಲಾದ ಸಂಸ್ಥೆಗಳಿಂದ ಈ ತೆರಿಗೆ ಪಾವತಿಯಾಗಿದೆ.
ಈ ವಿವರಗಳನ್ನು ಅದಾನಿ ಗ್ರೂಪ್‌ನ ಸಂಸ್ಥೆಗಳ ಸ್ವತಂತ್ರ ವಾರ್ಷಿಕ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಅದಾನಿ ಪೋರ್ಟ್‌ಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಎನರ್ಜಿ ಸೊಲ್ಯೂಶನ್ಸ್ ಲಿಮಿಟೆಡ್, ಅದಾನಿ ಪವರ್ ಲಿಮಿಟೆಡ್, ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಮತ್ತು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಸೇರಿವೆ.
ಈ ಮೊತ್ತದಲ್ಲಿ ಮೂರು ಪ್ರಮುಖ ಕಂಪನಿಗಳ ತೆರಿಗೆಯೂ ಸೇರಿದೆ. ಎನ್‌ಡಿಟಿವಿ, ಎಸಿಸಿ ಮತ್ತು ಸಂಘಿ ಇಂಡಸ್ಟ್ರೀಸ್ ಸೇರಿವೆ.
ಅದಾನಿ ಗ್ರೂಪ್ ತನ್ನ ಏಳು ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ 'ತಯಾರಿಕೆ ಮತ್ತು ತೆರಿಗೆ ದೃಷ್ಠಿಕೋನ' ಎಂಬ ದಾಖಲೆಗಳನ್ನು ಪ್ರಕಟಿಸಿದೆ. ಇದು ಅದಾನಿ ಗ್ರೂಪ್‌ನ ಜಾಗತಿಕ ತೆರಿಗೆ ಮತ್ತು ಇತರೆ ಕೊಡುಗೆಗಳ ಸಂಪೂರ್ಣ ವಿವರವನ್ನು ನೀಡುತ್ತದೆ.
ನೇರ ತೆರಿಗೆ ಪಾವತಿ: ಜಾಗತಿಕ ತೆರಿಗೆ, ಶುಲ್ಕ ಮತ್ತು ಅದಾನಿ ಕಂಪನಿಗಳ ಪಾವತಿಸುತ್ತಿರುವ ಇತರೆ ಶುಲ್ಕಗಳು
ಪರೋಕ್ಷ ತೆರಿಗೆ ಪಾವತಿ: ಇತರ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಂಗ್ರಹಿಸಿ ಪಾವತಿಸಿದ ಜಾಗತಿಕ ತೆರಿಗೆ ಮತ್ತು ಶುಲ್ಕ
ಇತರೆ ತೆರಿಗೆ ಪಾವತಿ: ನೌಕರರ ಹಿತಾಸಕ್ತಿ ಹಾಗೂ ಸಾಮಾಜಿಕ ಭದ್ರತೆಗಾಗಿ ಪಾವತಿಸಿದ ತೆರಿಗೆ
ತೆರಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅದಾನಿ ಗ್ರೂಪ್ ಹಲವು ವಿಶೇಷ ಕ್ರಮಗಳನ್ನು ಅನುಸರಿಸುತ್ತಿದೆ. ಈ ಉಪಕ್ರಮದ ಮೂಲಕ ಗ್ರೂಪ್ ಪಾರದರ್ಶಕತೆ, ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ವಿಶ್ವಾಸ ಮೂಡಿಸಲು ಜಾಗತಿಕ ತೆರಿಗೆ ಪಾವತಿಯಲ್ಲಿ ಹೆಚ್ಚು ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿದೆ.
ಆರ್ಥಿಕ ಬೆಳವಣಿಗೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಅದಾನಿ ಗ್ರೂಪ್ ಪ್ರದರ್ಶಿಸುತ್ತಿದೆ. ಭಾರತದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು, ನವೀನತೆಯನ್ನು ಉತ್ತೇಜಿಸಲು ಹಾಗೂ ಅಭಿವೃದ್ಧಿಯ ದೀರ್ಘಕಾಲಿಕ ದೃಷ್ಟಿಕೋನವನ್ನು ಇದು ಒಳಗೊಂಡಿದೆ.
ತೆರಿಗೆ ಪಾರದರ್ಶಕ ವರದಿ (TTR) ಬಗ್ಗೆ: ಜಾಗತಿಕ ತೆರಿಗೆಯು ಹೊಸ ಹಂತವನ್ನು ಪ್ರವೇಶಿಸುತ್ತಿರುವಾಗ, ಪ್ರಮುಖ ಕಂಪನಿಗಳು ಸ್ವಯಂ ಪ್ರೇರಿತವಾಗಿ ತೆರಿಗೆ ಪಾರದರ್ಶಕವಾದ ವರದಿಯನ್ನು ಪ್ರಕಟಿಸುತ್ತಿವೆ. ಇದು ಕಡ್ಡಾಯವಲ್ಲ. ಆದರೆ, ಈ ವರದಿಯ ಮೂಲಕ, ಇಂತಹ ಕಂಪನಿಗಳು ಹಿತಾಸಕ್ತಿಗಳ ಗಮನವನ್ನು ಹೆಚ್ಚಿಸಲು ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಜೊತೆಗೆ ತೆರಿಗೆ ಪಾರದರ್ಶಕತೆಯ ಅತ್ಯುನ್ನತ ಮಾನದಂಡಗಳ ಆಧಾರವನ್ನು ಸೃಷ್ಟಿಸುತ್ತವೆ.
ಅದಾನಿ ಗ್ರೂಪ್ ತನ್ನ ಜಾಗತಿಕ ತೆರಿಗೆಗಳ ಮೇಲೆ ಸ್ವತಂತ್ರ ಭರವಸೆ ವರದಿಯನ್ನು ಒದಗಿಸಲು ವೃತ್ತಿಪರ ಸಂಸ್ಥೆಯನ್ನು ನೇಮಿಸಿದೆ. ಈ ಮಾಹಿತಿಯನ್ನು ವಾರ್ಷಿಕ ವರದಿಯ ತೆರಿಗೆ ಪಾರದರ್ಶಕ ವಿಭಾಗದಲ್ಲಿ ಸೇರಿಸಲಾಗಿದೆ. ಜಾಗತಿಕವಾಗಿ ಗ್ರೂಪ್ ಕಂಪನಿಗಳು ಪಾವತಿಸಿದ ವಿವಿಧ ತೆರಿಗೆಗಳು ಮತ್ತು ಇತರೆ ಕೊಡುಗೆಗಳ ವಿವರಗಳನ್ನು ನೀಡುತ್ತದೆ. ಜೊತೆಗೆ ಗ್ರೂಪ್‌ನ ತೆರಿಗೆ ದೃಷ್ಠಿಕೋನವನ್ನು ವಿವರಿಸುತ್ತದೆ.
ಅದಾನಿ ಗ್ರೂಪ್ ಹೊಂದಿರುವ ಕಂಪನಿಗಳ ಬಗ್ಗೆ
ಅದಾನಿ ಗ್ರೂಪ್ ಭಾರತದಲ್ಲಿನ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಿನ್ನ ವ್ಯವಹಾರಗಳ ಗ್ರೂಪ್ ಆಗಿದೆ. ಇನ್ನು ಈ ಗ್ರೂಪ್‌ನ ಕೇಂದ್ರ ಕಚೇರಿ ಅಹಮದಾಬಾದ್‌ನಲ್ಲಿದೆ. ಇಂಧನ ಮತ್ತು ಉಪಯುಕ್ತತೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ (ಸಮುದ್ರ ಬಂದರು, ವಿಮಾನ ನಿಲ್ದಾಣ, ಸಾಗಣೆ ಮತ್ತು ರೈಲು), ಲೋಹದ ವಸ್ತುಗಳು ಮತ್ತು ಗ್ರಾಹಕ ವಲಯಗಳಲ್ಲಿ ಆಸಕ್ತಿ ಹೊಂದಿರುವ ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ಅಗ್ರಪಂಕ್ತಿಯಲ್ಲಿದೆ.
ಗ್ರೂಪ್‌ನ ಯಶಸ್ಸು 'ರಾಷ್ಟ್ರ ನಿರ್ಮಾಣ' ಮತ್ತು 'ಸದ್ಗುಣದೊಂದಿಗೆ ಬೆಳವಣಿಗೆ' ಎಂಬ ಮೂಲ ತತ್ವಗಳಿಂದ ಪ್ರೇರಿತವಾಗಿದೆ. ಇದು ಸುಸ್ಥಿರ ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ. ಅದಾನಿ ಗ್ರೂಪ್ ಪರಿಸರ ಸಂರಕ್ಷಣೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಇದು ಸುಸ್ಥಿರತೆ, ವೈವಿಧ್ಯತೆ ಸೇರಿದಂತೆ ವಿವಿಧ ಮೌಲ್ಯಗಳ ಮೇಲೆ ಆಧಾರಿತವಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications