ವಿಪ್ರೋ ಹೊಸ ಸಿಇಒ ಆಗಿ ಅಬಿದ್ ನೀಮುಚ್ವಾಲ ನೇಮಕ

Posted By:
Subscribe to Oneindia Kannada

ನವದೆಹಲಿ, ಜ. 04: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ಸಿಒಒ ಆಗಿದ್ದ ಅಬಿದ್ ಅಲಿ ನೀಮುಚ್ವಾಲ ಅವರನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ ಎಂದು ವಿಪ್ರೋ ಲಿಮಿಟೆಡ್ ಸೋಮವಾರ ಪ್ರಕಟಿಸಿದೆ.

2015ರ ಮಾರ್ಚ್ ತಿಂಗಳಿನಲ್ಲಿ ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಹಿರಿಯ ಉದ್ಯೋಗಿ ಅಬಿದ್ ಅಲಿ ಅವರನ್ನು ವಿಪ್ರೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಬಿದ್ ಅಲಿ ನೀಮುಚ್ವಾಲ ಅವರು ಈಗ ವಿಪ್ರೋ ಸಿಒಒ, ಗ್ರೂಪ್ ನಿರ್ದೇಶಕರಾಗಿ ನೇಮಕಗೊಂಡು ಏಪ್ರಿಲ್ 1 ರಂದು ಅಧಿಕಾರ ಸ್ವೀಕರಿಸಿದ್ದರು. ಈಗ ಟಿಕೆ ಕುರಿಯನ್ ಬದಲಿಗೆ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಟಿಕೆ ಕುರಿಯನ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೇರಿಸಲಾಗಿದ್ದು, ಸಂಸ್ಥೆಯ ಚೇರ್ಮನ್ ಅಜೀಂ ಪ್ರೇಮ್ ಜಿ ಅವರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಈ ಎರಡು ನೇಮಕಾತಿಗಳಿ ಫೆಬ್ರವರಿ 1, 2015ರಿಂದ ಜಾರಿಗೆ ಬರಲಿವೆ. ಮಾರ್ಚ್ 31, 2017 ಬೋರ್ಡ್ ಸದಸ್ಯರಾಗಿ ಕುರಿಯನ್ ಮುಂದುವರೆಯಲಿದ್ದಾರೆ.

Abid Ali Neemuchwal

ಸೆಪ್ಟೆಂಬರ್ 2009ರಿಂದ ವಿಪ್ರೋ ಸಂಸ್ಥೆಯಲ್ಲಿ ಸಿಒಒ ಸ್ಥಾನ ಖಾಲಿ ಇತ್ತು. ಎಎಲ್ ರಾವ್ ಅವರು ಜೂನ್ 2005 ರಿಂದ ಸೆಪ್ಟೆಂಬರ್ 2008ರ ತನಕ ವಿಪ್ರೋ ಸಿಒಒ ಆಗಿದ್ದರು.[ಈ ದಿನದ ಷೇರುಗಳ ಏರಿಳಿತ ಸಂಪೂರ್ಣ ಮಾಹಿತಿ ಇಲ್ಲಿದೆ]

ವಿಪ್ರೋ ಸಂಸ್ಥೆ ಜಾಗತಿಕ ಮೂಲ ಸೌಕರ್ಯ ಸೇವೆ, ವ್ಯವಹಾರಿಕ ಅನ್ವಯ ಸೇವೆ, ಉನ್ನತ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಕಾರ್ಯ ನಿರ್ವಹಣೆ ಹೊಣೆ ಅಬಿದ್ ಅಲಿ ಅವರ ಮೇಲಿರುತ್ತದೆ. ಒಟ್ಟಾರೆ ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಕೇಂದ್ರಗಳ ಏಳಿಗೆ ಈಗ ಅಬಿದ್ ಕೈಲಿದೆ. ಟಿಸಿಎಸ್ ನಲ್ಲಿ ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅಬಿದ್ ಅವರು ಟಿಸಿಎಸ್ ನ ಬಿಪಿಒ ವಿಭಾಗದ ಪ್ರಗತಿಗೆ ಕಾರಣರಾಗಿದ್ದರು.

ಎನ್ ಐಟಿ ರಾಯ್ ಪುರ್ ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರ್ ಪದವಿ ಪಡೆದಿರುವ ನಿಮೂಚ್ವಾಲ ಅವರು ಐಐಟಿ ಮುಂಬೈನಿಂದ ಇಂಡಸ್ಟ್ರೀಯಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪಡೆದುಕೊಂಡಿದ್ದಾರೆ

ಈ ಎರಡು ನೇಮಕಾತಿ ಸುದ್ದಿಯ ಬಳಿಕ ಬಿಎಸ್ ಇನಲ್ಲಿ ವಿಪ್ರೋ ಷೇರುಗಳು ಶೇ 0.28ರಷ್ಟು ಏರಿಕೆ ಕಂಡು 557.95 ರು ನಂತೆ ಪ್ರಗತಿ ಕಂಡಿದೆ. ಎನ್ ಎಸ್ ಇನಲ್ಲಿ ಶೇ 0.22ರಷ್ಟು ಏರಿಕೆ ಕಂಡು 557.70 ರು ನಂತೆ ವಹಿವಾಟು ಮುಗಿಸಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's third largest software export company Wipro Ltd on Monday(Jan.04) appointed Abid Ali Neemuchwala as CEO and member of Board. TK Kurien is elevated as executive VC and will report directly to chairman Azim Premji.
Please Wait while comments are loading...