ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ ನಲ್ಲಿ ಎಂಟು ಮುಖ್ಯ ಕೈಗಾರಿಕೆಗಳು 0.5 ಪರ್ಸೆಂಟ್ ಇಳಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಆಗಸ್ಟ್ ತಿಂಗಳಲ್ಲಿ ಎಂಟು ಮುಖ್ಯ ಕೈಗಾರಿಕೆಗಳು 0.5 ಪರ್ಸೆಂಟ್ ಇಳಿಕೆ ದಾಖಲಿಸಿವೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಕುಸಿತ ಆಗಿರುವ ಪರಿಣಾಮವಾಗಿ ಹೀಗಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಗಳಿಂದ ತಿಳಿದುಬಂದಿದೆ.

ಈ ಎಂಟು ಪ್ರಮುಖ ಕೈಗಾರಿಕೆ ಸೂಚ್ಯಂಕಗಳು ಎಲ್ಲವೂ ಸೇರಿ ಕಳೆದ ತಿಂಗಳು 128.2 ಇತ್ತು. ಆ ಎಂಟು ಕೈಗಾರಿಕೆಗಳು ಅಂದರೆ- ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರೀಫೈನರಿ ಉತ್ಪನ್ನಗಳು, ಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ. ಕಳೆದ ವರ್ಷದ ಅಗಸ್ಟ್ ನಲ್ಲಿ ಇವು 4.7 ಪರ್ಸೆಂಟ್ ವಿಸ್ತರಣೆ ಆಗಿದ್ದವು.

ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!

ಆಗಸ್ಟ್ ನಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್, ವಿದ್ಯುಚ್ಛಕ್ತಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದ ಪ್ರಮಾಣ ಕ್ರಮವಾಗಿ 8.6 ಪರ್ಸೆಂಟ್, 5.4 ಪರ್ಸೆಂಟ್, 3.9 ಪರ್ಸೆಂಟ್, 4.9 ಪರ್ಸೆಂಟ್, 2.9 ಪರ್ಸೆಂಟ್ ಇತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ಇದೆ.

8 Core Sector Industry Down By 0.5 Percent In August

ಆದರೆ, ಉಕ್ಕು ಮತ್ತು ಗೊಬ್ಬರವು ಐದು ಹಾಗೂ 2.9 ಪರ್ಸೆಂಟ್ ಬೆಳವಣಿಗೆ ಕಂಡಿವೆ. ಕಳೆದ ವರ್ಷದ ಏಪ್ರಿಲ್ ನಿಂದ ಆಗಸೃ ಮಧ್ಯೆ ಈ ಎಂಟು ಮುಖ್ಯ ಕೈಗಾರಿಕೆಗಳು 2.4 ಪರ್ಸೆಂಟ್ ನಿಂದ 5.7 ಪರ್ಸೆಂಟ್ ಗೆ ಬೆಳವಣಿಗೆ ಕಂಡಿದ್ದವು.

ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ)ನಲ್ಲಿ ಈ ಎಂಟು ಮುಖ್ಯ ಕೈಗಾರಿಕೆಗಳ ಪಾಲು 40.27 ಪರ್ಸೆಂಟ್ ಇದೆ.

English summary
including Coal, natural gas 8 core sectors down by 0.5 percent in August. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X