ಐಟಿ, ಬಿಪಿಒ ಉದ್ಯೋಗಿಗಳಿಗೆ ಸಂಕಷ್ಟ ಪರ್ವ, ಲಕ್ಷಾಂತರ ಕೆಲಸಕ್ಕೆ ಕುತ್ತು

ನವದೆಹಲಿ, ಸೆಪ್ಟೆಂಬರ್ 8: ಆಟೋಮೆಷನ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಕಾರಣಕ್ಕೆ 2022ರ ಹೊತ್ತಿಗೆ ಕಡಿಮೆ ಕೌಶಲ್ಯ ಇರುವ ಏಳು ಲಕ್ಷ ಮಂದಿ ಭಾರತದಲ್ಲಿ ಐಟಿ ಹಾಗೂ ಬಿಪಿಒ ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ ಎಂದು ಅಮೆರಿಕ ಮೂಲದ ಸಂಸ್ಥೆಯೊಂದು ಹೇಳಿದೆ.

ಆದರೆ, ಇದು ಎಲ್ಲರಿಗೂ ಕೆಟ್ಟ ಸುದ್ದಿಯೇನಲ್ಲ. ಆ ಸಂಸ್ಥೆಯ ವರದಿ ಪ್ರಕಾರ, ಮಧ್ಯಮ ಹಾಗೂ ಉನ್ನತ ಕೌಶಲ್ಯ ಅಗತ್ಯ ಇರುವ ಉದ್ಯೋಗಗಳ ಪ್ರಮಾಣವು ಹೆಚ್ಚಾಗಲಿದೆ. ಆಟೋಮೆಷನ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಳವಡಿಸಿಕೊಳ್ಳುತ್ತಿರುವುದರಿಂದ 2016ರಲ್ಲಿ ಐಟಿ ಹಾಗೂ ಬಿಪಿಒ ವಲಯದಲ್ಲಿದ್ದ 24 ಲಕ್ಷ ಉದ್ಯೋಗಗಳು 2022ರ ಹೊತ್ತಿಗೆ 17 ಲಕ್ಷಕ್ಕೆ ಕುಸಿಯಬಹುದು.

7 Lakh IT Jobs In India Under Threat

ಇನ್ನು ಮಧ್ಯಮ ಪ್ರಮಾಣದ ಕೌಶಲ್ಯ ನಿರೀಕ್ಷಿಸುವ ಐಟಿ ಹಾಗೂ ಬಿಪಿಒ ಉದ್ಯೋಗಗಳು ಇದೇ ಅವಧಿಯಲ್ಲಿ ಒಂದು ಲಕ್ಷದಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಇನ್ನು ಉನ್ನತ ಮಟ್ಟದ ಕೌಶಲ್ಯ ನಿರೀಕ್ಷಿಸುವ ಉದ್ಯೋಗಗಳು 3,20,000ದಿಂದ 5,10,000 ವರೆಗೆ ಹೆಚ್ಚಲಿದೆಯಂತೆ.

ಮುಂದಿನ ಐದು ವರ್ಷಗಳ ಕಾಲ ಇವೆಲ್ಲವನ್ನೂ ಹೇಗೋ ಸಂಭಾಳಿಸಬಹುದು. ಆದರೆ ಆ ನಂತರ ಉದ್ಯೋಗಿಗಳ ಮೇಲೆ ಆಗುವ ಪರಿಣಾಮವನ್ನು ಎದುರಿಸುವುದು ಸವಾಲಿನ ಸಂಗತಿ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+