ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ Cheap And Best 5ಜಿ ಸೇವೆ ಯಾವಾಗ ಶುರು!?

|
Google Oneindia Kannada News

ನವದೆಹಲಿ, ಆಗಸ್ಟ್ 25: ಭಾರತದಲ್ಲಿ 5ಜಿ ಸೇವೆಗಳು ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಉತ್ತರ ಕೊಟ್ಟಿದ್ದಾರೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ದೇಶದ ಬಹುತೇಕ ಭಾಗದಲ್ಲಿ ಹೈ-ಸ್ಪೀಡ್ 5G ಸೇವೆಗಳು ಕೈಗೆಟುಕುವ ದರದಲ್ಲಿ ಸಿಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಟೆಲಿಕಾಂ ಮೂಲಸೌಕರ್ಯವನ್ನು ತ್ವರಿತ ಗತಿಯಲ್ಲಿ ಹೊರತರುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 5G ರೈಟ್ ಆಫ್ ವೇ ಅಪ್ಲಿಕೇಶನ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಮೊಬೈಲ್ ಸೇವೆಗಳು ವಿಶ್ವದಲ್ಲೇ ಅತ್ಯಂತ ಕೈಗೆಟುಕುವ ಸೇವೆಗಳಲ್ಲಿ ಒಂದಾಗಿದೆ. ಟೆಲಿಕಾಂ ಕಂಪನಿಗಳು ಮೂಲಸೌಕರ್ಯಗಳನ್ನು ಕೊಡುವಲ್ಲಿ ನಿರತವಾಗಿವೆ. 5G ಸೇವೆಗಳನ್ನು ಅಕ್ಟೋಬರ್‌ನೊಳಗೆ ಪ್ರಾರಂಭಿಸಬೇಕು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿವೆ ಎಂದು ಹೇಳಿದರು.

5G ಸೇವೆಗಳ ಟೆಲಿಕಾಂ ಉದ್ಯಮಕ್ಕೆ ಸುಮಾರು 2.5 ಲಕ್ಷ ಕೋಟಿ ರೂಪಾಯಿಯಿಂದ 3 ಲಕ್ಷ ಕೋಟಿ ರೂಪಾಯಿ ವರೆಗೂ ಹೂಡಿಕೆ ಬರಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ. ನಮ್ಮ ಅಂದಾಜಿನ ಪ್ರಕಾರ ಮುಂದಿನ 2-3 ವರ್ಷಗಳಲ್ಲಿ 5G ದೇಶದ ಬಹುತೇಕ ಎಲ್ಲಾ ಭಾಗಗಳನ್ನು ತಲುಪಲಿದೆ" ಎಂದು ವೈಷ್ಣವ್ ಹೇಳಿದರು.

ನಿಮ್ಮ ಮೊಬೈಲ್ 5Gಗೆ ಬೆಂಬಲಿಸುತ್ತಾ? ಹೇಗೆ ತಿಳಿಯಿರಿನಿಮ್ಮ ಮೊಬೈಲ್ 5Gಗೆ ಬೆಂಬಲಿಸುತ್ತಾ? ಹೇಗೆ ತಿಳಿಯಿರಿ

ಟೆಲಿಕಾಂ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿದ ಸರ್ಕಾರ

ಟೆಲಿಕಾಂ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿದ ಸರ್ಕಾರ

ಟೆಲಿಕಾಂ ಕೇಬಲ್‌ಗಳನ್ನು ಹಾಕುವುದು, ವಿದ್ಯುತ್ ಕಂಬಗಳು ಮತ್ತು ಗಡಿ ಗೋಡೆಗಳಂತಹ ಬೀದಿ ಪೀಠೋಪಕರಣಗಳನ್ನು ಪ್ರವೇಶಿಸುವುದು ಇತ್ಯಾದಿಗಳ ಮೇಲೆ ವಿಧಿಸಬೇಕಾದ ಶುಲ್ಕಗಳನ್ನು ಸ್ಪಷ್ಟಪಡಿಸುವ ಹೊಸ ರೈಟ್ ಆಫ್ ವೇ ನಿಯಮಗಳ ಕುರಿತು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಭಾರತೀಯ ಟೆಲಿಗ್ರಾಫ್ ರೈಟ್ ಆಫ್ ವೇ (ತಿದ್ದುಪಡಿ) ನಿಯಮಗಳು, 2022ರ ಪ್ರಕಾರ, ಟೆಲಿಕಾಂ ಕಂಪನಿಗಳು ಖಾಸಗಿ ಆಸ್ತಿಗಳ ಮೇಲೆ ಕೇಬಲ್‌ಗಳನ್ನು ಹಾಕಲು ಅಥವಾ ಮೊಬೈಲ್ ಟವರ್‌ಗಳು ಅಥವಾ ಕಂಬಗಳನ್ನು ಅಳವಡಿಸಲು ಅಧಿಕಾರಿಗಳಿಂದ ಯಾವುದೇ ಅನುಮೋದನೆಯ ಅಗತ್ಯವಿರುವುದಿಲ್ಲ.

343 ದಿನಗಳ ಬದಲಿಗೆ 22 ದಿನದಲ್ಲೇ ಅನುಮೋದನೆ

343 ದಿನಗಳ ಬದಲಿಗೆ 22 ದಿನದಲ್ಲೇ ಅನುಮೋದನೆ

"ಈ ಹಿಂದೆ RoW ಅನುಮೋದನೆ ಪಡೆದುಕೊಳ್ಳುವುದಕ್ಕೆ 343 ದಿನಗಳು ಆಗುತ್ತಿದ್ದು, ಈಗ ಕೇವಲ 22 ದಿನಗಳಲ್ಲೇ ಅನುಮೋದನೆ ನೀಡಲಾಗುತ್ತದೆ. ಕಳೆದ ಜುಲೈನಲ್ಲಿ ಸರಾಸರಿ ಅನುಮೋದನೆ ದಿನವು 16ಕ್ಕೆ ಇಳಿಕೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡಿರುವ ಸುಧಾರಣೆಗಳ ಸ್ಪಷ್ಟ ಪರಿಣಾಮವಾಗಿ ಗೋಚರಿಸುತ್ತಿದೆ," ಎಂದು ವೈಷ್ಣವ್ ಹೇಳಿದರು.

ಸರ್ಕಾರದ ಅಧಿಸೂಚನೆಯ ಪ್ರಕಾರ, "ಸಣ್ಣ ಸೆಲ್‌ಗಳನ್ನು ಅಳವಡಿಸಲು ಬೀದಿ ಪೀಠೋಪಕರಣಗಳನ್ನು ಬಳಸುವ ಟೆಲಿಕಾಂ ಕಂಪನಿಗಳು ನಗರ ಪ್ರದೇಶಗಳಲ್ಲಿ ವಾರ್ಷಿಕ 300 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ 150 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ ಬೀದಿ ಪೀಠೋಪಕರಣಗಳನ್ನು ಬಳಸಿಕೊಂಡು ಕೇಬಲ್ ಅಳವಡಿಸುವುದಕ್ಕೆ ಟೆಲಿಕಾಂ ಕಂಪನಿಗಳು ವರ್ಷಕ್ಕೆ 100 ರೂಪಾಯಿ ಪಾವತಿಸಬೇಕಾಗುತ್ತದೆ," ಎಂದು ಸಚಿವರು ಹೇಳಿದರು.

ಜೀಪ್ ಆಂಡ್ ಬೆಸ್ಟ್ ದರದಲ್ಲಿ 5ಜಿ ಸೇವೆ!

ಜೀಪ್ ಆಂಡ್ ಬೆಸ್ಟ್ ದರದಲ್ಲಿ 5ಜಿ ಸೇವೆ!

"ಸ್ಪೆಕ್ಟ್ರಮ್‌ನಲ್ಲಿನ ಸುಧಾರಣೆ ಮತ್ತು ROW ವೆಚ್ಚದಲ್ಲಿನ ಕಡಿತವು ಅಂತಿಮವಾಗಿ ಉದ್ಯಮದ ವೆಚ್ಚವನ್ನು ಕಡಿಮೆ ಮಾಡಿದೆ. 5G ಬೆಲೆಗಳನ್ನು ಬಹಳ ಸಮಂಜಸವಾಗಿ ಇರಿಸಿಕೊಳ್ಳಲು ನಾವು ಉದ್ಯಮವನ್ನು ಸ್ಪಷ್ಟವಾಗಿ ವಿನಂತಿಸಿದ್ದೇವೆ. ಇಲ್ಲಿಯವರೆಗೆ ಭಾರತವು ಅತ್ಯಂತ ಕೈಗೆಟುಕುವ ಸೇವೆಗಳನ್ನು ಹೊಂದಿದೆ. ITU ಶ್ರೇಯಾಂಕದ ಪ್ರಕಾರ, ಅದೇ ಪ್ರವೃತ್ತಿಯನ್ನು 5G ಯಲ್ಲಿ ನಿರ್ವಹಿಸಲಾಗುವುದು" ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

ಈ ಕುರಿತು ಕೈಗಾರಿಕೆಯಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ 50,000-60,000 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಲಾಗಿದ್ದು, ಮುಂದಿನ 18-24 ತಿಂಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೂ ಆದ್ಯತೆ ಎಂದ ಸಚಿವ ವೈಷ್ಣವ್

ಗ್ರಾಮೀಣ ಪ್ರದೇಶಗಳಿಗೂ ಆದ್ಯತೆ ಎಂದ ಸಚಿವ ವೈಷ್ಣವ್

"ಟೆಲಿಕಾಂ ಉದ್ಯಮವು ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದು ನಮ್ಮ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ," ಎಂದು ವೈಷ್ಣವ್ ಹೇಳಿದರು.

"ದೇಶವು 5G ತಂತ್ರಜ್ಞಾನಕ್ಕೆ ಸಾಕ್ಷಿಯಾಗಲು ಸಿದ್ಧವಾಗಿರುವುದರಿಂದ, ಭಾರತೀಯ ಟೆಲಿಗ್ರಾಫ್ ರೈಟ್ ಆಫ್ ವೇ (ತಿದ್ದುಪಡಿ) ನಿಯಮಗಳು, 2022 ತಂತ್ರಜ್ಞಾನದ ತ್ವರಿತ ರೋಲ್-ಔಟ್ ಅನ್ನು ಖಚಿತಪಡಿಸುತ್ತದೆ. 5G ಸಕ್ರಿಯಗೊಳಿಸಿದ ಭಾರತದ ಕನಸನ್ನು ನನಸಾಗಿಸುತ್ತದೆ," ಎಂದು ಉದ್ಯಮ ಸಂಸ್ಥೆ COAI ಹೇಳಿದೆ.

ಗತಿಶಕ್ತಿ ಸಂಚಾರ ಪೋರ್ಟಲ್‌ನಲ್ಲಿ 5G RoW ಅರ್ಜಿ ನಮೂನೆಯನ್ನು ಹೊಂದಲು ನಾವು ಉತ್ಸುಕರಾಗಿದ್ದೇವೆ. ಇದು ಡಿಜಿಟಲ್ ಮೂಲಸೌಕರ್ಯದ ಸ್ಥಾಪನಾ ಪ್ರಕ್ರಿಯೆಯನ್ನು ಚುರುಕುಗೊಳಿಸುವುದರ ಸಂಕೇತವಾಗಿದೆ ಎಂದು COAI ಮಹಾನಿರ್ದೇಶಕ ಎಸ್‌ಪಿ ಕೊಚ್ಚರ್ ಹೇಳಿದ್ದಾರೆ.

English summary
5G service will be available in most part of the Indian in 2-3 years, says central minister Ashwini Vaishnaw. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X